ನ್ಯೂಯಾರ್ಕ್, ಮೇ 17: ಕಿರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆಗಿರುವ ಟ್ವಿಟ್ಟರ್ (twitter) ಇನ್ಮುಂದೆ ಹೆಸರಿಗೂ ಟ್ವಿಟ್ಟರ್ ಆಗಿರುವುದಿಲ್ಲ. ಎಕ್ಸ್ ಎಂದು ರೀಬ್ರ್ಯಾಂಡ್ ಆಗಿ ಒಂದು ವರ್ಷದ ಬಳಿಕ ಈಗ ಟ್ವಿಟ್ಟರ್ ಪೂರ್ಣವಾಗಿ ಎಕ್ಸ್ ಆಗಿ ಬದಲಾಗುತ್ತಿದೆ. ಅಂದರೆ ಟ್ವಿಟ್ಟರ್ ಡೊಮೈನ್ ಅನ್ನು ಪೂರ್ಣವಾಗಿ ಎಕ್ಸ್ ಡೊಮೈನ್ಗೆ ಬದಲಾಯಿಸಲಾಗಿದೆ. ಬ್ರೌಸರ್ನಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಎಂದು ಕೊಟ್ಟರೆ ಅದು ಎಕ್ಸ್ ಡಾಟ್ ಕಾಮ್ಗೆ ಹೋಗುತ್ತದೆ. ಸದ್ಯದಲ್ಲೇ ಎಲ್ಲರ ಬ್ರೌಸರ್ಗಳಿಂದ ಟ್ವಿಟ್ಟರ್ ಮಾಯವಾಗಿ ಎಕ್ಸ್ ಪ್ರತ್ಯಕ್ಷವಾಗಲಿದೆ.
ಇಲಾನ್ ಮಸ್ಕ್ ಅವರು ತಮ್ಮ ಎಕ್ಸ್ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಎಲ್ಲಾ ಮುಖ್ಯ ಸಿಸ್ಟಂಗಳು ಎಕ್ಸ್ ಡಾಟ್ ಕಾಮ್ನಲ್ಲಿ ಇವೆ ಎಂದು ಹೇಳಿ ಒಂದು ವಿಶೇಷ ಎಕ್ಸ್ ಲೋಗೊದ ಚಿತ್ರ ಲಗತ್ತಿಸಿದ್ದಾರೆ. ಎಕ್ಸ್ನ ಈಗಿನ ಲೋಗೊ ಬದಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಟ್ವಿಟ್ಟರ್ ಅನ್ನು ಎಕ್ಸ್ ಆಗಿ ರೀಬ್ರ್ಯಾಂಡಿಂಗ್ ಮಾಡಲಾಗಿತ್ತು. ಅದರ ಹಕ್ಕಿಯ ಲೋಗೋವನ್ನೂ ಎಕ್ಸ್ ಆಗಿ ಬದಲಾಯಿಸಲಾಗಿತ್ತು. ಟ್ವೀಟ್ ಎಂಬುದನ್ನು ಎಕ್ಸ್ ಪೋಸ್ಟ್ ಎಂದು ಬದಲಿಸಲಾಯಿತು. ಆದರೆ, ಯುಆರ್ಎಲ್ ಮಾತ್ರ ಟ್ವಿಟ್ಟರ್ ಎಂದೇ ಇತ್ತು. ಮಾಧ್ಯಮಗಳಲ್ಲಿ ವರದಿ ಬರೆಯುವಾಗ ಟ್ವಿಟ್ಟರ್ ಮತ್ತು ಎಕ್ಸ್ ಎರಡನ್ನೂ ಬರೆಯಲಾಗುತ್ತಿತ್ತು. ಈಗ ಟ್ವಿಟ್ಟರ್ಗೆ ಪೂರ್ಣವಾಗಿ ವಿದಾಯ ಹೇಳಲಾಗಿದೆ.
ಇದನ್ನೂ ಓದಿ: ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್
ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಲಕ್ಷಾಂತರ ಕೋಟಿ ರುಪಾಯಿ ತೆತ್ತು ಖರೀದಿ ಮಾಡಿದ್ದಾರೆ. ಶೇ 70ಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಅವರು ಕಂಪನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಆ್ಯಪ್ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಪ್ರೀಮಿಯಮ್ ಸಬ್ಸ್ಕ್ರಿಪ್ಷನ್ ಇತ್ಯಾದಿ ಅನೇಕ ಸರ್ವಿಸ್ಗಳನ್ನು ಸೇರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ