
ಮರಿಯಾನೆಗಳು (baby elephants) ಮಾಲೀಕನ ಜತೆಗೆ ಮಗುವಾಗುತ್ತವೆ. ನೀವು ಪುಟಾಣಿ ಆನೆಗಳು ಹಾಗೂ ಕೇರ್ ಟೇಕರ್‌ನ ಆಟ ತುಂಟಾದ ದೃಶ್ಯಗಳನ್ನು ನೋಡಿರುತ್ತೀರಿ. ಇದೀಗ ಕೇರ್ ಟೇಕರ್ ಜತೆಗೆ ಮರಿಯಾನೆ ಆಟ ಆಡಿದೆ. ಓಡೋಡಿ ಬಂದ ಮರಿಯಾನೆಯು ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಮಲಗಿಕೊಂಡಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಫುಲ್ ಫಿದಾ ಆಗಿದ್ದಾರೆ.
ವಿವಿನ್ ಚೆಂಪಕ (Wiwienchempaka) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೇರ್ ಟೇಕರ್ ಮೊಬೈಲ್ ನೋಡುತ್ತಾ ಮಲಗಿದ್ದಾನೆ. ಓಡುತ್ತಾ ಬಂದ ಮರಿಯಾನೆ ಯುವಕ ಬೆನ್ನ ಮೇಲೆ ಒರಗಿಕೊಂಡು ತುಂಟಾಟ ಆಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ತಾಯಿಯ ಅಪ್ಪುಗೆಯಲ್ಲಿ ಸುಖ ನಿದ್ರೆಗೆ ಜಾರಿದ ಮರಿಯಾನೆ
ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಲಿಫೆಂಟ್ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ನೋಡಿದ್ರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಎಷ್ಟು ಮುದ್ದಾಗಿದೆ ಈ ಪುಟಾಣಿ ಆನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Sat, 14 November 26