Video: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ

ಪಿಜ್ಜಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡವರೆಗೂ ಬಾಯಿಚಪ್ಪರಿಸಿಕೊಂಡು ಪಿಜ್ಜಾ ತಿಂತಾರೆ. ಆದರೆ 92 ವರ್ಷದ ಈ ಅಜ್ಜಿ ಪಿಜ್ಜಾ ತಿನ್ನೋದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಮೊಮ್ಮಗಳು ಪಿಜ್ಜಾ ತಂದುಕೊಡುತ್ತಿದ್ದಂತೆ ಈ ಅಜ್ಜಿಯ ಖುಷಿಗೆ ಪಾರಾವೇ ಇಲ್ಲ. ಪಿಜ್ಜಾ ಪ್ರಿಯೆ ಈ ಅಜ್ಜಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ
ವೈರಲ್‌ ವಿಡಿಯೋ
Image Credit source: Instagram

Updated on: May 29, 2026 | 11:03 AM

ಅಜ್ಜ ಅಜ್ಜಿಯಂದಿರಿಗೆ (grandparents) ಪಿಜ್ಜಾ ಬರ್ಗರ್ ಕೊಟ್ಟರೆ ಅಷ್ಟಾಗಿ ಇಷ್ಟ ಪಡಲ್ಲ. ಈ ಹಿರಿಜೀವಗಳಿಗೆ ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರಗಳನ್ನು ಸವಿಯುವುದೇ ಇಷ್ಟ. ಆದರೆ ಈ 92 ವರ್ಷದ ಈ ಅಜ್ಜಿ ತುಂಬಾ ಅಪ್ಡೇಟ್ ಆದಂತೆ ಕಾಣುತ್ತಿದ್ದಾರೆ. ಮೊಮ್ಮಗಳು ಅಜ್ಜಿಗೆ ಪಿಜ್ಜಾ ತಂದು ಕೊಟ್ಟಿದ್ದಾಳೆ. ಬಹಳ ಖುಷಿಯಿಂದ ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನುವ ಅಜ್ಜಿಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

@viewsandbrewsss ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಮೊಮ್ಮಗಳು ಹಂಚಿಕೊಂಡಿದ್ದಾಳೆ. ನನ್ನ ಅಜ್ಜಿ ಪಕ್ಕಾ ಪಿಜ್ಜಾ ಪ್ರಿಯೆ. 92 ವರ್ಷದ ಎಲ್ಲರಿಗೂ ಖಿಚಡಿ ಬೇಕಂತೇನಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಅಜ್ಜಿ ಪಿಜ್ಜಾ ತುಂಡುಗಳನ್ನು ತಿನ್ನುತ್ತಾ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ತನಗೆ ಕುಡಿಯಲು ಥಮ್ಸ್ ಅಪ್ ಬೇಕೆಂದು ಕೇಳುತ್ತಿದ್ದಾರೆ. ಅವರಿಗಾದ ಖುಷಿಯೂ ಅವರ ಮುಖದಲ್ಲಿ ನಗುವಿನಲ್ಲಿ ವ್ಯಕ್ತವಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಖುಷಿಯಾಗಿಸಿರುವ ಮೊಮ್ಮಗಳ ಪ್ರಯತ್ನ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಜನರೇಷನ್ ಮಕ್ಕಳು ತಮ್ಮ ಅಜ್ಜ ಅಜ್ಜಿಯಂದಿರಿಗೆ ಪಿಜ್ಜಾ ತಿನ್ನಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿಯ ಮುಖದಲ್ಲಿ ಸಂತೋಷ ಎಲ್ಲಾ ಹೇಳ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us