AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕುಕ್ಕರ್​​ನಲ್ಲಿ ತಯಾರಿಸಿದ ಅಡುಗೆ ಡೇಂಜರ್! ಕ್ಯಾನ್ಸರ್ ಬರುವ ಸಾಧ್ಯತೆ? ತಜ್ಞರು ಅಭಿಪ್ರಾಯ ಇಲ್ಲಿದೆ

ಭಾರತದಲ್ಲಿ ಪ್ರೆಶರ್ ಕುಕಿಂಗ್ ವ್ಯವಸ್ಥೆ ದಶಕಗಳಿಂದಲೇ ಚಾಲ್ತಿಯಲ್ಲಿದೆ. ಬಹುತೇಕರು ಇಂದು ಕುಕ್ಕರ್ ಮತ್ತು ಗ್ಯಾಸ್ ಸ್ಟವ್ ಪದ್ಧತಿಗೆ ಹೊಂದುಕೊಂಡು ಬಿಟ್ಟಿದ್ದಾರೆ. ಆದರೆ ನಮ್ಮ ಆಹಾರ ಪದ್ಧತಿ ಆರೋಗ್ಯಕ್ಕೆ ಒಳ್ಳೆಯದೇ? ಎಂದಿಗೂ ಈ ಪ್ರಶ್ನೆ ನಮಗೆ ಬಂದಿರುವುದಿಲ್ಲ. ಅದರಲ್ಲಿಯೂ ಪ್ರತಿನಿತ್ಯ ಬಳಕೆ ಮಾಡುತ್ತಿರುವ ಕುಕ್ಕರ್ ಒಳ್ಳೆಯದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 08, 2024 | 5:09 PM

Share
ನಾವು ಸೇವನೆ ಮಾಡುವ ಆಹಾರದಲ್ಲಿ ಶುಚಿ, ರುಚಿ ಇದ್ದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅದರಲ್ಲಿಯೂ ಆಹಾರ ತಯಾರಿಕೆ ಮಾಡಲು ಹಲವಾರು ರೀತಿಯ ಅನುಕೂಲಗಳಿವೆ. ಆದರೆ ನಮ್ಮ ಆಹಾರ ಪದ್ಧತಿ ಆರೋಗ್ಯಕ್ಕೆ ಒಳ್ಳೆಯದೇ? ಎಂದಿಗೂ ಈ ಪ್ರಶ್ನೆ ನಮಗೆ ಬಂದಿರುವುದಿಲ್ಲ. ಅದರಲ್ಲಿಯೂ ನಮ್ಮ ಮನೆಗಳಲ್ಲಿ  ಕುಕ್ಕರ್ ಇಲ್ಲದೆಯೇ ಅಡುಗೆಯೇ ನಡೆಯುವುದಿಲ್ಲ. ಹಾಗಾದರೆ ನಾವು ಪ್ರತಿನಿತ್ಯ ಬಳಕೆ ಮಾಡುವ ಕುಕ್ಕರ್ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

1 / 6
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಾವು ಬಳಕೆ ಮಾಡುತ್ತಿರುವ ಬಹುತೇಕ ಅಡುಗೆ ವಿಧಾನಗಳಲ್ಲಿ ಪೌಷ್ಟಿಕ ಸತ್ವಗಳು ಕಡಿಮೆ ಇರುತ್ತವೆ. ಅದರಲ್ಲಿಯೂ ಕುಕ್ಕರ್ ನಲ್ಲಿ ತಯಾರಾಗುವ ಅಡುಗೆ ಪೌಷ್ಠಿಕ ಸತ್ವವನ್ನು ನಾಶ ಮಾಡುತ್ತದೆ. ಇದರಿಂದ ಆರೋಗ್ಯಕ್ಕೂ ಕೂಡ ಹಾನಿಯಾಗಬಹುದು.

2 / 6
ಅಧ್ಯಯನಗಳು ಹೇಳುವ ಪ್ರಕಾರ. ಕುಕ್ಕರ್ನಲ್ಲಿ ಅಡುಗೆ ಮಾಡುವುದರಿಂದ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಇರುವ ಲೆಕ್ಟಿನ್ ಎಂಬ ಅಂಶ ಕಡಿಮೆಯಾಗುವುದಲ್ಲದೆ ದೇಹದಲ್ಲಿ ಖನಿಜಾಂಶಗಳು ಹೀರಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

3 / 6
ಸಾಮಾನ್ಯವಾಗಿ ಕುಕ್ಕರ್ ಗಳಲ್ಲಿ ಮಾಂಸಾಹಾರಗಳನ್ನು  ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪೌಷ್ಠಿಕಾಂಶಗಳು ನಷ್ಟವಾಗಿ ಕ್ಯಾನ್ಸರ್ ಸಮಸ್ಯೆ ಕಂಡುಬರುವ ಸಾಧ್ಯತೆ ಜಾಸ್ತಿ ಎಂದು ತಜ್ಞರು ಹೇಳುತ್ತಾರೆ.

4 / 6
ಕುಕ್ಕರ್ ಅಡುಗೆ ಮಾಡುವ ಸಂದರ್ಭಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಸ್ಟಾರ್ಚ್ ಅಂಶ ಕೆಲವೊಮ್ಮೆ ಹಾನಿಕಾರಕ ರಾಸಾಯನಿಕ ಅಂಶವನ್ನು ಬಿಡುಗಡೆ ಮಾಡುತ್ತದೆ. ನಿರಂತರವಾಗಿ ಇಂತಹ ಒಂದು ರಾಸಾಯನಿಕ ಅಂಶವನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್, ಮಕ್ಕಳಾಗದಿರುವುದು ಮತ್ತು ನರಮಂಡಲದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.

5 / 6
ಅಷ್ಟೇ ಅಲ್ಲದೆ ಕುಕ್ಕರ್ ಗಳನ್ನು ಅಲುಮಿನಿಯಂ ಮೆಟೀರಿಯಲ್ ನಿಂದ ತಯಾರು ಮಾಡಿರುವುದರಿಂದ ಅದು ತಯಾರಾಗುತ್ತಿರುವ ಆಹಾರ ಪದಾರ್ಥಗಳ ಜೊತೆ ಬೆರೆಯುತ್ತದೆ. ಇದು ಕ್ರಮೇಣವಾಗಿ ಮೆದುಳಿನ ನರಮಂಡಲಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತೆರೆದ ಪಾತ್ರೆಯಲ್ಲಿ ಗಾಳಿಯೊಂದಿಗೆ ಬೇಯಿಸುವ ಆಹಾರ ಆರೋಗ್ಯಕ್ಕೆ ಒಳ್ಳೆಯದು.

6 / 6