ಯುವತಿಯೊಬ್ಬಳು ಸಿಟಿಯಲ್ಲಿ ಹೊಸ ಮನೆ ಖರೀದಿಸಲು 20 ಯುವಕರ ಜೊತೆಗೆ ಪ್ರೇಮದ ನಾಟಕವಾಡಿದ್ದಾಳೆ. 20 ಯುವಕರನ್ನು ತನ್ನ ಬಲೆಗೆ ಬೀಳಿಸಿ ಅವರಿಂದ ದುಬಾರಿ ಬೆಲೆಯ ಐಫೋನ್ಗಳನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾಳೆ. ಬಳಿಕ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು ಲಕ್ಷ ಲಕ್ಷ ಬೆಲೆ ಬಾಳುವ ಬರೋಬ್ಬರಿ 20 ಐಫೋನ್ಗಳನ್ನು ಮಾರಿ ಹೊಸ ಮನೆ ಖರೀದಿಸಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಮೂಲದ ಈ ಯುವತಿಯ ಹೆಸರು Xiaoli. ಸದ್ಯ ಈಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿದೆ. ವಾಸ್ತವವಾಗಿ ಈ ಘಟನೆ 2016ರಲ್ಲಿ ನಡೆದಿದೆ. @tech_grammm ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈಕೆಯ ಕುರಿತು ಹಾಕಲಾದ ಫೋಸ್ಟ್ ಒಂದು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಮೇ 06ರಂದು ಹಂಚಿಕೊಂಡಿರುವ ಈ ಪೋಸ್ಟ್ ಇಲ್ಲಿಯವರೆಗೆ 187,016 ಲೈಕ್ಸ್ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: 8,000 ಕಿಮೀ ದೂರದಿಂದ ರೋಗಿಗೆ ರೋಬೋಟಿಕ್ ಸರ್ಜರಿ ಮಾಡಿದ ವೈದ್ಯರು
ಬಡ ಕುಟುಂಬದಿಂದ ಬಂದ ಈಕೆ ಸ್ವಂತ ಮನೆ ಖರೀದಿಸಲು ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತನ್ನ ಎಲ್ಲ ಐಫೋನ್ಗಳನ್ನು ಭಾರತದ ಕರೆನ್ಸಿಯ ಅಂದಾಜಿನ ಪ್ರಕಾರ 14 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಿ ಡೌನ್ ಪೇಮೆಂಟ್ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ