AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ಗೌಪ್ಯತೆಗಾಗಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್​ಆ್ಯಪ್

End-to-End Encryption: ಈ ಬಗ್ಗೆ ಮಾಹಿತಿ ನೀಡಿರುವ ಜೂಕರ್ ಬರ್ಗ್, ವಾಟ್ಸ್​ಆ್ಯಪ್ ಬಳಕೆದಾರರು ಗೂಗಲ್ ಡ್ರೈವ್ ಅಥವಾ ಐ ಕ್ಲೌಡ್‌ನಲ್ಲಿ ಬ್ಯಾಕಪ್ ಸಂಗ್ರಹಿಸಲು ಪೂರಕವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ.

WhatsApp: ಗೌಪ್ಯತೆಗಾಗಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್​ಆ್ಯಪ್
WhatsApp
TV9 Web
| Updated By: Vinay Bhat|

Updated on:Sep 11, 2021 | 2:08 PM

Share

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (Facebook) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಖಾಸಗಿತನ ಅಥವಾ ಗೌಪ್ಯತೆ ಹಾಗೂ ಭದ್ರತೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಸದ್ಯ ಇದಕ್ಕೆ ಸಂಬಂಧ ಪಟ್ಟಂತೆ ವಾಟ್ಸ್​ಆ್ಯಪ್ ತನ್ನ ಚಾಟ್ ಬ್ಯಾಕಪ್‌ಗಳಿಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (End-to-End Encryption) ಅನ್ನು ಸೇರಿಸಲು ಮುಂದಾಗಿದೆ. ವಾಟ್ಸ್​ಆ್ಯಪ್ ಈಗಾಗಲೇ ಎಲ್ಲಾ ಸಂದೇಶಗಳು ಮತ್ತು ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ. ಆದರೆ, ಗೂಗಲ್ ಡ್ರೈವ್‌ಗೆ ಮಾಡಿದ ಬ್ಯಾಕಪ್‌ಗಳಿಗೆ ಎನ್‌ಕ್ರಿಪ್ಟ್ ಇರಲಿಲ್ಲ. ಇದರಿಂದ, ಆ ಸಂದೇಶಗಳನ್ನು ಗೂಗಲ್ ಮತ್ತು ಆ ಕಂಪನಿಯ ಉದ್ಯೋಗಿಗಳು ನೋಡಬಹುದಾಗಿತ್ತು. ಸದ್ಯ ಇದನ್ನು ಬದಲಾಯಿಸಲು, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (E2EE) ಬ್ಯಾಕಪ್‌ಗಳನ್ನು ರಚಿಸುವ ಆಯ್ಕೆಯನ್ನು ಸೇರಿಸುವುದಾಗಿ ಘೋಷಣೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜೂಕರ್ ಬರ್ಗ್, ವಾಟ್ಸ್​ಆ್ಯಪ್ ಬಳಕೆದಾರರು ಗೂಗಲ್ ಡ್ರೈವ್ ಅಥವಾ ಐ ಕ್ಲೌಡ್‌ನಲ್ಲಿ ಬ್ಯಾಕಪ್ ಸಂಗ್ರಹಿಸಲು ಪೂರಕವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಪ್ರಕ್ರಿಯೆ ಆರಂಭವಾದಕೂಡಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಬ್ಯಾಕಪ್‌ಗಳನ್ನು ನೀಡುವ ಮೊದಲ ಜಾಗತಿಕ ಸಂದೇಶ ಸೇವೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಆಪರೇಟಿಂಗ್ ಸಿಸ್ಟಂಗಳಲ್ಲಿ ಕೀ ಸ್ಟೋರೇಜ್ ಮತ್ತು ಕ್ಲೌಡ್ ಸ್ಟೋರೇಜ್‌ಗಾಗಿ ಹೊಸ ಫ್ರೇಮ್‌ವರ್ಕ್ ಅಗತ್ಯವಿದೆ. ಇದು ನಿಜವಾಗಿಯೂ ಕಠಿಣ ತಾಂತ್ರಿಕ ಸವಾಲು ಎಂದಿದ್ದಾರೆ.

ವಾಟ್ಸ್‌ಆ್ಯಪ್‌ ಬ್ಯಾಕಪ್‌ಗಳಿಗಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮುಂಬರುವ ವಾರಗಳಲ್ಲಿ ಸ್ಯಾಮ್‌ಸಂಗ್ ಸಾಧನಗಳಿಗೆ (ಮತ್ತು ಇತರ ಆ್ಯಂಡ್ರಾಯ್ಡ್ ಸಾಧನಗಳಿಗೆ) ಲಭ್ಯವಾಗಲಿದೆ. ಇನ್ನು, ಹೆಚ್ಚಿನ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಅಪ್ಲಿಕೇಶನ್ ಹೆಚ್ಚು ಸುರಕ್ಷಿತವಾಗಿದ್ದರೆ, ಕೆಲವು ಸ್ಯಾಮ್‌ಸಂಗ್ ಫೋನ್‌ಗಳಿಗೆ ವರ್ಷದ ಅಂತ್ಯದ ವೇಳೆಗೆ ಕಂಪನಿಯು ಬೆಂಬಲವನ್ನು ಕೈಬಿಡುತ್ತಿರುವುದರಿಂದ, ಕೆಲವರು ಶೀಘ್ರದಲ್ಲೇ ವಾಟ್ಸ್‌ಆ್ಯಪ್‌ಗೆ ಸಂಪೂರ್ಣವಾಗಿ ಪ್ರವೇಶ ಕಳೆದುಕೊಳ್ಳುತ್ತಾರೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಎಂದರೆ ಸಂವಹನ ನಡೆಸುವ ಬಳಕೆದಾರರು ಮಾತ್ರ ಸಂದೇಶಗಳನ್ನು ಓದಬಹುದು. ಇದು ಸಂಭಾವ್ಯ ಕದ್ದಾಲಿಕೆ ತಡೆಯುತ್ತದೆ. ಟೆಲಿಕಾಂ ಪೂರೈಕೆದಾರರಾಗಲಿ, ಇಂಟರ್ನೆಟ್ ಪೂರೈಕೆದಾರರು ಮತ್ತು ಸಂವಹನ ಸೇವೆಯ ಪೂರೈಕೆದಾರರೂ ಸಹ ಬಳಕೆದಾರರ ಸಂಭಾಷಣೆಯನ್ನು ಡೀಕ್ರಿಪ್ಟ್ ಮಾಡಲು ಬೇಕಾದ ಕ್ರಿಪ್ಟೋಗ್ರಾಫಿಕ್ ಕೀಗಳನ್ನು ಪ್ರವೇಶಿಸಲು ಸಾಧ್ಯವಾಗದು.

ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನುವ ಶ್ವೇತಪತ್ರವನ್ನು ಸಹ ವಾಟ್ಸ್​ಆ್ಯಪ್​​ ಬಿಡುಗಡೆ ಮಾಡಿದೆ. ಅದರ ಪ್ರಕಾರ ಬ್ಯಾಕಪ್ ಅನ್ನು ಬಳಕೆದಾರರು ಒದಗಿಸಿದ ಪಾಸ್‌ವರ್ಡ್‌ನೊಂದಿಗೆ ಎನ್‌ಕ್ರಿಪ್ಟ್ ಮಾಡಲಾಗಿದೆ. ಇದು ವಾಟ್ಸ್​ಆ್ಯಪ್​​ ಇಲ್ಲವೇ ಬಳಕೆದಾರರ ಮೊಬೈಲ್ ಡಿವೈಸ್‌ ಕ್ಲೌಡ್ ಪಾಲುದಾರರಿಗೂ ಕೂಡ ತಿಳಿಯುವುದಲ್ಲ ಎಂದು ಹೇಳಿದೆ.

Vivo X70 Pro: ಚೀನಾ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಈ ಸ್ಮಾರ್ಟ್​ಫೋನ್ ತಿಂಗಳಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆ

ನಿಮ್ಮ ಆ್ಯಂಡ್ರಾಯ್ಡ್ ಮೊಬೈಲ್​ನಲ್ಲಿ ಕನ್ನಡದಲ್ಲೇ ಬರೆಯುವುದು ಹೇಗೆ?

(WhatsApp finally announces end-to-end encryption feature for Android iOS users)

Published On - 2:08 pm, Sat, 11 September 21

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ