Samsung Galaxy Unpacked 2023: ಇಂದು ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಸರಣಿ ಬಿಡುಗಡೆ, ವೈಶಿಷ್ಟ್ಯಗಳು ಇಲ್ಲಿವೆ

| Updated By: Rakesh Nayak Manchi

Updated on: Feb 01, 2023 | 4:43 PM

When and Where to Watch Samsung Event 2023: ಪ್ರತಿ ಬಾರಿಯಂತೆ ಈ ಬಾರಿಯೂ ಸ್ಯಾಮ್ಸಂಗ್ ಕಂಪನಿಯು ಏನನ್ನಾದರೂ ಪ್ರಸ್ತುತಪಡಿಸಲಿದೆ. ಈ ಬಾರಿ ಕಂಪನಿಯು ತನ್ನ Samsung Galaxy A23 ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಲಾಗಿದೆ.

Samsung Galaxy Unpacked 2023: ಇಂದು ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಸರಣಿ ಬಿಡುಗಡೆ, ವೈಶಿಷ್ಟ್ಯಗಳು ಇಲ್ಲಿವೆ
Samsung Galaxy
Follow us on

Samsung Galaxy Unpacked Event: ಸ್ಯಾಮ್ಸಂಗ್​ನ ಬಹು ನಿರೀಕ್ಷಿತ ಈವೆಂಟ್ ಗ್ಯಾಲಕ್ಸಿ ಅನಾವರಣ ಕಾರ್ಯಕ್ರಮ ಇಂದು (ಫೆಬ್ರವರಿ 1) ರಾತ್ರಿ 11:30ಕ್ಕೆ ನಡೆಯಲಿದೆ. ಪ್ರತಿ ಬಾರಿಯಂತೆ, ಈ ಬಾರಿಯೂ ಕಂಪನಿಯು ಏನಾದರೂ ಹೊಸತನ್ನು ಪ್ರಸ್ತುತಪಡಿಸಲಿದೆ. ಈ ಬಾರಿ ಕಂಪನಿಯು ತನ್ನ Samsung Galaxy A23 ಸರಣಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಅಧಿಕೃತ ಬಿಡುಗಡೆಗೂ ಮುನ್ನವೇ ಮೊಬೈಲ್​ಗಳಿಗೆ ಸಂಬಂಧಿಸಿದ ಪೋಸ್ಟರ್ ವೈರಲ್ ಆಗಿದೆ. ಇದರಲ್ಲಿ ಇಂದು ಬಿಡುಗಡೆಯಾಗಲಿರುವ ಮೊಬೈಲ್ ಫೋನ್‌ನ ಪ್ರೊಸೆಸರ್ ಅನ್ನು ಬಹಿರಂಗಪಡಿಸಲಾಗಿದೆ.

MySmartPrice ವರದಿಯ ಪ್ರಕಾರ, ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಅನ್ನು Samsung Galaxy S23 ಸರಣಿಯಲ್ಲಿ ನೀಡಬಹುದೆಂದು ಈ ಪೋಸ್ಟರ್‌ನಲ್ಲಿ ತೋರಿಸಲಾಗಿದೆ. ಅದೇ ಸಮಯದಲ್ಲಿ, ಜನಪ್ರಿಯ ಆಂಡ್ರಾಯ್ಡ್ ಮೊಬೈಲ್ ಗೇಮ್ ರೆಕ್‌ಫೆಸ್ಟ್ (ಕಾರ್ ಗೇಮ್) ಅನ್ನು ಈ ಮೊಬೈಲ್​ನಲ್ಲಿ ಸೇರಿಸಬಹುದು ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, Samsung Galaxy S23 Ultra ದಲ್ಲಿ 6.8-ಇಂಚಿನ QHD + Amoled ಡಿಸ್​​ಪ್ಲೇ ನೀಡಬಹುದು. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿರಲಿದೆ. ಇದಲ್ಲದೇ 200MP ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಬಹುದು. ಈ ಫೋನ್‌ಗಳು 5,000mAh ಬ್ಯಾಟರಿಯೊಂದಿಗೆ ಬರಲಿದ್ದು, ಇದನ್ನು 45W ವೇಗದ ಚಾರ್ಜಿಂಗ್ ಸಹಾಯದಿಂದ ಚಾರ್ಜ್ ಮಾಡಬಹುದು.

ಇದನ್ನೂ ಓದಿ: JIO-Vi-Airtel: 365 ದಿನಗಳ ವ್ಯಾಲಿಡಿಟಿ ಹೊಂದಿರುವ ಬೆಸ್ಟ್ ಯೋಜನೆಗಳು ಇಲ್ಲಿದೆ ನೋಡಿ

ಇದಲ್ಲದೆ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ Galaxy 23 ಮತ್ತು Galaxy S23 Plus ನಲ್ಲಿ ಲಭ್ಯವಿರುತ್ತದೆ. ಇದು 50MP ಮುಖ್ಯ ಲೆನ್ಸ್, 12MP ಅಲ್ಟ್ರಾ ವೈಡ್ ಮತ್ತು 10MP ಟೆಲಿಫೋಟೋ ಸಂವೇದಕವನ್ನು ಹೊಂದಿರುತ್ತದೆ. ಆದರೆ ಸೆಲ್ಫಿ ಕ್ಯಾಮೆರಾವು 12MP ಇರಲಿದೆ. Samsung Galaxy S23 Plus 6.6-ಇಂಚಿನ HD Plus AMOLED ಡಿಸ್​ಪ್ಲೇ ಹೊಂದಿರಲಿದೆ. ಆದರೆ ಗ್ಯಾಲಕ್ಸಿ S23 6.1-ಇಂಚಿನ ಸ್ಕ್ರೀನ್​ನೊಂದಿಗೆ ಬರಲಿದೆ.

Galaxy S23 3900mAh ಬ್ಯಾಟರಿಯನ್ನು ಹೊಂದಿರುತ್ತದೆ, ಇದು 25W ವೇಗದ ಚಾರ್ಜಿಂಗ್ ಸಹಾಯದಿಂದ ಚಾರ್ಜ್ ಮಾಡಬಹುದು. ಮಾತ್ರವಲ್ಲದೆ, ಸರಣಿಯ ಮಧ್ಯದ ಮಾದರಿ ಅಂದರೆ Galaxy S23 Plus ಫೋನ್ 4700mAh ಬ್ಯಾಟರಿಯೊಂದಿಗೆ 45W ವೇಗದ ಚಾರ್ಜಿಂಗ್ ಸಹಾಯದಿಂದ ಚಾರ್ಜ್ ಮಾಡಬಹುದು. ಈ ಮೂರು ಮೊಬೈಲ್​ಗಳು ತಿಳಿ ನೀಲಿ, ವೈನ್ ಬಣ್ಣ, ಗ್ರೇ ಬಣ್ಣಗಳಲ್ಲಿ ಬರಲಿವೆ.

ವರದಿಗಳ ಪ್ರಕಾರ, Samsung Galaxy S23 ಸರಣಿಯ ಆರಂಭಿಕ ಬೆಲೆ ಸುಮಾರು 60 ರಿಂದ 70 ಸಾವಿರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮೂಲ ಬೆಲೆಯ ಬಗ್ಗೆ ಮಾಹಿತಿ ಬಿಡುಗಡೆ ಸಮಯದಲ್ಲಿ ಮಾತ್ರ ತಿಳಿದುಬರಲಿದೆ. ಮಾಧ್ಯಮ ವರದಿಗಳ ಪ್ರಕಾರ, ಇಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ವಿಶೇಷ ಆನ್‌ಲೈನ್ ಪಾಲುದಾರರಾಗುವ ನಿರೀಕ್ಷೆಯಿದೆ.

ಹೆಚ್ಚು ಪ್ರಚಾರ ಮಾಡಲಾದ ಈವೆಂಟ್ ಅನ್ನು ಟೆಕ್ ದೈತ್ಯನ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ . ಲೈವ್ ಈವೆಂಟ್‌ಗಾಗಿ ನೀವು Samsung ಇಂಡಿಯಾದ ಅಧಿಕೃತ YouTube, Twitter, Facebook ಮತ್ತು Instagram ಅಧಿಕೃತ ಖಾತೆಗೆ ಭೇಟಿ ನೀಡಬಹುದು.

ತಂತ್ರಜ್ಞಾನದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Wed, 1 February 23