ಈ ಸೇಬಿಗೆ 10 ಕೋಟಿ ರೂ. ಆದ್ರೆ ಇದನ್ನು ತಿನ್ನಲು ಸಾಧ್ಯವಿಲ್ಲ
ಮುಂಬೈನ 'ಗೋಲ್ಡ್ ಮ್ಯಾನ್' ರೋಹಿತ್ ಪಿಸಲ್ ಅವರು ತಯಾರಿಸಿದ 10 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರಗಳಿಂದ ಕೂಡಿದ ಸೇಬು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 18 ಕ್ಯಾರೆಟ್ ಚಿನ್ನ ಹಾಗೂ 1396 ವಜ್ರಗಳಿಂದ ಅಲಂಕೃತವಾದ ಈ ಸೇಬು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ಭಾರತದ ಕಲಾತ್ಮಕತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಇದು ಹೆಮ್ಮೆಯ ಸಂಕೇತವಾಗಿದೆ.

ಸೇಬು ಬೆಲೆ (Gold Diamond Apple) ಗಗನಕ್ಕೇರುತ್ತಿದೆ, ಮಾರುಕಟ್ಟೆಯಲ್ಲಿ ಸೇಬು ಬೆಲೆ ಕೆಜಿಗೆ 100ರಿಂದ 200 ರೂ.ರವರೆಗೆ ಇದೆ. ಈ ಕಾರಣಕ್ಕೆ ಗ್ರಾಹಕರು ಸೇಬು ಖರೀದಿಸಲು ಹಿಂದು – ಮುಂದು ನೋಡುತ್ತಿದ್ದಾರೆ. ಇದರ ಮಧ್ಯೆ ಇಲ್ಲೊಂದು ಸೇಬುಗೆ ಕೋಟಿ ಬೆಲೆ ಬಂದಿದೆ. ಈ ಒಂದು ಸೇಬುಗೆ 10 ಕೋಟಿ ರೂ.ಅಂತೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸೇಬು ನೋಡಿ ಅಚ್ಚರಿಗೊಂಡಿದ್ದಾರೆ. ಒಂದು ಸೇಬು ಇಷ್ಟೊಂದು ದುಬಾರಿಯ ಎಂದು ಯೋಚನೆ ಮಾಡಬೇಡಿ. ಇದು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲ್ಪಟ್ಟ ಆಪಲ್. ಇದನ್ನು ಮುಂಬೈನ ಪ್ರಸಿದ್ಧ ಗೋಲ್ಡ್ ಮ್ಯಾನ್ ಎಂದು ಕರೆಯಲ್ಪಡುವ ರೋಹಿತ್ ಪಿಸಲ್ ಎಂಬುವವರು ಮಾಡಿದ್ದಾರೆ. ಇದೀಗ ಈ ಸೇಬು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
18 ಕ್ಯಾರೆಟ್ ಚಿನ್ನ ಮತ್ತು 9 ಕ್ಯಾರೆಟ್, 36 ಕ್ಯಾರೆಟ್ ವಜ್ರಗಳಿಂದ ತಯಾರಿಸಲ್ಪಟ್ಟ ಸೇಬು ಇದು. ಇದನ್ನು ತಯಾರಿಸಲು 1,396 ಸಣ್ಣ ವಜ್ರದ ತುಂಡುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಹಾಗೂ ತುಂಬಾ ಎಚ್ಚರಿಕೆಯಿಂದ ಜೋಡಿಸಲಾಗಿದೆ. ಇದು ಸುಮಾರು 29.8 ಗ್ರಾಂ ತೂಕವಿದೆ. ಈ ಸೇಬುಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಆಪಲ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಜತೆಗೆ ವರ್ಲ್ಡ್ ಇಂಟರ್ನ್ಯಾಷನಲ್ ಜೆಮಾಲಜಿಕಲ್ ಇನ್‌ಸ್ಟಿಟ್ಯೂಟ್ ಪ್ರಮಾಣೀಕರಿಸಿದೆ. ಇದರ ಸತ್ಯಾಸತ್ಯತೆ ಮತ್ತು ಮೌಲ್ಯವನ್ನು ಪರಿಶೀಲಿಸಿದೆ. ಇದು ಭಾರತೀಯ ಆಭರಣ ಕಲೆ ಮತ್ತು ನಾವೀನ್ಯತೆಗೆ ಹೆಮ್ಮೆಯ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಿದ ಕಂಪನಿ
ಈ ಸೇಬು ಥೈಲ್ಯಾಂಡ್‌ನ ರಾಜಮನೆತನದ ಕೈ ಸೇರಿದ್ದು, ಥೈಲ್ಯಾಂಡ್‌ನ ರಾಯಲ್ ಪ್ಯಾಲೇಸ್‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಸೇಬುಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಲೇ ಇದೆ. ಭಾರತೀಯ ಕಲಾತ್ಮಕತೆ ಮತ್ತು ಜಾಗತಿಕ ಐಷಾರಾಮಿ ಕರಕುಶಲತೆಯ ಸಂಕೇತವಾಗಿ ನಿಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದರ ಬಗ್ಗೆ ರೋಹಿತ್ ಪಿಸಲ್ ಕೂಡ ಮಾತನಾಡಿದ್ದರೆ, ” ಇದು ಕೇವಲ ಆಭರಣ ಅಲ್ಲ, ಭಾರತೀಯರ ಕಲೆ ಮತ್ತು ಹೆಮ್ಮೆಯನ್ನು ಜಗತ್ತಿನ ಮುಂದೆ ಪ್ರದರ್ಶನ ಮಾಡಲು ಇದನ್ನು ತಯಾರಿಸಿದ್ದೇನೆ” ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Tue, 18 November 25




