Telesurgery: 8,000 ಕಿಮೀ ದೂರದಿಂದ ರೋಗಿಗೆ ರೋಬೋಟಿಕ್ ಸರ್ಜರಿ ಮಾಡಿದ ವೈದ್ಯರು
5G ನೆಟ್‌ವರ್ಕ್ ಮತ್ತು ಫೈಬರ್-ಆಪ್ಟಿಕ್ ಸಂಪರ್ಕಗಳ ಸಹಾಯದಿಂದ ಈ ಟೆಲಿಸರ್ಜರಿ ನಡೆಸಲಾಗಿದೆ. ರೋಗಿ ಚೀನಾದ ಬೀಜಿಂಗ್‌ನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ರೋಮ್‌ನಲ್ಲಿ ಕುಳಿತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಚೀನಾದ ಶಸ್ತ್ರಚಿಕಿತ್ಸಕರೊಬ್ಬರು 8,000 ಕಿಮೀ ದೂರದಿಂದ ರೋಗಿಗೆ ರೋಬೋಟಿಕ್ ಸರ್ಜರಿ ಮಾಡಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಮೊದಲ ಬಾರಿಗೆ ನಡೆದಿದೆ. ರೋಗಿ ಚೀನಾದ ಬೀಜಿಂಗ್‌ನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯ ರೋಮ್‌ನಲ್ಲಿ ಕುಳಿತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಈ ರೀತಿಯ ದೂರದ ಕಾರ್ಯಾಚರಣೆಯನ್ನು ಟೆಲಿಸರ್ಜರಿ ಎಂದೂ ಕರೆಯಲಾಗುತ್ತದೆ. 5G ನೆಟ್‌ವರ್ಕ್ ಮತ್ತು ಫೈಬರ್-ಆಪ್ಟಿಕ್ ಸಂಪರ್ಕಗಳ ಸಹಾಯದಿಂದ ಈ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಟೆಲಿಸರ್ಜರಿಯನ್ನು ರಿಮೋಟ್-ನಿಯಂತ್ರಿತ ರೊಬೊಟಿಕ್ ಸಹಾಯದಿಂದ ನಡೆಸಲಾಗುವುದರಿಂದ ಶಸ್ತ್ರಚಿಕಿತ್ಸಕ ಮತ್ತು ರೋಗಿಯು ಒಂದೇ ಸ್ಥಳದಲ್ಲಿರುವ ಅಗತ್ಯವಿಲ್ಲ. ಭವಿಷ್ಯದಲ್ಲಿ ವೈದ್ಯರ ಸೇವೆಯನ್ನು ಎಲ್ಲಿಂದ ಬೇಕಾದರೂ ಪಡೆಯಲು ಈ ಪ್ರಯೋಗ ನೆರವಾಗಿದೆ.
ಇದನ್ನೂ ಓದಿ: ಕುಕ್ಕರ್ನಲ್ಲಿ ತಯಾರಿಸಿದ ಅಡುಗೆ ಡೇಂಜರ್! ಕ್ಯಾನ್ಸರ್ ಬರುವ ಸಾಧ್ಯತೆ? ತಜ್ಞರು ಅಭಿಪ್ರಾಯ ಇಲ್ಲಿದೆ
ವರದಿಯ ಪ್ರಕಾರ ಈ ಟೆಲಿಸರ್ಜರಿಯನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜನರಲ್ ಆಸ್ಪತ್ರೆಯ ನಿರ್ದೇಶಕ ಜಾಂಗ್ ಕ್ಸು ಅವರ ನಾಯಕತ್ವದಲ್ಲಿ ನಡೆದಿದೆ. ಚೀನಾದಲ್ಲಿ ವೈದ್ಯಕೀಯ ತಂಡ ರೋಗಿಯೊಂದಿಗೆ ಇದ್ದರೆ, ಡಾ. ಜಾಂಗ್ ಇಟಲಿಯಿಂದಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ