AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rat Fever: ಇಲಿ ಜ್ವರವನ್ನು ಕಡೆಗಣಿಸಬೇಡಿ, ತಡೆಗಟ್ಟುವ ಕ್ರಮದ ಬಗ್ಗೆ ತಜ್ಞರ ಸಲಹೆ ಏನು?

ಇಲಿ ಜ್ವರದ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಕಂಡು ಬಂದಲ್ಲಿ ಮೊದಲು ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಇದು ಮಾರಣಾಂತಿಕ ಮಟ್ಟಕ್ಕೆ ಹೋಗಬಹುದು, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇಲಿ ಜ್ವರ ಬರದಂತೆ ತಡೆಗಟ್ಟುವುದು ಹೇಗೆ? ವೈದ್ಯರು ಈ ಬಗ್ಗೆ ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

Rat Fever: ಇಲಿ ಜ್ವರವನ್ನು ಕಡೆಗಣಿಸಬೇಡಿ, ತಡೆಗಟ್ಟುವ ಕ್ರಮದ ಬಗ್ಗೆ ತಜ್ಞರ ಸಲಹೆ ಏನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 08, 2024 | 6:21 PM

Share

ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ ಇಲಿ ಜ್ವರವೂ ಒಂದು. ಈ ರೀತಿ ನಾನಾ ರೀತಿಯ ಕಾಯಿಲೆಗಳು ಬರುತ್ತವೆ ಎಂದು ನಿರ್ಲಕ್ಷ ಮಾಡುವಂತಿಲ್ಲ. ವೈದ್ಯರ ಹೇಳುವ ಪ್ರಕಾರ ಇದರ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಕಂಡು ಬಂದಲ್ಲಿ ಮೊದಲು ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಇದು ಮಾರಣಾಂತಿಕ ಮಟ್ಟಕ್ಕೆ ಹೋಗಬಹುದು, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಹಾಗಾದರೆ ಇಲಿ ಜ್ವರ ಬರದಂತೆ ತಡೆಗಟ್ಟುವುದು ಹೇಗೆ? ವೈದ್ಯರು ಈ ಬಗ್ಗೆ ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಕೆಲವರು ಇಲಿ ಕಚ್ಚಿದರೆ ಮಾತ್ರ ಈ ಜ್ವರ ಬರುತ್ತದೆ ಎಂದು ಕೊಂಡಿರುತ್ತಾರೆ ಆದರೆ ಅದು ತಪ್ಪು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು. ಕೆಲವೊಮ್ಮೆ ಇಲಿ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಹೊರಹಾಕುವಂತಹ ದ್ರವಗಳು ಕೂಡ ನಿಮಗೆ ಹಾನಿಕಾರಕವಾಗಬಹುದು. ಅದೂ ಅಲ್ಲದೆ ಇಲಿಯನ್ನು ತಿನ್ನುವ ನಿಮ್ಮ ಸಾಕು ಪ್ರಾಣಿಗಳು ಕೂಡ ನಿಮಗೆ ಈ ರೋಗ ತರಬಹುದು. ಹಾಗಾಗಿ ಬೆಕ್ಕು, ನಾಯಿ ಇವುಗಳಿಂದ ನೀವು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: ಕುಕ್ಕರ್​​ನಲ್ಲಿ ತಯಾರಿಸಿದ ಅಡುಗೆ ಡೇಂಜರ್! ಕ್ಯಾನ್ಸರ್ ಬರುವ ಸಾಧ್ಯತೆ? ತಜ್ಞರು ಅಭಿಪ್ರಾಯ ಇಲ್ಲಿದೆ

ಇಲಿ ಜ್ವರ ಹೇಗೆ ತಡೆಗಟ್ಟಬೇಕು?

  • ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
  • ಸಾಧ್ಯವಾದಷ್ಟು ನಿಮ್ಮ ಮನೆ ಅಥವಾ ಸುತ್ತಮುತ್ತ ಇಲಿಗಳು ಬರದಂತೆ ನೋಡಿಕೊಳ್ಳಿ.
  • ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಮುಚ್ಚಿ ಇರಿಸಿ.
  • ಮನೆಯಲ್ಲಿ ಇಲಿಗಳ ಮಲ ಬಿದ್ದಿದ್ದರೆ ಅದನ್ನು ಮೊದಲು ಸ್ವಚ್ಛ ಮಾಡಿ ಬಳಿಕ ಅಲ್ಲಿ ಸೋಂಕು ವಿರೋಧಿ ದ್ರವ ಸಿಂಪಡಿಸಿ.
  • ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಆಹಾರ ಕೊಡುವ ವಿಚಾರದಲ್ಲಿ ಎಚ್ಚರ ಇರಲಿ. ಆದಷ್ಟು ಸ್ವಚ್ಛತೆ ಕಾಪಾಡಿ.
  • ಒಂದು ವೇಳೆ ನಿಮಗೆ ಇಲಿಗಳು ಪರಚಿದ ಹಾಗೂ ಕಚ್ಚಿದ ಗಾಯಗಳು ಕಂಡು ಬಂದರೆ ಮೊದಲು ಆ ಜಾಗವನ್ನು ಸೋಪು ಮತ್ತು ಬಿಸಿ ನೀರಿನಿಂದ ತೊಳೆಯಿರಿ. ಬಳಿಕ ತಕ್ಷಣವೇ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.
  • ದೇಹದ ಯಾವುದೇ ಭಾಗದಲ್ಲಿ ಮೊದಲೇ ಗಾಯವಾಗಿದ್ದರೆ ಅದನ್ನು ಸಾಧ್ಯವಾದಷ್ಟು ಬ್ಯಾಂಡೇಜ್ ಮಾಡಿ ಇಡಿ. ಇಲಿಗಳು ಹೆಚ್ಚಾಗಿರುವ ಜಾಗದಿಂದ ಸಾಧ್ಯವಾದಷ್ಟು ದೂರವಿರಿ.
  • ಡೆಂಗ್ಯೂ ಮತ್ತು ಇಲಿ ಜ್ವರದ ರೋಗಲಕ್ಷಣಗಳು ಒಂದೇ ರೀತಿ ಇರುವುದರಿಂದ ಸರಿಯಾದ ರೋಗನಿರ್ಣಯ ಮಾಡುವುದು ಮುಖ್ಯವಾಗುತ್ತದೆ. ಹಾಗಾಗಿ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಡೆದುಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್