Video: ಕೆಸರಿನಲ್ಲಿ ಸಿಲುಕಿಕೊಂಡ ಮರಿಯಾನೆ, ಮುಂದೇನಾಯ್ತು ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಮರಿಯಾನೆ ಕೆಸರಲ್ಲಿ ಸಿಲುಕಿಕೊಂಡು ಮೇಲೇಳಲು ಒದ್ದಾಡಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಅಯ್ಯೋ ಎಂದು ಮರುಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೆಸರಿನಲ್ಲಿ ಸಿಲುಕಿಕೊಂಡ ಮರಿಯಾನೆ, ಮುಂದೇನಾಯ್ತು ನೋಡಿ
ವೈರಲ್‌ ವಿಡಿಯೋ
Image Credit source: Instagram

Updated on: Oct 22, 2026 | 3:41 PM

ಮರಿಯಾನೆಗಳು (baby elephants) ತುಂಟಾಟ ಆಡುತ್ತಾ ಎಡವಟ್ಟುಗಳನ್ನು ಮಾಡಿಕೊಳ್ಳುವುದೇ ಹೆಚ್‌ಉ. ಎಲ್ಲೆಂದರಲ್ಲಿ ಬೀಳುವ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ಈ ಪುಟಾಣಿ ಆನೆ ಸಂಕಷ್ಟಕ್ಕೆ ಸಿಲುಕಿದೆ. ಹೌದು, ಮರಿಯಾನೆ ಕೆಸರಿನಲ್ಲಿ ಸಿಲುಕಿಕೊಂಡಿದೆ. ಮೇಲಕ್ಕೆ ಏಳಲು ಸಾಧ್ಯವಾಗದೇ ಕಷ್ಟ ಪಡುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಸರಿನಲ್ಲಿ ಸಿಲುಕಿಕೊಂಡ ಮರಿಯಾನೆ

ಡೊಯಿನ್ ಎಲಿಫೆಂಟ್ ಸ್ಯಾಂಚುರಿ (doiin_elephant_sanctuary) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಮರಿಯಾನೆ ಸಿಲುಕಿಕೊಂಡಿದೆ. ತನ್ನ ಎರಡು ಕಾಲುಗಳು ಕೆಸರಿನಲ್ಲಿ ಹುದುಗಿ ಹೋಗಿದ್ದು, ಪುಟಾಣಿ ಆನೆ ಮೇಲೆ ಏಳಲು ಕಷ್ಟ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಕೊನೆಗೆ ಒದ್ದಾಟ ನಡೆಸಿ ಮೆಲ್ಲನೆ ಎದ್ದು ಹೋದ ದೃಶ್ಯ ಇಲ್ಲಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತೂಗು ಉಯ್ಯಾಲೆಯಲ್ಲಿ ಕುತ್ಕೊಳ್ಳಲು ಮರಿಯಾನೆಯ ಸರ್ಕಸ್, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾಪ ಆನೆ ಮರಿ ಎಂದಿದ್ದಾರೆ. ಇನ್ನೊಬ್ಬರು, ಯಾರಾದ್ರೂ ಸಹಾಯ ಮಾಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us