Video: ಕರುವಿನ ಜತೆಗೆ ಫ್ರೆಂಡ್‌ಶಿಪ್‌ ಬೆಳೆಸಿದ ಬೆಕ್ಕಣ್ಣ, ವೈರಲ್ ಆಯ್ತು ದೃಶ್ಯ

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ಕರುವಿನ ಜತೆಗೆ ಬೆಕ್ಕು ಸ್ನೇಹ ಬೆಳೆಸಿಕೊಂಡಿದೆ. ಈ ಪ್ರಾಣಿಗಳ ನಡುವಿನ ಫ್ರೆಂಡ್‌ಶಿಪ್‌ನ ಕ್ಯೂಟ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Video: ಕರುವಿನ ಜತೆಗೆ ಫ್ರೆಂಡ್‌ಶಿಪ್‌ ಬೆಳೆಸಿದ ಬೆಕ್ಕಣ್ಣ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Oct 01, 2026 | 2:21 PM

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಮನುಷ್ಯರಷ್ಟೇ ಅಲ್ಲ, ಈ ಪ್ರಾಣಿಗಳು ಕೂಡ ಸ್ನೇಹ ಬೆಳೆಸಿಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಹೌದು, ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಕ್ಕಣ್ಣನ ಜತೆಗೆ ಕರುವಿನ ಫ್ರೆಂಡ್ ಶಿಪ್

ಹೆರ್ಡರ್ ಹೋಪ್ ಸ್ಟೇಡ್ (herderhopestead) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ನೋಡಬಹುದು. ತನ್ನ ಪಕ್ಕ ಕುಳಿತಿದ್ದ ಬೆಕ್ಕನ್ನು ಕರು ಮುದ್ದಾಡುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿದ್ದೆಗೆ ಜಾರಿದ ಕಂದಮ್ಮನಿಗೆ ಸೊಂಡಿಲಿನಿಂದ ಗಾಳಿ ಬೀಸಿ ಮಲಗಿಸಿದ ತಾಯಾನೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇವರಿಬ್ಬರೂ ಬೆಸ್ಟ್ ಫ್ರೆಂಡ್ ಎಂದೆನಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಪಾರ್ಟ್ನರ್ಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾನೇ ಮುದ್ದಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us