Tech Tips: ನಿಮ್ಮ ಫೋನ್ ಮನುಷ್ಯರಂತೆ ಮಾತನಾಡುತ್ತದೆ: ಈ ಹೊಸ ಆ್ಯಪ್ ಇನ್​ಸ್ಟಾಲ್ ಮಾಡಿ

Google Gemini Live: ಗೂಗಲ್‌ನ ಈ ವೈಶಿಷ್ಟ್ಯವನ್ನು ಜೆಮಿನಿ ಲೈವ್ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ. ಇದು ಕಂಪನಿಯ ಬಹುನಿರೀಕ್ಷಿತ ಪ್ರಾಜೆಕ್ಟ್ ಅಸ್ಟ್ರಾದ ಭಾಗವಾಗಿದೆ. ಗೂಗಲ್ ಈ ವೈಶಿಷ್ಟ್ಯದ ಮೇಲೆ ಬಹಳ ಸಮಯದಿಂದ ಕೆಲಸ ಮಾಡುತ್ತಿತ್ತು. ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ಈ ವೈಶಿಷ್ಟ್ಯವನ್ನು ಪ್ರದರ್ಶಿಸಿತ್ತು.

Tech Tips: ನಿಮ್ಮ ಫೋನ್ ಮನುಷ್ಯರಂತೆ ಮಾತನಾಡುತ್ತದೆ: ಈ ಹೊಸ ಆ್ಯಪ್ ಇನ್​ಸ್ಟಾಲ್ ಮಾಡಿ
Gemini Live

Updated on: May 23, 2025 | 4:27 PM

ಬೆಂಗಳೂರು (ಏ. 23): ಈಗ ನಿಮ್ಮ ಫೋನ್ ಮನುಷ್ಯನಂತೆ ನಿಮ್ಮೊಂದಿಗೆ ಮಾತನಾಡುತ್ತದೆ. ಇದಕ್ಕಾಗಿ ನೀವು ಯಾವುದೇ ದುಬಾರಿ ಮತ್ತು ಪ್ರೀಮಿಯಂ ಫೋನ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮೂಲ ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ನೀವು ಗೂಗಲ್​ನ ಈ ಹೊಸ AI ವೈಶಿಷ್ಟ್ಯವನ್ನು ಬಳಸಬಹುದು. ಗೂಗಲ್ ತನ್ನ ವಾರ್ಷಿಕ ಡೆವಲಪರ್‌ಗಳ ಸಮ್ಮೇಳನ ಗೂಗಲ್ I/O 2025 ರಲ್ಲಿ (Google I/O 2025) ಈ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಫೋನ್‌ನಿಂದ ಸಂಭಾಷಣೆಗಳನ್ನು ಮಾಡಬಹುದು. ನಿಮ್ಮ ಫೋನ್‌ನ ಕ್ಯಾಮೆರಾವನ್ನು ಆನ್ ಮಾಡಿ ಅದರಲ್ಲಿ ಗೋಚರಿಸುವ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಗೂಗಲ್‌ನ ಈ ವೈಶಿಷ್ಟ್ಯವನ್ನು ಜೆಮಿನಿ ಲೈವ್ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ. ಇದು ಕಂಪನಿಯ ಬಹುನಿರೀಕ್ಷಿತ ಪ್ರಾಜೆಕ್ಟ್ ಅಸ್ಟ್ರಾದ ಭಾಗವಾಗಿದೆ. ಗೂಗಲ್ ಈ ವೈಶಿಷ್ಟ್ಯದ ಮೇಲೆ ಬಹಳ ಸಮಯದಿಂದ ಕೆಲಸ ಮಾಡುತ್ತಿತ್ತು. ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ಈ ವೈಶಿಷ್ಟ್ಯವನ್ನು ಪ್ರದರ್ಶಿಸಿತ್ತು. ಗೂಗಲ್ ತನ್ನ ಎಕ್ಸ್ ಹ್ಯಾಂಡಲ್ ಮೂಲಕ ಜೆಮಿನಿ ಲೈವ್ ವೈಶಿಷ್ಟ್ಯವು ಮುಂಬರುವ ವಾರದಲ್ಲಿ ಕ್ಯಾಲೆಂಡರ್, ಕೀಪ್ ನೋಟ್ಸ್, ಟಾಸ್ಕ್‌ಗಳು ಮತ್ತು ಮ್ಯಾಪ್‌ಗಳಂತಹ ಹಲವು ಗೂಗಲ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.

ಜೆಮಿನಿ ಲೈವ್ ಬಳಸುವುದು ಹೇಗೆ?

  • ಈ ವೈಶಿಷ್ಟ್ಯವನ್ನು ಬಳಸಲು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಬೇಕು.
  • ಗೂಗಲ್‌ನ ಈ AI ಉಪಕರಣವು ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.
  • ಈ ಆಪ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದನ್ನು ನಿಮ್ಮ ಫೋನ್‌ನಲ್ಲಿ ಸ್ಥಾಪಿಸಿ.
  • ಇದರ ನಂತರ, ಅದಕ್ಕೆ ಕೆಲವು ಅಗತ್ಯ ಅನುಮತಿಗಳನ್ನು ನೀಡಿ, ಬಳಿಕ ಇದು ನಿಮ್ಮೊಂದಿಗೆ ಮಾತನಾಡಲು ಸಿದ್ಧವಾಗುತ್ತದೆ.
  • ನಂತರ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಕೆಳಭಾಗದಲ್ಲಿರುವ ಮೈಕ್ ಪಕ್ಕದಲ್ಲಿರುವ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಆಗ ಜೆಮಿನಿ ಲೈವ್ ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಫೋನ್ ನಿಮ್ಮೊಂದಿಗೆ ಮಾತನಾಡಲು ಸಿದ್ಧವಾಗುತ್ತದೆ.
  • ನಿಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಲು, ಕೆಳಭಾಗದಲ್ಲಿರುವ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಇದಾದ ನಂತರ ನೀವು ಕ್ಯಾಮೆರಾದಲ್ಲಿ ಗೋಚರಿಸುವ ವಸ್ತುವಿನ ಕಡೆಗೆ ಗುರಿ ತೋರಿಸಬೇಕಾಗುತ್ತದೆ.
  • ನಂತರ ನೀವು ಡಿಸ್​ಪ್ಲೇ ಮೇಲೆ ಟ್ಯಾಪ್ ಮಾಡುವ ಮೂಲಕ Google Gemini ನಿಂದ ಅದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

Google I/O 2025: ಬಹುನಿರೀಕ್ಷಿತ ಆಂಡ್ರಾಯ್ಡ್ 16 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್: ಈ ಬಳಕೆದಾರರಿಗೆ ಲಭ್ಯ

ಇದನ್ನೂ ಓದಿ
ಬಹುನಿರೀಕ್ಷಿತ ಆಂಡ್ರಾಯ್ಡ್ 16 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್
ಪಾಸ್‌ವರ್ಡ್ ಹಾಕಿದ್ದರೂ ಅದನ್ನು ನಮೋದಿಸದೆ ಫೋನ್ ಅನ್‌ಲಾಕ್ ಮಾಡುವುದು ಹೇಗೆ?
ಏರ್‌ಟೆಲ್​ನಿಂದ ಬಂಪರ್ ಪ್ಲ್ಯಾನ್: ಫಾರಿನ್ ಟ್ರಿಪ್ ಹೋದ್ರು ಟೆನ್ಶನ್ ಇರಲ್ಲ
200MP ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭಾರೀ ಇಳಿಕೆ

ಇದರಲ್ಲಿ ನಿಮಗೆ ನೀವು ನಿಮ್ಮ ಫೋನ್‌ನೊಂದಿಗೆ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಅಲ್ಲದೆ ಎಲ್ಲ ವಸ್ತುವಿನ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ವೈಶಿಷ್ಟ್ಯವನ್ನು ಬಳಸಲು, ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇರಬೇಕು. ಇದು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಡೇಟಾದ ಆಧಾರದ ಮೇಲೆ ಕ್ಯಾಮೆರಾದ ಕಡೆಗೆ ತೋರಿಸಲಾದ ವಸ್ತುವಿನ ಬಗ್ಗೆ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.

ಆಂಡ್ರಾಯ್ಡ್ 16 ಬೀಟಾ ಆವೃತ್ತಿ ಬಿಡುಗಡೆ

ಗೂಗಲ್ ತನ್ನ ಗೂಗಲ್ I/O 2025 ರಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 16 ರ ಒಂದು ನೋಟವನ್ನು ಕೂಡ ಪರಿಚಯಿಸಿದೆ. ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಂನಲ್ಲಿ ನೀವು ಹಲವು ಬದಲಾವಣೆಗಳನ್ನು ಕಾಣಬಹುದು. ಕಂಪನಿಯು ವಿಶೇಷವಾಗಿ ಮೊಬೈಲ್ ಇಂಟರ್ಫೇಸ್ ಮತ್ತು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಆಪರೇಟಿಂಗ್ ಸಿಸ್ಟಂನ ಸ್ಥಿರ ಆವೃತ್ತಿಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಅದರ QPR ಬೀಟಾ ಆವೃತ್ತಿಯನ್ನು ಪಿಕ್ಸೆಲ್ ಸಾಧನಗಳಿಗೆ ಹೊರತರಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Fri, 23 May 25