Video: ಮುದುಮಲೈ ಅರಣ್ಯದಲ್ಲಿ ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ

Updated on: Nov 20, 2024 | 4:30 PM

ಆಂಧ್ರಪ್ರದೇಶದ ಮೂವರು ಯುವಕರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಹಿಂಡಿಗೆ ಹೆದರಿಸಿ ಓಡಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಮಸಿನಗುಡಿ ಅರಣ್ಯಾಧಿಕಾರಿಗಳು ಆರೋಪಿಗಳಾದ ಅಬ್ದುಲ್ಲಾ ಖಾನ್ (23), ಅಬ್ದುಲ್ ಅಜೀಜ್ (28), ಮತ್ತು ಇಬ್ರಾಹಿಂ ಶೇಖ್ (30) ಮೂವರು ಯುವಕರ ಮೇಲೆ 15,000. ರೂ. ದಂಡ ವಿಧಿಸಿದ್ದಾರೆ. ಈ ಘಟನೆಯನ್ನು “ಕರ್ನಾಟಕ ಪೋರ್ಟ್‌ಫೋಲಿಯೋ” ಹೆಸರಿನ ಎಕ್ಸ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಮುದುಮಲೈ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಘಟನೆ ಸಂಭವಿಸಿದ್ದು, AP16CV0001 ನೋಂದಣಿ […]

ಆಂಧ್ರಪ್ರದೇಶದ ಮೂವರು ಯುವಕರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಹಿಂಡಿಗೆ ಹೆದರಿಸಿ ಓಡಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಮಸಿನಗುಡಿ ಅರಣ್ಯಾಧಿಕಾರಿಗಳು ಆರೋಪಿಗಳಾದ ಅಬ್ದುಲ್ಲಾ ಖಾನ್ (23), ಅಬ್ದುಲ್ ಅಜೀಜ್ (28), ಮತ್ತು ಇಬ್ರಾಹಿಂ ಶೇಖ್ (30) ಮೂವರು ಯುವಕರ ಮೇಲೆ 15,000. ರೂ. ದಂಡ ವಿಧಿಸಿದ್ದಾರೆ.

ಈ ಘಟನೆಯನ್ನು “ಕರ್ನಾಟಕ ಪೋರ್ಟ್‌ಫೋಲಿಯೋ” ಹೆಸರಿನ ಎಕ್ಸ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಮುದುಮಲೈ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಘಟನೆ ಸಂಭವಿಸಿದ್ದು, AP16CV0001 ನೋಂದಣಿ ಸಂಖ್ಯೆ ಹೊಂದಿರುವ ಕಾರಿನಿಂದ ಯುವಕನೊಬ್ಬ ಇಳಿದು ಅರಣ್ಯ ಪ್ರದೇಶದೊಳಗೆ ಜಿಂಕೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More