Video: 52 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ; ಪುಟ್ಟ ಲಕ್ಷ್ಮಿಯನ್ನು ಕಂಡು ಖುಷಿಪಟ್ಟ ಮನೆ ಮಂದಿ

ಮನೆಗೆ ಪುಟ್ಟ ಮಗುವು ಬರುತ್ತದೆಯೇ ಎಂದರೆ ಮನೆ ಮಂದಿಯ ಖುಷಿ ಹೇಳೋಕೆ ಪದಗಳೇ ಸಾಕಲ್ಲ. ಇದೀಗ ಕುಟುಂಬವೊಂದಕ್ಕೆ 52 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನವಾಗಿದೆ. ಈ ಸುದ್ದಿ ಕೇಳುತ್ತಿದ್ದಂತೆ ಮನೆ ಮಂದಿಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 52 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ; ಪುಟ್ಟ ಲಕ್ಷ್ಮಿಯನ್ನು ಕಂಡು ಖುಷಿಪಟ್ಟ ಮನೆ ಮಂದಿ
ವೈರಲ್‌ ವಿಡಿಯೋ
Image Credit source: Instagram

Updated on: Jul 31, 2026 | 12:38 PM

ಹೆಣ್ಣು ಲಕ್ಷ್ಮಿಯ ಸ್ವರೂಪ. ಆದರೆ ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು ಎಂಬ ಮಾತಿದೆ. ಇದೀಗ ಕುಟುಂಬವೊಂದು (family) ಹೆಣ್ಣು ಮಗು ಆಗಮನದ ಸುದ್ದಿ ಕೇಳಿ ಕುಣಿದಾಡಿದೆ. 52 ವರ್ಷಗಳ ಬಳಿಕ ಮನೆಗೆ ಪುಟ್ಟ ಲಕ್ಷ್ಮಿ ಆಗಮನವಾಗಿದೆ. ಕುಟುಂಬದ ಸದಸ್ಯರ ಖುಷಿಯು ಅವರುಗಳ ಮುಖದಲ್ಲಿ ವ್ಯಕ್ತವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕುಟುಂಬದ ಸಂಭ್ರಮವನ್ನು ಕಣ್ತುಂಬಿಸಿಕೊಂಡಿದ್ದಾರೆ.

ಡಾ. ಬೇಲಾ ಶಾಹ್ ಜೈನ್ (Dr. Bela Shah Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂಭ್ರಮದ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ಗೆ ಕೆಲವೊಮ್ಮೆ ಪವಾಡಗಳು ನಡೆಯಲು ತಲೆಮಾರುಗಳನ್ನು ತೆಗೆದುಕೊಳ್ಳುತ್ತವೆ. 52 ವರ್ಷಗಳ ಕಾಲ ಗಂಡು ಮಕ್ಕಳನ್ನು ಮಾತ್ರ ಸ್ವಾಗತಿಸಿದ ನಂತರ, ಈ ಕುಟುಂಬಕ್ಕೆ ಅಂತಿಮವಾಗಿ ಹೆಣ್ಣು ಮಗುವಿನ ಆಗಮನವಾಗಿದೆ. ಇದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ದಿನ ಎಂದು ಶೀರ್ಷಿಕೆಯಲ್ಲಿ  ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಡೆಲಿವರಿ ರೂಮ್‌ನ ಹೊರಗೆ ಕುಟುಂಬವೊಂದು ಮಗುವಿನ ಆಗಮನಕ್ಕಾಗಿ ಕಾಯುತ್ತಿರುವುದನ್ನು ಕಾಣಬಹುದು. ಇದೇ ವೇಳೆ ವೈದ್ಯಯೊಬ್ಬಳು  ಹೆಣ್ಣು ಮಗುವನ್ನು ತಂದು ತೋರಿಸುತ್ತಿದ್ದಂತೆ ಎಲ್ಲರ ಮೊಗದಲ್ಲಿ ನಗು ಮೂಡಿದೆ. ಮನೆ ಮಂದಿಯೆಲ್ಲಾ ಖುಷಿಯಿಂದ ಕುಣಿದಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಮೂರುವರೆ ವರ್ಷದ ಬಳಿಕ ವಿದೇಶದಿಂದ ಬಂದ ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಮನೆ ಮಂದಿ

ಈ ವಿಡಿಯೋ 24 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕುಟುಂಬಕ್ಕೆ ಶುಭಾಶಯಗಳು ಎಂದು ಹೇಳಿದರೆ, ಮತ್ತೊಬ್ಬರು, ನಮ್ಮ ಮನೆಯಲ್ಲೂ ಹೀಗೆಯೇ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ತಾಯಿ ಹಾಗೂ ಮಗು ಎಷ್ಟು ಪುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us