AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Sourav Ganguly: 52ನೇ ವಸಂತಕ್ಕೆ ಕಾಲಿರಿಸಿದ ಸೌರವ್ ಗಂಗೂಲಿ ಎಷ್ಟು ಕೋಟಿಯ ಒಡೆಯ ಗೊತ್ತಾ?

Happy Birthday Sourav Ganguly: ಸೌರವ್ ಗಂಗೂಲಿ ಬಳಿ ಐಷಾರಾಮಿ ಮನೆಗಳು ಮತ್ತು ದುಬಾರಿ ಬೆಲೆಯ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಅಕ್ಷರಶಃ ರಾಜನಂತೆ ಜೀವನ ನಡೆಸುತ್ತಿರುವ ಗಂಗೂಲಿ ಎಷ್ಟು ಕೋಟಿಯ ಒಡೆಯ? ವರ್ಷಕ್ಕೆ ಅವರ ಸಂಪಾದನೆ ಎಷ್ಟು? ಒಂದು ಜಾಹೀರಾತಿಗೆ ಅವರು ಪಡೆಯುವ ಸಂಭಾವನೆ ಎಷ್ಟು? ಎಂಬಿತ್ಯಾದಿ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: Jul 08, 2024 | 2:57 PM

Share
ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಬಿಸಿಸಿಐ  ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಇಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಒಬ್ಬ ಆಟಗಾರನಾಗಿ ಹಾಗೂ ನಾಯಕನಾಗಿ ಟೀಂ ಇಂಡಿಯಾವನ್ನು ಸಾಕಷ್ಟು ಎತ್ತರಕ್ಕೆ ಬೆಳೆಸಿದ ಶ್ರೇಯ ಗಂಗೂಲಿಗೆ ಸಲ್ಲುತ್ತದೆ. ಸುಮಾರು 11 ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಆಡಿದ ಗಂಗೂಲಿಯನ್ನು ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

1 / 9
ಸೌರವ್ ಗಂಗೂಲಿ ಬಳಿ ಐಷಾರಾಮಿ ಮನೆಗಳು ಮತ್ತು ದುಬಾರಿ ಬೆಲೆಯ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಅಕ್ಷರಶಃ ರಾಜನಂತೆ ಜೀವನ ನಡೆಸುತ್ತಿರುವ ಗಂಗೂಲಿ ಎಷ್ಟು ಕೋಟಿಯ ಒಡೆಯ? ವರ್ಷಕ್ಕೆ ಅವರ ಸಂಪಾದನೆ ಎಷ್ಟು? ಒಂದು ಜಾಹೀರಾತಿಗೆ ಅವರು ಪಡೆಯುವ ಸಂಭಾವನೆ ಎಷ್ಟು? ಎಂಬಿತ್ಯಾದಿ ವಿವರ ಇಲ್ಲಿದೆ.

2 / 9
ಸೌರವ್ ಗಂಗೂಲಿ ಅವರನ್ನು ಬಂಗಾಳದ ರಾಜ ಎಂದು ಕರೆಯಲಾಗುತ್ತದೆ. ಅವರು ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ಅರಮನೆಗಿಂತ ಕಡಿಮೆಯಿಲ್ಲ. ಸೌರವ್ ಗಂಗೂಲಿ ಅವರ ಮನೆಯ ಬೆಲೆ ಸುಮಾರು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇವರ ಮನೆ ಸುಮಾರು 65 ವರ್ಷಗಳಷ್ಟು ಹಳೆಯದಾಗಿದ್ದು, ಮನೆಯ ಒಳಾಂಗಣ ಆಧುನಿಕ ಸೌಲಭ್ಯಗಳಿಂದ ಕೂಡಿದೆ.

3 / 9
ಅವರ ಈ ಅರಮನೆಯಂತಹ ಮನೆಯಲ್ಲಿ ಸುಮಾರು 48 ಕೊಠಡಿಗಳಿವೆ, ಅಲ್ಲಿ ಅವರು ತಮ್ಮ ಪತ್ನಿ ಡೊನ್ನಾ ಗಂಗೂಲಿ ಮತ್ತು ಮಗಳು ಸನಾ ಗಂಗೂಲಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಅರಮನೆಯಂತಹ ಮನೆಯನ್ನು ಕೋಲ್ಕತ್ತಾದಲ್ಲಿ ಹೆಗ್ಗುರುತು ಎಂದು ಕರೆಯಲಾಗುತ್ತದೆ. ಸೌರವ್ ಗಂಗೂಲಿ ಅವರ ಮನೆಯಲ್ಲಿ ಕ್ರಿಕೆಟ್ ಪಿಚ್ ಕೂಡ ಇದೆ, ಅಲ್ಲಿ ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು.

4 / 9
ಸೌರವ್ ಗಂಗೂಲಿ ಲಂಡನ್‌ನಲ್ಲಿ 2 ಬಿಎಚ್‌ಕೆ ಫ್ಲಾಟ್ ಖರೀದಿಸಿದ್ದು, ಇದರ ಬೆಲೆ ಸುಮಾರು 6 ಕೋಟಿ ರೂ. ಸೌರವ್ ಗಂಗೂಲಿ ಲಂಡನ್​ಗೆ ಹೋದಾಗ ಈ ಮನೆಯಲ್ಲಿಯೇ ಇರುತ್ತಾರೆ. ಇದಲ್ಲದೇ ಸೌರವ್ ಗಂಗೂಲಿ ಕೋಲ್ಕತ್ತಾದ ಲೋವರ್ ರೋಡನ್ ಸ್ಟ್ರೀಟ್‌ನಲ್ಲಿ ಹೊಸ ಬಂಗಲೆಯನ್ನೂ ಖರೀದಿಸಿದ್ದು, ಇದರ ಬೆಲೆ ಸುಮಾರು 40 ಕೋಟಿ ರೂ. ಎಂದು ಹೇಳಲಾಗುತ್ತಿದೆ.

5 / 9
ಸೌರವ್ ಗಂಗೂಲಿಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಅವರು ಮರ್ಸಿಡಿಸ್ ಮತ್ತು ರೇಂಜ್ ರೋವರ್‌ನಂತಹ ಕಾರುಗಳನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸೌರವ್ ಗಂಗೂಲಿ ಬಳಿ 72 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರು, 62 ಲಕ್ಷ ರೂಪಾಯಿ ಮೌಲ್ಯದ ರೇಂಜ್ ರೋವರ್, ಆಡಿ, BMW ಮತ್ತು CLK ಕನ್ವರ್ಟಿಬಲ್ ಕಾರುಗಳಿವೆ. ವರದಿಯ ಪ್ರಕಾರ, ಸೌರವ್ ಗಂಗೂಲಿ ಮರ್ಸಿಡಿಸ್ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಅವರ ಬಳಿ ಸುಮಾರು 20 ಮರ್ಸಿಡಿಸ್ ಕಾರುಗಳಿವೆ.

6 / 9
ಮಾಧ್ಯಮ ವರದಿಗಳ ಪ್ರಕಾರ, ಗಂಗೂಲಿ ಪ್ರತಿ ವರ್ಷ ಸುಮಾರು 25 ಕೋಟಿ ರೂಗಳನ್ನು ಸಂಪಾದಿಸುತ್ತಾರೆ. ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 750 ಕೋಟಿ ರೂ. ಎಂದು ಹೇಳಲಾಗುತ್ತದೆ. ಗಂಗೂಲಿ ವಿವಿಧ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ನಟಿಸುವ ಮೂಲಕವೂ ಸಂಪಾದಿಸುತ್ತಾರೆ. ಅಲ್ಲದೇ ಹಲವು ಕಂಪನಿಗಳಲ್ಲಿ ಹೂಡಿಕೆ ಸಹ ಮಾಡಿದ್ದಾರೆ. ವರದಿಗಳ ಪ್ರಕಾರ ಸೌರವ್ ಗಂಗೂಲಿ 1 ಜಾಹೀರಾತಿಗೆ ಸುಮಾರು 1 ಕೋಟಿ ರೂ. ಶುಲ್ಕ ವಿಧಿಸುತ್ತಾರೆ ಇದಲ್ಲದೆ, ಅವರು ಟಿವಿ ಶೋಗಳನ್ನು ಹೋಸ್ಟ್ ಮಾಡುವ ಮೂಲಕವೂ ಹಣವನ್ನು ಸಂಪಾದಿಸುತ್ತಾರೆ.

7 / 9
ಇನ್ನು ಸೌರವ್ ಗಂಗೂಲಿ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಭಾರತ ತಂಡದ ಪರ 113 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 16 ಶತಕ ಮತ್ತು 35 ಅರ್ಧ ಶತಕಗಳೊಂದಿಗೆ ಒಟ್ಟು 7212 ರನ್ ಬಾರಿಸಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಅವರ ಗರಿಷ್ಠ ಸ್ಕೋರ್ 239 ರನ್ ಆಗಿದೆ.

8 / 9
ಅದೇ ಸಮಯದಲ್ಲಿ, ಗಂಗೂಲಿ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 311 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 11363 ರನ್ ಬಾರಿಸಿದ್ದಾರೆ. ಇದರಲ್ಲಿ ಗಂಗೂಲಿ 22 ಶತಕ ಹಾಗೂ 72 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಸೌರವ್ ಗಂಗೂಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿಲ್ಲ ಆದರೆ ಐಪಿಎಲ್​ನಲ್ಲಿ 59 ಪಂದ್ಯಗಳನ್ನಾಡಿದ್ದು, 1349 ರನ್ ಬಾರಿಸಿದ್ದಾರೆ. ಅವರ ಹೆಸರಿನಲ್ಲಿ 7 ಅರ್ಧಶತಕಗಳಿವೆ.

9 / 9
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!