ಮೆಟಾ ಒಡೆತನದ ಪ್ರಸಿದ್ಧ ಮೆಸೇಜ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನ್ನು ಇಂದು ವಿಶ್ವದಲ್ಲಿರುವ ಶೇ. 90 ರಷ್ಟು ಮಂದಿ ಬಳಸುತ್ತಿದ್ದಾರೆ. ಕಾಲ ಕಾಲಕ್ಕೆ ಬಳಕೆದಾರರಿಗೆ ಅನುಕೂಲಕರ ಆಗುವಂತಹ ಫೀಚರ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇನ್ನೊಂದಿಷ್ಟು ಹೊಸ ವೈಶಿಷ್ಟಯಗಳು ವಾಟ್ಸ್ಆ್ಯಪ್ನಲ್ಲಿ ಬರಲಿದ್ದು, ಸದ್ಯ ಟೆಸ್ಟಿಂಗ್ನಲ್ಲಿದೆ. ಆದರೆ ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂತಹ ಒಂದು ಫೀಚರ್ ಬಗ್ಗೆ ಇಂದು ನಾವು ಹೇಳುತ್ತೇವೆ. ನಿಮಗೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ 256 ಜನರಿಗೆ ಮೆಸೇಜ್ ಕಳುಹಿಸುವುದು ಹೇಗೆ ಎಂದು ತಿಳಿದಿದೆಯೇ?.
ಈ ಆಯ್ಕೆ ನಿಮಗೆ ದೈನಂದಿನ ಚಟುವಟಿಕೆಗೆ ಅಗತ್ಯವಿಲ್ಲದರಿಬಹುದು. ಆದರೆ ನೀವು ಒಂದೇ ಮೆಸೇಜ್ ಅನ್ನು ಅನೇಕ ಜನರಿಗೆ ಕಳುಹಿಸಬೇಕು ಎಂದು ಭಾವಿಸೋಣ, ನೀವು ಪ್ರತಿಯೊಬ್ಬರ ಚಾಟ್‌ಗಳನ್ನು ಒಂದೊಂದಾಗಿ ತೆರೆದು ನಂತರ ಸಂದೇಶವನ್ನು ಕಳುಹಿಸುತ್ತೀರಾ?. ನೀವು ಇದನ್ನು ಸಹ ಮಾಡಬಹುದು, ಆದರೆ ಈ ಪ್ರಕ್ರಿಯೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ನೀವು ಕಡಿಮೆ ಸಮಯದಲ್ಲಿ ಎಲ್ಲರಿಗೂ ಒಂದೇ ಬಾರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗುವಂತಹ ಒಂದು ಆಯ್ಕೆ ವಾಟ್ಸ್ಆ್ಯಪ್ನಲ್ಲಿದೆ. ಇದಕ್ಕಾಗಿ ನೀವು ಕೇವಲ ಒಂದು ಸಣ್ಣ ಟ್ರಿಕ್ ಅನ್ನು ತಿಳಿದಿರಬೇಕು.
ಬಳಕೆದಾರರ ಅನುಕೂಲಕ್ಕಾಗಿ ಬ್ರಾಡ್ಕಾಸ್ಟ್ ಲಿಸ್ಟ್ಗಳ ವೈಶಿಷ್ಟ್ಯವು ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಗ್ರೂಪ್ ಕ್ರಿಯೇಟ್ ಮಾಡದೇ ಏಕಕಾಲದಲ್ಲಿ 256 ಜನರಿಗೆ ಸಂದೇಶಗಳನ್ನು ಕಳುಹಿಸಲು ಈ ವೈಶಿಷ್ಟ್ಯವು ನಿಮಗೆ ಅನುಮತಿಸುತ್ತದೆ. ಹೊಸ ಬ್ರಾಡ್‌ಕಾಸ್ಟ್ ಲಿಸ್ಟ್ ಅನ್ನು ರಚಿಸಲು, ನೀವು ವಾಟ್ಸ್ಆ್ಯಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಇದರ ನಂತರ ನೀವು ಹೊಸ ಬ್ರಾಡ್‌ಕಾಸ್ಟ್ ವೈಶಿಷ್ಟ್ಯವನ್ನು ನೋಡುತ್ತೀರಿ, ಈ ವೈಶಿಷ್ಟ್ಯದ ಮೇಲೆ ಕ್ಲಿಕ್ ಮಾಡಿ.
ಹೊಸ ಬ್ರಾಡ್‌ಕಾಸ್ಟ್ ಟ್ಯಾಪ್ ಮಾಡಿದ ನಂತರ, ನೀವು ಪಟ್ಟಿಗೆ ಸೇರಿಸಲು ಬಯಸುವ ಕಾಂಟೆಕ್ಟ್ಗಳನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ. ಒಂದು ಪಟ್ಟಿಯಲ್ಲಿ ನೀವು ಗರಿಷ್ಠ 256 ಸಂಪರ್ಕಗಳನ್ನು ಸೇರಿಸಬಹುದು ಎಂಬುದನ್ನು ಗಮನಿಸಿ. ಸದಸ್ಯರನ್ನು ಸೇರಿಸಿದ ನಂತರ, ನಿಮ್ಮ ಆಯ್ಕೆಯ ಪ್ರಕಾರ ನೀವು ಬ್ರಾಡ್‌ಕಾಸ್ಟ್ ಲಿಸ್ಟ್ ಅನ್ನು ಹೆಸರಿಸಬಹುದು. ಬ್ರಾಡ್‌ಕಾಸ್ಟ್ ಲಿಸ್ಟ್ ಅನ್ನು ರಚಿಸಿದ ನಂತರ, ನೀವು ಎಲ್ಲರಿಗೂ ಏಕಕಾಲದಲ್ಲಿ ಕಳುಹಿಸಲು ಬಯಸುವ ಸಂದೇಶವನ್ನು ಈ ಪಟ್ಟಿಯಲ್ಲಿ ಸೇರಿಸಬೇಕು.
ನೀವು ಏಕಕಾಲದಲ್ಲಿ ಸಂದೇಶಗಳನ್ನು ಕಳುಹಿಸಲು ಬಯಸುವ ನಿಮ್ಮ ಸಂಪರ್ಕಗಳನ್ನು ನೀವು ಸೇರಿಸಬಹುದಾದ ವೈಶಿಷ್ಟ್ಯ ಇದಾಗಿದೆ. ನೀವು ಈ ಲಿಸ್ಟ್ಗೆ ಸಂದೇಶವನ್ನು ಕಳುಹಿಸಿದಾಗ, ಸಂದೇಶವು ಪಟ್ಟಿಯಲ್ಲಿರುವ ಎಲ್ಲರಿಗೂ ಏಕಕಾಲದಲ್ಲಿ ತಲುಪುತ್ತದೆ. ಇದು ಗುಂಪಿನಲ್ಲಿ ಅಲ್ಲ ಎಂಬುದನ್ನು ಗಮನಿಸಿ, ಪ್ರತಿಯೊಬ್ಬ ವ್ಯಕ್ತಿಯು ನೀವು ಕಳುಹಿಸಿದ ಸಂದೇಶವನ್ನು ಅವರಿಗೆ ಮಾತ್ರ ಕಳುಹಿಸಿದ್ದೀರಿ ಎಂದು ಭಾವಿಸುತ್ತಾರೆ.
ಸಮಯ ಉಳಿತಾಯ: ಒಂದೇ ಸಂದೇಶವನ್ನು ಒಂದೇ ಬಾರಿಗೆ ಅನೇಕ ಜನರಿಗೆ ಕಳುಹಿಸಬಹುದು. ಜೊತೆಗೆ ಬ್ರಾಡ್‌ಕಾಸ್ಟ್ ಲಿಸ್ಟ್ ಅನ್ನು ರಚಿಸುವುದು ಮತ್ತು ಬಳಸುವುದು ತುಂಬಾ ಸುಲಭವಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ