Xiaomi 13 Pro: 10 ಸಾವಿರ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಶಓಮಿ ಸ್ಮಾರ್ಟ್​ಫೋನ್

Updated on: Apr 15, 2023 | 9:00 AM

ಶಓಮಿ ಹೊಸ ಸರಣಿಯಲ್ಲಿ ಇತ್ತೀಚೆಗೆ ಪರಿಚಯಿಸಿದ್ದ ಶಓಮಿ 13 ಪ್ರೊ ಫೋನ್ ₹10,000 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ. ನೂತನ ಪೋನ್ ಆಫರ್, ವಿವರ ಇಲ್ಲಿದೆ. ಶಓಮಿ 13 ಸರಣಿಯಲ್ಲಿ ಬಿಡುಗಡೆಯಾಗಿರುವ ಶಓಮಿ 13 ಪ್ರೊ, ಶಓಮಿ ಫ್ಯಾನ್ ಫೆಸ್ಟಿವಲ್​ನಲ್ಲಿ ವಿಶೇಷ ಆಫರ್ ದರಕ್ಕೆ ಮಾರಾಟವಾಗುತ್ತಿದೆ.

ಶಓಮಿ ಭಾರತದಲ್ಲಿ ರೆಡ್ಮಿ ಮತ್ತು ಎಂಐ ಬ್ರ್ಯಾಂಡ್ ಅಡಿಯಲ್ಲಿ ವಿವಿಧ ಸ್ಮಾರ್ಟ್​ಫೋನ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈಗ ಎಂಐ ಬದಲು, ಶಓಮಿ ಬ್ರ್ಯಾಂಡ್ ಮೂಲಕವೇ ಹೊಸ ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಶಓಮಿ ಮತ್ತು ರೆಡ್ಮಿ ಫೋನ್​ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ಶಓಮಿ ಪ್ರತಿ ವರ್ಷ ಹೊಸ ಹೊಸ ಸರಣಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಶಓಮಿ ಹೊಸ ಸರಣಿಯಲ್ಲಿ ಇತ್ತೀಚೆಗೆ ಪರಿಚಯಿಸಿದ್ದ ಶಓಮಿ 13 ಪ್ರೊ ಫೋನ್ ₹10,000 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ. ನೂತನ ಪೋನ್ ಆಫರ್, ವಿವರ ಇಲ್ಲಿದೆ. ಶಓಮಿ 13 ಸರಣಿಯಲ್ಲಿ ಬಿಡುಗಡೆಯಾಗಿರುವ ಶಓಮಿ 13 ಪ್ರೊ, ಶಓಮಿ ಫ್ಯಾನ್ ಫೆಸ್ಟಿವಲ್​ನಲ್ಲಿ ವಿಶೇಷ ಆಫರ್ ದರಕ್ಕೆ ಮಾರಾಟವಾಗುತ್ತಿದೆ. ಶಓಮಿ 13 ಪ್ರೊ 12GB RAM + 256GB ಆವೃತ್ತಿಗೆ ₹79,999 ದರವಿದ್ದು, ಲಾಯಲ್ಟಿ ಬೋನಸ್ ಮತ್ತು ಡಿಸ್ಕೌಂಟ್ ಬಳಿಕ ₹69,999ಕ್ಕೆ ಲಭ್ಯವಿದೆ. ಸೆರಾಮಿಕ್ ವೈಟ್ ಮತ್ತು ಸೆರಾಮಿಕ್ ಬ್ಲ್ಯಾಕ್ ಬಣ್ಣದಲ್ಲಿ ದೊರೆಯಲಿದೆ. 6.73 ಇಂಚಿನ 2K OLED ಡಿಸ್​ಪ್ಲೇ ಹೊಂದಿರುವ ಶಓಮಿ 13 ಪ್ರೊ ಫೋನ್, Android 13 ಆಧಾರಿತ MIUI 14 ಓಎಸ್ ಹೊಂದಿದೆ. ಶಓಮಿ 13 ಪ್ರೊ ಫೋನ್​ನಲ್ಲಿ 50+50+50 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಹಾಗೂ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More