80ನೇ ವಯಸ್ಸಿನಲ್ಲಿ ಯುವತಿಯರೇ ನಾಚುವಂತೆ ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆ

|

Updated on: Oct 01, 2024 | 3:27 PM

80ನೇ ವಯಸ್ಸಿನಲ್ಲೂ ಮಹಿಳೆಯ ಅಂದ ಹಾಗೂ ಫಿಟ್ನೆಸ್​ ಕಂಡು ಉಳಿದ ಸ್ಪರ್ಧಿಗಳು ಶಾಕ್​​ ಆಗಿದ್ದಾರೆ. ಬಳುಕುವ ಬಳ್ಳಿಯಂತಿರುವ ಈ ಮಹಿಳೆ ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ 31 ಅಂತಿಮ ಸ್ಪರ್ಧಿಗಳೊಂದಿಗೆ ಸ್ಪರ್ಧಿಸುತ್ತಿದ್ದಾರೆ.

80ನೇ ವಯಸ್ಸಿನಲ್ಲಿ ಯುವತಿಯರೇ ನಾಚುವಂತೆ  ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆ
80 year old Miss Universe Korea pageant
Follow us on

80 ವರ್ಷದ ದಕ್ಷಿಣ ಕೊರಿಯಾದ ಮಾಡೆಲ್ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ ಮತ್ತು ಕನಸುಗಳನ್ನು ನನಸಾಗಿಸಬಹುದು ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.80 ವರ್ಷದ ಈ ಮಾಡೆಲ್ ಹೆಸರು ಚೋಯ್ ಸೂನ್-ಹ್ವಾ ಉನ್. ತಾನು ಜಗತ್ತನ್ನು ಅಚ್ಚರಿಗೊಳಿಸಲು ಬಯಸುತ್ತೇನೆ ಎಂದು ಚೋಯ್ ಹೇಳಿದ್ದಾರೆ.

80ನೇ ವಯಸ್ಸಿನಲ್ಲೂ ಮಹಿಳೆಯ ಅಂದ ಹಾಗೂ ಫಿಟ್ನೆಸ್​ ಕಂಡು ನೆಟ್ಟಿಗರು ಶಾಕ್​​ ಆಗಿದ್ದಾರೆ. ಬಳುಕುವ ಬಳ್ಳಿಯಂತಿರುವ ಈಕೆ ಹದಿಹರೆಯದ ಯುವತಿಯರನ್ನೇ ನಾಚುವಂತೆ ಮಾಡಿದ್ದಾರೆ. ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆಯಲ್ಲಿ 31 ಇತರ ಅಂತಿಮ ಸ್ಪರ್ಧಿಗಳೊಂದಿಗೆ ಚೋಯ್ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಇಂಜಿನಿಯರ್ ಆಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿ ಇಂದು ಬೀದಿಬದಿ ಜೀವನ; ಪತ್ನಿಯಿಂದಲೇ ಈ ಸ್ಥಿತಿ!

ಮಿಸ್ ಯೂನಿವರ್ಸ್ ಕೊರಿಯಾ ಸ್ಪರ್ಧೆ ನಡೆಯುವ 10 ವರ್ಷಗಳ ಮೊದಲು ಅಂದರೆ ಚೋಯ್ 1952 ರಲ್ಲಿ ಜನಿಸಿದರು. ಇದೀಗ ಈ ಸ್ಪರ್ಧೆಯಲ್ಲಿ ಚೋಯ್ ಗೆದ್ದರೆ, ಅವರು ಕೊರಿಯಾದ ಅತ್ಯಂತ ಹಿರಿಯ ವಿಶ್ವ ಸುಂದರಿ ಎಂಬ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಇಲ್ಲಿಯವರೆಗೆ 18 ರಿಂದ 24 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಮಿಸ್ ಯೂನಿವರ್ಸ್ನಲ್ಲಿ ಭಾಗವಹಿಸಬಹುದು ಎಂಬ ನಿಯಮಗಳಿದ್ದವು ಆದರೆ ಈ ಸ್ಪರ್ಧೆಯಲ್ಲಿ ವಯಸ್ಸಿನ ನಿರ್ಬಂಧಗಳನ್ನು ತೆಗೆದುಹಾಕಿರುವುದು ಇದೇ ಮೊದಲು.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Tue, 1 October 24