ಇಂಟರ್ನೆಟ್ ಇಲ್ಲದೆ ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಈಗ ಬಂದೊದಗಿದೆ. ನೆಟ್ ಇಲ್ಲದಿದ್ರೆ ಕೆಲವು ಉದ್ದೇಶಗಳಿಗಾಗಿ ಮಾತ್ರ ಸ್ಮಾರ್ಟ್‌ಫೋನ್ ಬಳಸಬಹುದು. ಅದೇ ಸಮಯದಲ್ಲಿ, ಮೊಬೈಲ್ ರೀಚಾರ್ಜ್ ಯೋಜನೆಯ ಬೆಲೆ ಕೂಡ ಇಂದು ಗಗನಕ್ಕೇರಿದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನಲ್ಲಿ ಡೇಟಾ ಬಳಕೆಯ ಬಗ್ಗೆ ಜಾಗರೂಕರಾಗಿರುವುದು ಇನ್ನಷ್ಟು ಮುಖ್ಯವಾಗುತ್ತದೆ. ಹಾಗೆಯೆ ಫೋನ್‌ನಲ್ಲಿ ಡೇಟಾ ಬಳಕೆಯ ಬಗ್ಗೆ ಮಾಹಿತಿಯನ್ನು ಹೊಂದಿರುವುದು ಡೇಟಾವನ್ನು ಸರಿಯಾಗಿ ಬಳಸಲು ಸಹಾಯ ಮಾಡುತ್ತದೆ.
ನಿಮ್ಮ ಫೋನ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಹೆಚ್ಚು ಡೇಟಾವನ್ನು ಬಳಸುತ್ತವೆ ಎಂಬುದನ್ನು ನೀವೇ ಕಂಡುಹಿಡಿಯಬಹುದು. ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಹೆಚ್ಚು ಡೇಟಾ ಸೇವಿಸುವ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.
ಫೋನ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಹೆಚ್ಚು ಮೊಬೈಲ್ ಡೇಟಾವನ್ನು ಬಳಸುತ್ತಿವೆ?:
ಯಾವ ಸಾಮಾಜಿಕ ತಾಣ ಅಪ್ಲಿಕೇಶನ್‌ಗಳು ಫೋನ್ ಡೇಟಾವನ್ನು ಬಳಸುತ್ತವೆ?:
ನಿಮ್ಮ ಫೋನ್‌ನಲ್ಲಿ ನೀವು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದರೆ, ನೀವು ಖಂಡಿತವಾಗಿಯೂ ಈ ಅಪ್ಲಿಕೇಶನ್ ಅನ್ನು ಪಟ್ಟಿಯ ಮೇಲ್ಭಾಗದಲ್ಲಿ ಕಾಣಬಹುದು. ಫೋನ್‌ನಲ್ಲಿ ಲಭ್ಯವಿರುವ ಹೆಚ್ಚಿನ ಡೇಟಾವನ್ನು ವಾಟ್ಸ್ಆ್ಯಪ್ ಬಳಸುತ್ತದೆ. ಇದಲ್ಲದೆ, ಇನ್ಸ್ಟಾಗ್ರಾಮ್ ಕೂಡ ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು. ಇಂದು ಹೆಚ್ಚಿನ ಜನರು ಈ ಎರಡು ಆ್ಯಪ್ ಅನ್ನು ಪ್ರತಿ ಗಂಟೆ ಕನಿಷ್ಠ 5-8 ಬಾರಿ ತೆರೆದು ಉಪಯೋಗಿಸುತ್ತಾರೆ. ಇವುಗಳ ಜೊತೆಗೆ ಹಾಟ್ಸ್ಟಾರ್ ಮತ್ತು ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್‌ಗಳು ಫೋನ್‌ನಲ್ಲಿ ಹೆಚ್ಚಿನ ಡೇಟಾವನ್ನು ಬಳಸುತ್ತವೆ.
Tech Tips: ವಾಟ್ಸ್ಆ್ಯಪ್ನಲ್ಲಿ ಬಂದ ವಾಯ್ಸ್ ಮೆಸೇಜ್ ಅನ್ನು ಟೆಕ್ಟ್ಸ್ ರೂಪದಲ್ಲಿ ನೋಡೋದು ಹೇಗೆ?
ಹಾಗೆಯೆ ಕೆಲವು ಸುಲಭವಾದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಡೇಟಾವನ್ನು ಖರ್ಚು ಮಾಡದಂತೆ ಉಳಿಸಬಹುದು. ಡೇಟಾವನ್ನು ತ್ವರಿತವಾಗಿ ಖಾಲಿ ಮಾಡಲು ಗೂಗಲ್ ಪ್ಲೇ ಸ್ಟೋರ್ ಸಹ ಒಂದು ಪ್ರಮುಖ ಕಾರಣವಾಗಿದೆ. ಆಟೋ ಅಪ್‌ಡೇಟ್‌ನ ವೈಶಿಷ್ಟ್ಯವು ಕಾಲಕಾಲಕ್ಕೆ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಸ್ವಯಂಚಾಲಿತವಾಗಿ ಅಪ್ಡೇಟ್ ಮಾಡುತ್ತದೆ. ಇದರಿಂದಾಗಿ ಡೇಟಾ ಕೂಡ ಬೇಗನೆ ಖಾಲಿಯಾಗುತ್ತದೆ. ಹೀಗಾಗಿ ಇದನ್ನು ಆಫ್ ಮಾಡಿ.
ಇನ್ನು ಡೇಟಾ ಸೇವರ್ ಮೋಡ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಇದನ್ನು ಬಳಸುವುದರಿಂದ ನಿಮ್ಮ ಡೇಟಾದ ಅತಿಯಾದ ಬಳಕೆಯನ್ನು ನೀವು ತಡೆಯಬಹುದು. ನಿಮ್ಮ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿಯಾಗುತ್ತಿದ್ದರೆ, ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ನಿಮ್ಮ ವಾಟ್ಸ್ಆ್ಯಪ್ ಅಪ್ಲಿಕೇಶನ್. ವಾಟ್ಸ್ಆ್ಯಪ್ನಲ್ಲಿ ಪ್ರತಿದಿನ ಎಷ್ಟೋ ಫೋಟೋಗಳು ಮತ್ತು ವಿಡಿಯೋಗಳನ್ನು ಸ್ವೀಕರಿಸಲಾಗುತ್ತದೆ. ನೀವು ವಾಟ್ಸ್ಆ್ಯಪ್ನಲ್ಲಿ ಅಟೊ ಡೌನ್‌ಲೋಡ್ ಅನ್ನು ಹೊಂದಿಸಿದ್ದರೆ, ಅಗತ್ಯವಿಲ್ಲದ ಫೋಟೋಗಳನ್ನು ಸಹ ಡೌನ್‌ಲೋಡ್ ಮಾಡಲಾಗುತ್ತದೆ. ಹೀಗಾಗಿ ಅಟೊ ಡೌನ್‌ಲೋಡ್ ಅನ್ನು ನಿಷ್ಕ್ರಿಯಗೊಳಿಸಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ