AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ದೈಹಿಕ ಅಂಗವೈಕಲ್ಯತೆಯನ್ನು ಮೀರಿ ಪ್ರತಿಭೆ ಪ್ರದರ್ಶಿಸಿದ ಕಲಾವಿದರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಸಹಜವಾಗಿಯೇ ಗಮನ ಸೆಳೆಯುತ್ತವೆ. ಇದಕ್ಕೆ ಕಾರಣ ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ದೈಹಿಕ ನ್ಯೂನತೆ ನಡುವೆ ಬದುಕನ್ನು ಪ್ರೀತಿಸುವ ಹಾಗೂ ಕಲೆಯನ್ನು ಆರಾಧಿಸುವ ರೀತಿ ನೋಡಿದ್ರೆ ಖುಷಿಯಾಗುತ್ತದೆ. ವೇದಿಕೆಯ ಮೇಲೆ ವಿಶೇಷಚೇತನರು ಮಹಾಭಾರತದ ಕಥೆಯನ್ನು ನೃತ್ಯದ ರೂಪದಲ್ಲಿ ಪ್ರಸ್ತುತ ಪಡಿಸಿ, ನೋಡುಗರು ಅಚ್ಚರಿ ಪಡುವಂತೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೇದಿಕೆಯನ್ನು ಬಳಸಿಕೊಂಡ ರೀತಿ ಕಂಡು ಅಚ್ಚರಿಯಾಯ್ತು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ದೈಹಿಕ ಅಂಗವೈಕಲ್ಯತೆಯನ್ನು ಮೀರಿ ಪ್ರತಿಭೆ ಪ್ರದರ್ಶಿಸಿದ ಕಲಾವಿದರು
ಪ್ರತಿಭಾನ್ವಿತ ಕಲಾವಿದರುImage Credit source: Instagram
ಸಾಯಿನಂದಾ
|

Updated on:Nov 18, 2025 | 11:44 AM

Share

ಪ್ರತಿಭೆಯಿದ್ದರೆ ದೈಹಿಕ ನ್ಯೂನತೆ (physical disability) ಏನೇ ಇರಲಿ, ಸರಿಯಾದ ವೇದಿಕೆ ಸಿಕ್ಕರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ತಿಳಿದಿರಬೇಕು. ಈಗಾಗಲೇ ದೈಹಿಕ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಕೇಳಿರುತ್ತೀರಿ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ಪ್ರತಿಭಾನ್ವಿತ ಕಲಾವಿದರು (talented artists). ಹೌದು, ದೈಹಿಕ ಅಂಗವೈಕಲ್ಯತೆಯನ್ನು ಬದಿಗಿರಿಸಿ ನೃತ್ಯದ ಮೂಲಕ ಮಹಾಭಾರತದ ಕಥೆಯನ್ನು ಪ್ರಸ್ತುತ ಪಡಿಸಿದ್ದಾರೆ. ಈ ಅತ್ಯದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

books.culture. andjaipur ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ರಾಜಸ್ಥಾನ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದಿಕೆಯನ್ನು ಆಕ್ರಮಿಸಿಕೊಂಡ ಕಲಾವಿದರು. ವೀಲ್‌ಚೇರ್ ನೃತ್ಯ ಪ್ರವರ್ತಕ ಹುಸ್ನೈನ್ ನೇತೃತ್ವದ ನವದೆಹಲಿಯ ಈ ಹೊಸ ನೃತ್ಯ ತಂಡವು, ವಿಕಲಚೇತನರಾದ ಹಿರಿಯ ಅದ್ಭುತ ಪ್ರದರ್ಶಕರನ್ನು ಒಟ್ಟುಗೂಡಿಸಿತು. ನಿಜವಾದ ಪ್ರತಿಭೆಯು ಪ್ರತಿಯೊಂದು ಅಡೆತಡೆಯನ್ನೂ ಮುರಿಯುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಕಲಾವಿದರು ಭರತನಾಟ್ಯದಿಂದ ಹಿಡಿದು ಉತ್ಸಾಹಭರಿತ ಕಥಕ್‌ವರೆಗೆ, ವೀಲ್ ಚೇರ್‌ಗಳು, ಊರುಗೋಲುಗಳು ಮತ್ತು ಸಂಕೇತ ಭಾಷೆಯೊಂದಿಗೆ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಅವರ ಪ್ರದರ್ಶನವು ‘ಅಂಗವೈಕಲ್ಯ’ ಎಂಬ ಪದವು ಸೃಜನಶೀಲತೆ ಅಥವಾ ಚೈತನ್ಯದ ಮೇಲೆ ಯಾವುದೇ ಮಿತಿಗಳನ್ನು ಹೊಂದಿಲ್ಲ ಎನ್ನುವುದನ್ನು ನೆನಪಿಸುತ್ತದೆ. ಭಾರತ ಮಾತ್ರವಲ್ಲ ಈ ಜಗತ್ತಿನ ವೇದಿಕೆಯನ್ನು ಬೆಳಗಿಸಲು ಪ್ರೇರೇಪಿಸಿದ ಈ ಪ್ರಶಸ್ತಿ ವಿಜೇತ ಕಲಾವಿದರಿಗೆ ಅಭಿನಂದನೆಗಳು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ವಿಡಿಯೋದಲ್ಲಿ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ತಮ್ಮೊಳಗಿನ ಪ್ರತಿಭೆಯನ್ನು ನೃತ್ಯದ ಮೂಲಕ ಕಲಾವಿದರು ಪ್ರಸ್ತುತ ಪಡಿಸುತ್ತಿರುವುದನ್ನು ಕಾಣಬಹುದು. ತಮ್ಮಲ್ಲಿರುವ ಕೊರತೆಯೂ ಮುಖಭಾವದಲಿಲ್ಲ. ಪ್ರತಿಭೆ ಹಾಗೂ ಆತ್ಮವಿಶ್ವಾಸ ಈ ಕಲಾವಿದರಲ್ಲಿ ಎದ್ದು ಕಾಣುತ್ತಿದೆ.

ಇದನ್ನೂ ಓದಿ:ದೈಹಿಕ ನ್ಯೂನತೆ ಬದಿಗಿರಿಸಿ ಮೈದಾನದಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕ

ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇವರು ನಿಜವಾದ ಹೀರೋಗಳು ಎಂದಿದ್ದಾರೆ. ಇನ್ನೊಬ್ಬರು ಪ್ರತಿಭೆಗೆ ದೈಹಿಕ ನ್ಯೂನತೆ ಅಡ್ಡಿಯಾಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅತ್ಯದ್ಭುತ ಡ್ಯಾನ್ಸ್ ಪ್ರದರ್ಶನ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Tue, 18 November 25