
ಬೆಂಗಳೂರು (ನ. 15): ಪೆನ್ ಡ್ರೈವ್‌ನ (Pendrive) ಪೋರ್ಟ್‌ನ ಬಣ್ಣವನ್ನು ನೀವು ಎಂದಾದರೂ ಗಮನಿಸಿದ್ದೀರಾ? ಇಲ್ಲದಿದ್ದರೆ, ನೀವು ಖಂಡಿತವಾಗಿಯೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಪೋರ್ಟ್‌ನ ಬಣ್ಣವು ಪೆನ್ ಡ್ರೈವ್‌ನ ಬಗ್ಗೆ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸುತ್ತದೆ. ಪೆನ್ ಡ್ರೈವ್‌ನ ಯುಎಸ್ಬಿ ಪೋರ್ಟ್‌ನ ಬಣ್ಣವು ಅದರ ಡೇಟಾ ವರ್ಗಾವಣೆ ವೇಗ ಮತ್ತು ಅದರ ವಿದ್ಯುತ್ ಬಳಕೆಯನ್ನು ಸೂಚಿಸುತ್ತದೆ. ಪೆನ್ ಡ್ರೈವ್‌ನ ಯುಎಸ್ಬಿ ಪೋರ್ಟ್‌ನ ಪ್ರತಿಯೊಂದು ಬಣ್ಣವು ಏನನ್ನು ಸೂಚಿಸುತ್ತದೆ?, ಅದರ ವೇಗ ಎಷ್ಟು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಪೆನ್ ಡ್ರೈವ್ ಅಥವಾ ಲ್ಯಾಪ್‌ಟಾಪ್‌ನ ಯುಎಸ್ಬಿ ಪೋರ್ಟ್‌ನಲ್ಲಿ ಏಳು ಪ್ರಮುಖ ಬಣ್ಣಗಳಿವೆ. ಈ ಬಣ್ಣಗಳು ನೀವು ಸ್ವೀಕರಿಸುತ್ತಿರುವ ವೇಗವನ್ನು ನಿರ್ಧರಿಸಲು ಸಹಾಯ ಮಾಡಬಹುದು.
ಬಿಳಿ ಯುಎಸ್ಬಿ ಪೋರ್ಟ್: ನಿಮ್ಮ ಪೆನ್ ಡ್ರೈವ್ ಅಥವಾ ಲ್ಯಾಪ್‌ಟಾಪ್/ಪಿಸಿಯ ಯುಎಸ್ಬಿ ಪೋರ್ಟ್ ಬಿಳಿ ಬಣ್ಣದಲ್ಲಿದ್ದರೆ, ಅದು ಅತ್ಯಂತ ಹಳೆಯ USB 1.x ಪೋರ್ಟ್ ಆಗಿರುತ್ತದೆ. ನೀವು 12 Mbps ವರೆಗಿನ ವೇಗವನ್ನು ಪಡೆಯಬಹುದು.
ಕಪ್ಪು ಯುಎಸ್ಬಿ ಪೋರ್ಟ್: ಈ ಬಣ್ಣದ ಡ್ರೈವ್‌ಗಳು ಯುಎಸ್ಬಿ 2.0 ಪೋರ್ಟ್‌ಗಳನ್ನು ಹೊಂದಿವೆ. ಅವು 480mbps ವರೆಗೆ ವೇಗವನ್ನು ನೀಡುತ್ತವೆ. ಈ ರೀತಿಯ ಡ್ರೈವ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ.
ಹಳದಿ ಯುಎಸ್ಬಿ ಪೋರ್ಟ್: ಲ್ಯಾಪ್‌ಟಾಪ್‌ಗಳು ಮತ್ತು PC ಗಳಲ್ಲಿ ಈ ಬಣ್ಣದ ಯುಎಸ್ಬಿ ಪೋರ್ಟ್‌ಗಳನ್ನು ನೀವು ಕಾಣಬಹುದು. ಈ ಪೋರ್ಟ್‌ಗಳು ಯಾವಾಗಲೂ ಆನ್ ಆಗಿರುತ್ತವೆ. ಇದರರ್ಥ ನಿಮ್ಮ ಕಂಪ್ಯೂಟರ್ ಆಫ್ ಆಗಿದ್ದರೂ ಸಹ, ಈ ಪೋರ್ಟ್‌ಗೆ ಸಾಧನವನ್ನು ಸಂಪರ್ಕಿಸಿದರೆ, ಅದು ಚಾರ್ಜ್ ಆಗಲು ಪ್ರಾರಂಭಿಸುತ್ತದೆ.
Itel A90: ಕೇವಲ 7,299 ರೂ. ಗೆ ಭಾರತದಲ್ಲಿ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್ಫೋನ್: ಯಾವುದು ನೋಡಿ
ಕಿತ್ತಳೆ ಬಣ್ಣದ ಪೋರ್ಟ್‌ಗಳು: ಈ ಪೋರ್ಟ್‌ಗಳು ಯಾವಾಗಲೂ ಆನ್ ಆಗಿರುತ್ತವೆ ಮತ್ತು ಯುಎಸ್ಬಿ 3.0 ಅನ್ನು ಬೆಂಬಲಿಸುತ್ತವೆ.
ನೀಲಿ ಯುಎಸ್ಬಿ ಪೋರ್ಟ್‌ಗಳು: ನಿಮ್ಮ ಬಳಿ ನೀಲಿ ಯುಎಸ್ಬಿ ಪೋರ್ಟ್ ಹೊಂದಿರುವ ಪೆನ್ ಡ್ರೈವ್ ಇದ್ದರೆ, ಅಥವಾ ನಿಮ್ಮ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ಈ ಬಣ್ಣದ ಯುಎಸ್ಬಿ ಪೋರ್ಟ್ ಇದ್ದರೆ, ಅದು ಸೂಪರ್-ಸ್ಪೀಡ್ ಪೋರ್ಟ್‌ನ ಸಂಕೇತವಾಗಿದೆ. ಈ ಪೋರ್ಟ್‌ಗಳು USB 3.0 ಅನ್ನು ಬೆಂಬಲಿಸುತ್ತವೆ ಮತ್ತು 5Gbps ವರೆಗಿನ ವೇಗವನ್ನು ನೀಡಬಲ್ಲವು.
ಟೀಲ್ ಪೋರ್ಟ್‌ಗಳು: ಈ ಬಣ್ಣದ ಪೋರ್ಟ್‌ಗಳು ಯುಎಸ್ಬಿ 3.1 ಅನ್ನು ಬೆಂಬಲಿಸುತ್ತವೆ ಮತ್ತು 10Gbps ವರೆಗೆ ಡೇಟಾವನ್ನು ವರ್ಗಾಯಿಸಬಹುದು.
ಕೆಂಪು ಪೋರ್ಟ್‌ಗಳು: ಈ ಬಣ್ಣದ ಯುಎಸ್ಬಿ ಪೋರ್ಟ್‌ಗಳು ಅತ್ಯಂತ ಮುಂದುವರಿದ ಮತ್ತು ವೇಗವಾದವು. ಅವು ಯುಎಸ್ಬಿ 3.2 ಅಥವಾ 3.1 Gen 2 ಮಾನದಂಡವನ್ನು ಬೆಂಬಲಿಸುತ್ತವೆ. ಈ ಪೋರ್ಟ್‌ಗಳು 20Gbps ವರೆಗೆ ವೇಗವನ್ನು ನೀಡಬಲ್ಲವು. ಅವುಗಳು ಆಲ್ವೆಸ್ ಆನ್ ವೈಶಿಷ್ಟ್ಯದೊಂದಿಗೆ ಬರುತ್ತವೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ