ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಖಾತೆ ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದರಲ್ಲಿ ಇನ್ಸ್ಟಾಗ್ರಾಮ್ (Instagram) ಖಾತೆಗಳನ್ನು ಹ್ಯಾಕ್ ಮಾಡುವುದು ಕೂಡ ಕಂಡು ಬರುತ್ತಿದೆ. ಮೆಟಾ ಈ ಬಗ್ಗೆ ಮೇಲ್ ಮಾಡಿ ಬಳಕೆದಾರರನ್ನು ಎಚ್ಚರಿಸುತ್ತಲೇ ಇರುತ್ತದೆ. ಒಂದುವೇಳೆ ಖಾತೆ ಹ್ಯಾಕ್ ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮರುಪಡೆಯುವುದು ಸುಲಭದ ಕೆಲಸವಲ್ಲ. ಇದು ನಿಮಗೆ ಸಂಭವಿಸುವುದನ್ನು ತಡೆಯಲು, ನಿಮ್ಮ ಖಾತೆಯು ಎಲ್ಲೆಲ್ಲಿ ಲಾಗ್ ಇನ್ ಆಗಿದೆ ಎಂಬುದನ್ನು ತಿಳಿಯುವುದು ಮುಖ್ಯ.
ನಿಮ್ಮ ಇನ್ಸ್ಟಾಗ್ರಾಮ್ ಖಾತೆಯು ಅಪರಿಚಿತ ಸಾಧನದಲ್ಲಿ ರನ್ ಆಗುತ್ತಿದ್ದರೆ, ತಕ್ಷಣವೇ ಅದನ್ನು ಲಾಗ್ ಔಟ್ ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ಖಾತೆಯಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಸಹ ಬದಲಾಯಿಸಬೇಕಾಗುತ್ತದೆ.
10,000 ರೂ. ಒಳಗಿನ ಸೂಪರ್ ಸ್ಮಾರ್ಟ್ಫೋನ್ಸ್: ಈ ಪ್ರೇಮಿಗಳ ದಿನಕ್ಕೆ ಇದೇ ಬೆಸ್ಟ್ ಗಿಫ್ಟ್
ಮೊದಲಿಗೆ ನೀವು ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ಹೋಗಿ ಮತ್ತು “ಸೆಟ್ಟಿಂಗ್‌ಗಳು” ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ “ಭದ್ರತೆ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು “ಲಾಗಿನ್ ಚಟುವಟಿಕೆ” ಮೇಲೆ ಕ್ಲಿಕ್ ಮಾಡಿ. ನಿಮ್ಮ ಖಾತೆಗೆ ಲಾಗ್ ಇನ್ ಆಗಿರುವ ಎಲ್ಲಾ ಸಾಧನಗಳು ಮತ್ತು ಸ್ಥಳಗಳ ಪಟ್ಟಿಯನ್ನು ಇದು ನಿಮಗೆ ತೋರಿಸುತ್ತದೆ. ನೀವು ಇನ್ಸ್ಟಾಗ್ರಾಮ್ ಅನ್ನು ಬಳಸದ ಸಾಧನ ಅಥವಾ ಸ್ಥಳವನ್ನು ಗಮನಿಸಿದರೆ, ನಿಮ್ಮ ಅನುಮತಿಯಿಲ್ಲದೆ ಬೇರೊಬ್ಬರು ನಿಮ್ಮ ಖಾತೆಯನ್ನು ಉಪಯೋಗಿಸುತ್ತಿರುವ ಸಾಧ್ಯತೆಯಿದೆ.
ನಿಮ್ಮ ಅನುಮತಿಯಿಲ್ಲದೆ ಬೇರೊಬ್ಬರು ನಿಮ್ಮ ಖಾತೆಯನ್ನು ಉಪಯೋಗಿಸುತ್ತಿರುವ ಅನುಮಾನ ನಿಮಗೆ ಇದ್ದರೆ ಪಾಸ್‌ವರ್ಡ್ ಅನ್ನು ಬದಲಾಯಿಸುವ ಮೂಲಕ ಹೆಚ್ಚುವರಿ ಭದ್ರತೆಯನ್ನು ಪಡೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾರಾದರೂ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದಾಗ, ಪಾಸ್‌ವರ್ಡ್ ಇಲ್ಲದೆ ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ.
ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ
ಇನ್ನು ಟು-ಸ್ಟೆಪ್ ವೆರಿಫಿಕೇಷನ್ ಸಕ್ರಿಯಗೊಳಿಸುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಸಬಹುದು. ಹೀಗೆ ಮಾಡಿದರೆ ನಿಮ್ಮ ಖಾತೆಗೆ ಲಾಗ್ ಇನ್ ಆಗಲು ಪ್ರಯತ್ನಿಸಿದಾಗ ಫೋನ್‌ಗೆ OTP ಬರುತ್ತದೆ. ಅದನ್ನು ನಮೋದಿಸಿದರೆ ಮಾತ್ರ ಮುಂದುವರೆಯಲು ಸಾಧ್ಯವಾಗುತ್ತಿದೆ.
ಅಂತೆಯೆ ನಿಮ್ಮ ಖಾತೆಗೆ ನೀವು ಬಲವಾದ ಪಾಸ್‌ವರ್ಡ್ ಅನ್ನು ರಚಿಸಬೇಕು. ಖಾತೆಯನ್ನು ಸುರಕ್ಷಿತವಾಗಿಡುವ ಮಾರ್ಗವೆಂದರೆ ಅದಕ್ಕೆ ಬಲವಾದ ಪಾಸ್‌ವರ್ಡ್ ಹಾಕುವುದು. ಇದು ಕನಿಷ್ಠ 12 ಅಕ್ಷರಗಳನ್ನು ಒಳಗೊಂಡಿರಬೇಕು. ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳಿಂದ ಕೂಡಿರಬೇಕು.
ನಿಮ್ಮ ಖಾತೆಯಲ್ಲಿನ ಯಾವುದೇ ಬದಲಾವಣೆಗಳನ್ನು ಪರಿಶೀಲಿಸಿ, ಉದಾಹರಣೆಗೆ ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಬಯೋ ಬದಲಾವಣೆಗಳು. ನೀವು ಮಾಡದ ಬದಲಾವಣೆಯನ್ನು ಕಂಡಿರೆ, ನಿಮ್ಮ ಖಾತೆಯನ್ನು ಬೇರೊಬ್ಬರು ನಿಯಂತ್ರಿಸುತ್ತಿದ್ದಾರೆ ಎಂದರ್ಥ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Mon, 12 February 24