
ಬೆಂಗಳೂರು (ಮೇ. 03): ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ (Smartphones) ಬೇಡಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ, ವಿವೋ ಮತ್ತೊಮ್ಮೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಮಾರ್ಚ್‌ನಲ್ಲಿ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಚೀನಾದ ಬ್ರ್ಯಾಂಡ್ ವಿವೋ ಶೇ. 22 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, ಮತ್ತೊಂದು ಚೀನೀ ಬ್ರ್ಯಾಂಡ್ ಶಿಯೋಮಿ ಈ ಬಾರಿ ಕೂಡ ಹಿಂದುಳಿದಿದೆ. ಹಲವು ವರ್ಷಗಳಿಂದ ಭಾರತವನ್ನು ಆಳುತ್ತಿದ್ದ ಶಯೋಮಿ ಕಂಪನಿಯ ಮಾರುಕಟ್ಟೆ ಪಾಲು ಈಗ ಕೇವಲ ಶೇ. 13 ಕ್ಕೆ ಇಳಿದಿದೆ.
ಕೌಂಟರ್‌ಪಾಯಿಂಟ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಹಳ ಕಡಿಮೆ ಹೊಸ ಸಾಧನಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಹಳೆಯ ಸಾಧನಗಳನ್ನು ಸಹ ಕಡಿಮೆ ರವಾನಿಸಲಾಗಿದೆ. ಇದರಿಂದಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 7 ರಷ್ಟು ಭಾರಿ ಕುಸಿತ ಕಂಡುಬಂದಿದೆ.
ವರದಿಯ ಪ್ರಕಾರ, ಈ ತ್ರೈಮಾಸಿಕದಲ್ಲಿ ವಿವೋ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದೆ. ಕಂಪನಿಯ ಮಾರುಕಟ್ಟೆ ಪಾಲು ಶೇ. 22 ರಷ್ಟಿದೆ. ಈ ಮೂಲಕ ವಿವೋ ಸಾಗಣೆಗಳು ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಕಂಪನಿಯ ಮಾರುಕಟ್ಟೆ ಪಾಲು ಶೇ. 19 ರಷ್ಟಿತ್ತು. ಅದೇ ಸಮಯದಲ್ಲಿ, ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್‌ಸಂಗ್ ಶೇ. 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಒಪ್ಪೋ ಮಾರುಕಟ್ಟೆ ಪಾಲು ಶೇ. 15 ರಷ್ಟಿದ್ದು, ಈ ಅವಧಿಯಲ್ಲಿ ಚೀನಾದ ಕಂಪನಿ ಮೂರನೇ ಸ್ಥಾನದಲ್ಲಿದೆ.
Tech Tips: ಡೇಟಾ ಪ್ಯಾಕ್ ಹಾಕಿದ್ದರೂ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಈ ಸೆಟ್ಟಿಂಗ್ಸ್ ಮಾಡಿ
ಕಳೆದ ವರ್ಷ, ಶಿಯೋಮಿ ವಿವೋ ಜೊತೆ ಹೆಗಲಿಗೆ ಹೆಗಲು ಕೊಟ್ಟು ಪೈಪೋಟಿ ನಡೆಸಿ ಮೊದಲ ತ್ರೈಮಾಸಿಕದಲ್ಲಿ ಶೇ. 19 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿತು. ಈ ವರ್ಷ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಚೀನೀ ಬ್ರ್ಯಾಂಡ್‌ನ ಮಾರುಕಟ್ಟೆ ಪಾಲು ಕೇವಲ ಶೇ. 13 ಕ್ಕೆ ಇಳಿದಿದೆ. ಈ ರೀತಿಯಾಗಿ, ಶಿಯೋಮಿ ಮಾರುಕಟ್ಟೆ ಪಾಲಿನಲ್ಲಿ ನಾಲ್ಕನೇ ಸ್ಥಾನವನ್ನು ತಲುಪಿದೆ. ರಿಯಲ್ ಮಿ ಮಾರುಕಟ್ಟೆ ಪಾಲು ಶೇ. 1 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಂಪನಿಯು ಶೇ. 11 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿ ಐದನೇ ಸ್ಥಾನದಲ್ಲಿ ಉಳಿಯಿತು. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಮಿ ಮಾರುಕಟ್ಟೆ ಪಾಲು ಶೇ. 10 ರಷ್ಟಿತ್ತು.
ಭಾರತದಲ್ಲಿ ಐಫೋನ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಆಪಲ್ ವರ್ಷದಿಂದ ವರ್ಷಕ್ಕೆ ಶೇ. 29 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆಪಲ್ ಪ್ರೀಮಿಯಂ ವಿಭಾಗದಲ್ಲಿ ಪ್ರಾಬಲ್ಯ ಮುಂದುವರಿಸಿದೆ. ಈ ವಿಭಾಗದಲ್ಲಿ ಆಪಲ್‌ನ ಮಾರುಕಟ್ಟೆ ಪಾಲು ಶೇ. 26 ರಷ್ಟಿದೆ. ಇದಲ್ಲದೆ, ನಥಿಂಗ್ ನ ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಿದೆ. ಲಂಡನ್ ಮೂಲದ ಈ ಕಂಪನಿಯು ವರ್ಷದಿಂದ ವರ್ಷಕ್ಕೆ ಶೇ. 156 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದಲ್ಲದೆ, ಮೊಟೊರೊಲಾ ವರ್ಷದಿಂದ ವರ್ಷಕ್ಕೆ ಶೇ. 59 ರಷ್ಟು ಪ್ರಾಬಲ್ಯ ಸಾಧಿಸಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ