Video: ರೈಲಿನ 3ಎಸಿ ಕೋಚ್‌ನಲ್ಲಿ ಸ್ಯಾಂಡ್‌ವಿಚ್‌ ತಯಾರಿಸಿದ ಗುಜರಾತ್‌ನ ಕುಟುಂಬ

ಕೆಲವರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇರಲ್ಲ. ಇದೀಗ ಗುಜರಾತ್ ಕುಟುಂಬವೊಂದು ರೈಲಿನ ಕೋಚ್‌ನ್ನೇ ಅಡುಗೆ ಮನೆಯನ್ನಾಗಿ ಮಾಡಿಕೊಂಡಿದೆ. ಹೌದು, ಕುಟುಂಬವೊಂದು ರೈಲಿನ 3ಎಸಿ ಕೋಚ್ ನಲ್ಲಿ ಕುಳಿತು ಸ್ಯಾಂಡ್ ವಿಚ್ ತಯಾರಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರೈಲಿನ 3ಎಸಿ ಕೋಚ್‌ನಲ್ಲಿ ಸ್ಯಾಂಡ್‌ವಿಚ್‌ ತಯಾರಿಸಿದ ಗುಜರಾತ್‌ನ ಕುಟುಂಬ
ವೈರಲ್‌ ವಿಡಿಯೋ
Image Credit source: Twitter

Updated on: Nov 12, 2026 | 11:21 AM

ರೈಲು ಪ್ರಯಾಣದಲ್ಲಿ ಪ್ರಯಾಣಿಕರು ಮನೆಯಲ್ಲಿ ಆಹಾರ ತಯಾರಿಸಿ ಕೊಂಡೊಯ್ಯುವುದು ಸರ್ವೇ ಸಾಮಾನ್ಯ. ಆದರೆ ಇದೀಗ ಗುಜರಾತ್‌ನ (Gujarat) ಕುಟುಂಬವೊಂದು ರೈಲಿನ 3ಎಸಿ ಕೋಚ್‌ನಲ್ಲಿ ಕುಳಿತು ಸ್ಯಾಂಡ್‌ವಿಚ್ ತಯಾರಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಪ್ರಯಾಣಿಕರ ಶಿಷ್ಟಾಚಾರ ಹಾಗೂ ನಾಗರಿಕ ಪ್ರಜ್ಞೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೈಲಿನಲ್ಲಿ ಸ್ಯಾಂಡ್‌ವಿಚ್‌ ತಯಾರಿಸಿದ ಗುಜರಾತ್ ನ ಕುಟುಂಬ

7ಎನ್ ಪಟೇಲ್ (7Npatel) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಗುಜರಾತ್‌ನ ಸೂರತ್ ಮೂಲದ ಕುಟುಂಬವೊಂದು ರೈಲಿನಲ್ಲಿ ಸ್ಯಾಂಡ್‌ವಿಚ್ ತಯಾರಿಸುವುದನ್ನು ಕಾಣಬಹುದು. ಮಹಿಳೆಯರು ರೈಲಿನ ಮಧ್ಯದ ಬರ್ತ್ ಹಾಗೂ ಸುತ್ತಮುತ್ತಲಿನ ಆಸನಗಳನ್ನು ಬಳಸಿಕೊಂಡು ಅಡುಗೆ ತಯಾರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಸೀಟ್ ಮೇಲೆ ದಿನಪತ್ರಿಕೆಗಳನ್ನು ಹರಡಿಕೊಂಡು ಬ್ರೆಡ್ ತುಂಡುಗಳು, ಸೌತೆಕಾಯಿ, ಟೊಮೆಟೊ ಸೇರಿದಂತೆ ತರಕಾರಿಗಳು ಹಾಗೂ ಚಟ್ನಿ ಬಳಸಿ ಸ್ಯಾಂಡ್‌ವಿಚ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು, ಎಲೆಕ್ಟ್ರಿಕ್ ಟೋಸ್ಟರ್ ಕೂಡ ತಂದಿದ್ದರೆ ಸ್ಯಾಂಡ್‌ವಿಚ್‌ಗಳನ್ನು ಗ್ರಿಲ್ ಮಾಡಬಹುದಿತ್ತು ಎಂದು ಹೇಳುತ್ತಿರುವುದನ್ನು ಕಾಣಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ


ಇದನ್ನೂ ಓದಿ: ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆಯೇ ಕುಳಿತು ಊಟ ಮಾಡಿದ ಭಾರತೀಯ ಪ್ರವಾಸಿಗರು: ವಿಡಿಯೋ ವೈರಲ್​​

ಈ ವಿಡಿಯೋ 1.3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ರೈಲಿನ ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಯಾಣಿಕ ಕರ್ತವ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹೆಚ್ಚು ತಿಳಿದುಕೊಳ್ಳುತ್ತಿದ್ದಂತೆ ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಮರೆತೇ ಬಿಡುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:20 am, Thu, 12 November 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us