ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ

Viral Video : ಅತ್ಯಂತ ವಿಜೃಂಭಣೆಯಿಂದ ಆ ಮದುವೆಗೆ ತಯಾರಿ ಮಾಡಿದ್ದರು. ಭಕ್ಷ್ಯ-ಪಾನೀಯಗಳು ಅತಿಥಿಗಳಿಗಾಗಿ ಕಾಯುತ್ತಿದ್ದವು. ಅದೆಲ್ಲಿಂದ ಬಂದರೋ ನಾಲ್ಕುಕಾಲಿನ ಈ ಅಭ್ಯಾಗತರು! ನೋಡಿ ಹೇಗಿದೆ 15 ಸೆಕೆಂಡುಗಳ ಈ ವಿಡಿಯೋ.

ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ
ಮದುವೆಗೆ ಬಂದ ಗೂಳಿ
Updated By: ಶ್ರೀದೇವಿ ಕಳಸದ

Updated on: Dec 10, 2022 | 2:58 PM

Viral Video : ಮದುವೆಮನೆಗೆ ಬೆಕ್ಕು, ನಾಯಿಯಂಥ ಸಾಕುಪ್ರಾಣಿಗಳು ನುಗ್ಗುವುದನ್ನು ನೋಡಿದ್ದೇವೆ. ಆದರೆ ಗೂಳೀ!? ಮದುವೆ ನಡೆಯುವ ಸ್ಥಳವನ್ನು ಅತ್ಯಂತ ವೈಭವಯುತವಾಗಿ ಅಲಂಕರಿಸಲಾಗಿದೆ. ಶಿಸ್ತಾಗಿ ಪಾನೀಯ, ಆಹಾರದ ಕೌಂಟರುಗಳನ್ನು ಜೋಡಿಸಲಾಗಿದೆ. ಅತಿಥಿಗಳ ಆಗಮನದಲ್ಲಿ ಎಲ್ಲರೂ ಇದ್ದಾರೆ. ಆದರೆ ಇದೆಲ್ಲಿಂದ ಬಂದಿತೋ ಗೂಳಿ? ಗೂಳಿ ಎಂದಮೇಲೆ ಆಮಂತ್ರಣ ಬೇಕೇ? ಹದಿನೈದು ಸೆಕೆಂಡುಗಳ ಈ ವಿಡಿಯೋ ಅನ್ನು ನೆಟ್ಟಿಗರು ಅವಾಕ್ಕಾಗಿ ನೋಡುತ್ತಿದ್ದಾರೆ. ಎಲ್ಲಿ ನುಗ್ಗಿ ಏನು ಹಾನಿ ಮಾಡುತ್ತದೆಯೋ ಎಂಬ ಆತಂಕ ಉಂಟಾಗದೇ ಇರದು.

ಇದು ಒಳಬರುತ್ತಿದ್ದಂತೆ ಯಾರೋ ಒಬ್ಬರು ಕೈಸನ್ನೆಯಿಂದ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅದನ್ನು ಓಡಿಸುವುದಕ್ಕಿಂತ ತನ್ನನ್ನು ತಾ ರಕ್ಷಿಸಿಕೊಳ್ಳುವುದೇ ಮೇಲು ಎನ್ನಿಸಿದಂತಿದೆ. ಗಾಜಿನಿಂದ ಅಲಂಕರಿಸಿದ ಕೌಂಟರಿನ ಕಡೆ ಓಡುತ್ತದೆ. ನೆಟ್ಟಿಗರಂತೂ ಈ ವಿಡಿಯೋ ಅನ್ನು ಉಸಿರು ಬಿಗಿಹಿಡಿದು ನೋಡಿದ್ದಾರೆ. ಸದ್ಯ ಬೇಗ ಇದು ಮರಳಿದೆ. ಇಲ್ಲವಾದಲ್ಲಿ ಧ್ವಂಸ ಮಾಡದೇ ಇದು ಜಾಗ ಖಾಲಿ ಮಾಡುವ ಜಾಯಮಾನದ್ದು ಅಲ್ಲ ಎಂದಿದ್ದಾರೆ ಹಲವರು.

ಅದೃಷ್ಟ ಚೆನ್ನಾಗಿದೆ ಮದುವೆ ಮನೆಯವರದು. ಗೂಳಿಯೊಳಗೂ ಸಂಭಾವಿತತನ ಇದ್ದಹಾಗಿದೆ. ಸದ್ಯ ಎಲ್ಲಾ ಬಚಾವ್​ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:58 pm, Sat, 10 December 22