
ಸೇಬು ಬೆಲೆ (Gold Diamond Apple) ಗಗನಕ್ಕೇರುತ್ತಿದೆ, ಮಾರುಕಟ್ಟೆಯಲ್ಲಿ ಸೇಬು ಬೆಲೆ ಕೆಜಿಗೆ 100ರಿಂದ 200 ರೂ.ರವರೆಗೆ ಇದೆ. ಈ ಕಾರಣಕ್ಕೆ ಗ್ರಾಹಕರು ಸೇಬು ಖರೀದಿಸಲು ಹಿಂದು – ಮುಂದು ನೋಡುತ್ತಿದ್ದಾರೆ. ಇದರ ಮಧ್ಯೆ ಇಲ್ಲೊಂದು ಸೇಬುಗೆ ಕೋಟಿ ಬೆಲೆ ಬಂದಿದೆ. ಈ ಒಂದು ಸೇಬುಗೆ 10 ಕೋಟಿ ರೂ.ಅಂತೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸೇಬು ನೋಡಿ ಅಚ್ಚರಿಗೊಂಡಿದ್ದಾರೆ. ಒಂದು ಸೇಬು ಇಷ್ಟೊಂದು ದುಬಾರಿಯ ಎಂದು ಯೋಚನೆ ಮಾಡಬೇಡಿ. ಇದು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲ್ಪಟ್ಟ ಆಪಲ್. ಇದನ್ನು ಮುಂಬೈನ ಪ್ರಸಿದ್ಧ ಗೋಲ್ಡ್ ಮ್ಯಾನ್ ಎಂದು ಕರೆಯಲ್ಪಡುವ ರೋಹಿತ್ ಪಿಸಲ್ ಎಂಬುವವರು ಮಾಡಿದ್ದಾರೆ. ಇದೀಗ ಈ ಸೇಬು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
18 ಕ್ಯಾರೆಟ್ ಚಿನ್ನ ಮತ್ತು 9 ಕ್ಯಾರೆಟ್, 36 ಕ್ಯಾರೆಟ್ ವಜ್ರಗಳಿಂದ ತಯಾರಿಸಲ್ಪಟ್ಟ ಸೇಬು ಇದು. ಇದನ್ನು ತಯಾರಿಸಲು 1,396 ಸಣ್ಣ ವಜ್ರದ ತುಂಡುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಹಾಗೂ ತುಂಬಾ ಎಚ್ಚರಿಕೆಯಿಂದ ಜೋಡಿಸಲಾಗಿದೆ. ಇದು ಸುಮಾರು 29.8 ಗ್ರಾಂ ತೂಕವಿದೆ. ಈ ಸೇಬುಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಆಪಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಜತೆಗೆ ವರ್ಲ್ಡ್ ಇಂಟರ್ನ್ಯಾಷನಲ್ ಜೆಮಾಲಜಿಕಲ್ ಇನ್‌ಸ್ಟಿಟ್ಯೂಟ್ ಪ್ರಮಾಣೀಕರಿಸಿದೆ. ಇದರ ಸತ್ಯಾಸತ್ಯತೆ ಮತ್ತು ಮೌಲ್ಯವನ್ನು ಪರಿಶೀಲಿಸಿದೆ. ಇದು ಭಾರತೀಯ ಆಭರಣ ಕಲೆ ಮತ್ತು ನಾವೀನ್ಯತೆಗೆ ಹೆಮ್ಮೆಯ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಿದ ಕಂಪನಿ
ಈ ಸೇಬು ಥೈಲ್ಯಾಂಡ್‌ನ ರಾಜಮನೆತನದ ಕೈ ಸೇರಿದ್ದು, ಥೈಲ್ಯಾಂಡ್‌ನ ರಾಯಲ್ ಪ್ಯಾಲೇಸ್‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಸೇಬುಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಲೇ ಇದೆ. ಭಾರತೀಯ ಕಲಾತ್ಮಕತೆ ಮತ್ತು ಜಾಗತಿಕ ಐಷಾರಾಮಿ ಕರಕುಶಲತೆಯ ಸಂಕೇತವಾಗಿ ನಿಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದರ ಬಗ್ಗೆ ರೋಹಿತ್ ಪಿಸಲ್ ಕೂಡ ಮಾತನಾಡಿದ್ದರೆ, ” ಇದು ಕೇವಲ ಆಭರಣ ಅಲ್ಲ, ಭಾರತೀಯರ ಕಲೆ ಮತ್ತು ಹೆಮ್ಮೆಯನ್ನು ಜಗತ್ತಿನ ಮುಂದೆ ಪ್ರದರ್ಶನ ಮಾಡಲು ಇದನ್ನು ತಯಾರಿಸಿದ್ದೇನೆ” ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Tue, 18 November 25