ಸೌರವ್ ಗಂಗೂಲಿಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಅವರು ಮರ್ಸಿಡಿಸ್ ಮತ್ತು ರೇಂಜ್ ರೋವರ್‌ನಂತಹ ಕಾರುಗಳನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸೌರವ್ ಗಂಗೂಲಿ ಬಳಿ 72 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರು, 62 ಲಕ್ಷ ರೂಪಾಯಿ ಮೌಲ್ಯದ ರೇಂಜ್ ರೋವರ್, ಆಡಿ, BMW ಮತ್ತು CLK ಕನ್ವರ್ಟಿಬಲ್ ಕಾರುಗಳಿವೆ. ವರದಿಯ ಪ್ರಕಾರ, ಸೌರವ್ ಗಂಗೂಲಿ ಮರ್ಸಿಡಿಸ್ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಅವರ ಬಳಿ ಸುಮಾರು 20 ಮರ್ಸಿಡಿಸ್ ಕಾರುಗಳಿವೆ.