
ಆನೆಗಳ (elephant) ತುಂಟಾಟವನ್ನು ನೋಡುವುದೇ ಖುಷಿ. ಹೌದು, ತನ್ನನ್ನು ಕಾಳಜಿ ವಹಿಸುವ ವ್ಯಕ್ತಿಯ ಜತೆಗೆ ತುಂಟಾಟ ಆಡುತ್ತವೆ. ಇದೀಗ ಈ ದೃಶ್ಯವು ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಗಿದೆ. ತನ್ನ ಕೇರ್ ಟೇಕರ್ ತುಂಟಾಟಕ್ಕೆ ಮರಿಯಾನೆ ಮೈ ಮೇಲೆ ಎರಗಿ ಮಗುವಂತೆ ಆಟ ಆಡಿದೆ. ಈ ಪುಟಾಣಿ ಆನೆಯಿಂದ ಯುವಕನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಮಾತ್ರ ಅದರ ತುಂಟಾಟ ಮಾತ್ರ ನಿಂತಿಲ್ಲ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹುಕ್ ನ್ಯೂಸ್ ಫೀಡ್ (Hook NewsFeed) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತನ್ನ ತಾಯಿ ಜತೆಗೆ ಇದ್ದ ಪುಟಾಣಿ ಕೇರ್ ಟೇಕರ್ ಕಂಡೊಡನೆ ಓಡೋಡಿ ಹೋಗಿ ಮೈ ಮೇಲೆ ಎರಗಿ ಆಟ ಆಡಿದೆ. ಈ ಯುವಕನು ಮರಿಯಾನೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಕಾಣಬಹುದು. ಕೊನೆಗೆ ಕೇರ್ ಟೇಕರ್ ಕೆಳಗೆ ಕೆಡವಿ ಆತನ ಮೈ ಮೇಲೆ ಕುಳಿತುಕೊಂಡಿದೆ.
ಇದನ್ನೂ ಓದಿ: ಕೆಸರಿನಲ್ಲಿ ಸಿಲುಕಿಕೊಂಡ ಮರಿಯಾನೆ, ಮುಂದೇನಾಯ್ತು ನೋಡಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಪ್ರೀತಿಯಿಂದ ಮೈ ಮೇಲೆ ಒರಗಿದೆ ಎಂದಿದ್ದಾರೆ. ಇನ್ನೊಬ್ಬರು, ಆನೆಗಳು ಈ ರೀತಿ ಮಾಡುತ್ತವೆ ಎಂದು ನನಗೆ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ತುಂಬಾ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ