Video: ತಾಯಿಯ ಅಪ್ಪುಗೆಯಲ್ಲಿ ಸುಖ ನಿದ್ರೆಗೆ ಜಾರಿದ ಮರಿಯಾನೆ

ತಾಯಿ ಪ್ರೀತಿ, ಕಾಳಜಿಯನ್ನು ಬೇರೆ ಯಾರ ಪ್ರೀತಿಗೂ ಕೂಡ ಹೋಲಿಕೆ ಮಾಡೋಕೆ ಆಗಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮರಿಯಾನೆ ತನ್ನ ಕಂದಮ್ಮನನ್ನು ತೋಳಿನಲ್ಲಿ ಅಪ್ಪಿಕೊಂಡು ಮಲಗಿಸಿಕೊಂಡಿದೆ. ಈ ಕ್ಯೂಟ್ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಾಯಿಯ ಅಪ್ಪುಗೆಯಲ್ಲಿ ಸುಖ ನಿದ್ರೆಗೆ ಜಾರಿದ ಮರಿಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Nov 11, 2026 | 5:44 PM

ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳಿಗೆ ಪ್ರೀತಿ, ಕಾಳಜಿ ತೋರುತ್ತವೆ. ತಪ್ಪು ಮಾಡಿದರೆ ದಂಡಿಸಿ ಬುದ್ಧಿ ಹೇಳುತ್ತವೆ. ಇಂತಹ ಕ್ಯೂಟ್ ದೃಶ್ಯಗಳು ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಆದರೆ ಇದೀಗ ತಾಯಾನೆಯ (mother elephants) ಅಪ್ಪುಗೆಯಲ್ಲಿ ಮರಿಯಾನೆ ಸುಖ ನಿದ್ರೆಗೆ ಜಾರಿದೆ. ತಾಯಿ ಪ್ರೀತಿ ಸಾರುವ ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಯಿ ಮಡಿಲಿನಲ್ಲಿ ಸುಖ ನಿದ್ರೆಗೆ ಜಾರಿದ ತಾಯಾನೆ

ನಂಬೋಗೋ ಕ್ರಿಶ್ಚಿನ್ (Nambogo Christine) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಾನೆಯ ಅಪ್ಪುಗೆಯಲ್ಲಿ ಮರಿಯಾನೆ ಸುಖ ನಿದ್ರೆಗೆ ಜಾರಿರುವುದನ್ನು ಕಾಣಬಹುದು. ಪುಟಾಣಿ ಆನೆ ತಾಯಿಯ ಮಡಿಲೇ ಸುರಕ್ಷಿತ ಜಾಗವಾಗಿದೆ.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿದ್ದೆಗೆ ಜಾರಿದ ಮರಿಯಾನೆಯನ್ನು ಎಬ್ಬಿಸಲು ಪ್ರಯತ್ನಿಸಿದ ತಾಯಾನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಆದ ದೃಶ್ಯ ಎಂದರೆ, ಮತ್ತೊಬ್ಬರು, ಅಪ್ಪನ ಮಡಿಲು ನಿಜಕ್ಕೂ ಸ್ವರ್ಗ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us