Video: ನಂಗೆ ಮನೆಗೆ ಹೋಗಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ

ಈಗಿನ ಮಕ್ಕಳು ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗ ಹೆತ್ತವರು ಪುಸಲಾಯಿಸಿ ಕಳಿಸಿ ಕೊಡ್ತಾರೆ. ಆದರೆ ನಾವೆಲ್ಲಾ ಸಣ್ಣವರಿದಿದ್ದಾಗ ಮುದ್ದು ಮಾಡೋದಕ್ಕಿಂತ ಹೆಚ್ಚಾಗಿ ಹೆತ್ತವರು ಗದರಿಸಿದ್ದದ್ದೇ ಹೆಚ್ಚು. ಇದೀಗ ಪುಟಾಣಿಯೊಂದು ಜೋರಾಗಿ ಅಳುತ್ತಾ ಕ್ಲಾಸ್‌ ರೂಮ್‌ ಕಿಟಕಿ ಹತ್ತಿ ಹೊರ ಹೋಗಲು ಪ್ರಯತ್ನಿಸುತ್ತಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Video: ನಂಗೆ ಮನೆಗೆ ಹೋಗಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ
ವೈರಲ್ ವಿಡಿಯೋ
Image Credit source: Instagram

Updated on: Apr 23, 2026 | 10:57 AM

ಈ ಮಕ್ಕಳನ್ನು (children) ಬೆಳಗ್ಗೆ ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳುಹಿಸುವುದು ಅಮ್ಮಂದಿರ ಕಷ್ಟದ ಕೆಲಸ. ಈ ಪುಟಾಣಿಗಳು ಶಾಲೆಗೆ ಹೋಗಲ್ಲ ಎಂದು ಬೆಳ್ಳಗೆ ಅಳುತ್ತಾ ಕುಳಿತುಕೊಂಡರೆ ಹೆತ್ತವರ ಕಥೆ ಮುಗಿದೇ ಹೋಯ್ತು. ಅಮ್ಮಂದಿರಂತೂ ಸಮಾಧಾನ ಪಡಿಸಿ ಕಳಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇನ್ನು ಹೆತ್ತವರು ಶಾಲೆಗೆ ಬಿಟ್ಟು ಬರಲು ಹೋದಾಗ ರಚ್ಚೆ ಹಿಡಿದು ಅಳುವುದಿದೆ. ಈ ಪುಟಾಣಿಯದ್ದು ಅದೇ ಕಥೆ. ಪುಟ್ಟ ಬಾಲಕನು ಅಮ್ಮನನ್ನು ಕಂಡು ಅಳುತ್ತಿದ್ದು, ಕ್ಲಾಸ್‌ ರೂಮ್‌ ಬಾಗಿಲು ಮುಚ್ಚಿದ್ದಂತಿದೆ. ಹೀಗಾಗಿ ಕ್ಲಾಸ್ ರೂಮ್ ಕಿಟಕಿ ಹತ್ತಿ ಹೊರ ಹೋಗಲು ಪ್ರಯತ್ನಿಸಿದ ದೃಶ್ಯ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

sengteitamarikp ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಶಾಲೆಗೆ ಹೋದ ಪುಟಾಣಿಯೂ ಮನೆಗೆ ಬರುತ್ತೇನೆ ಎಂದು ಅಳುತ್ತಿದೆ. ಇದೇ ವೇಳೆ ಶಾಲಾ ಶಿಕ್ಷಕಿ ತರಗತಿ ಕೋಣೆಯ ಬಾಗಿಲು ಮುಚ್ಚಿದ್ದಂತಿದೆ. ಹೀಗಾಗಿ ಪುಟ್ಟ ಹುಡುಗ ಕ್ಲಾಸ್‌ ರೂಮ್‌ ಕಿಟಕಿ ಹತ್ತಿ ಹೊರ ಬರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಂತೆ ನಾಚಿ ನೀರಾದ ಪುಟ್ಟ ಹುಡುಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬಾಲ್ಯದಲ್ಲಿ ನಾವು ಹೀಗೆಯೇ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಹೀಗೆಯೇ ಇದ್ದದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಪುಟಾಣಿ ಜೈಲಿನಲ್ಲಿ ಇದ್ದಂತೆ ಅನಿಸುತ್ತಿರಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:56 pm, Wed, 22 April 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us