Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ

ಈ ಪುಟಾಣಿಗಳು ಏನು ಮಾಡಿದ್ರೂ ನೋಡೋಕೆ ಚಂದ. ಪುಟ್ಟ ಮಕ್ಕಳ ಮಾತು ಕೂಡ ಕಿವಿಗೆ ಇಂಪಾಗಿ ಕೇಳಿಸುತ್ತದೆ. ಇನ್ನು ಪುಟ್ಟ ಮಕ್ಕಳ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳು ಬಂದ್ರೆ ಇದೇನಪ್ಪಾ ಮೇಧವಿ ಹಾಗೆ ಮಾತಾಡ್ತಾನಲ್ಲ ಎಂದೆನಿಸುತ್ತದೆ. ಇದೀಗ ಪುಟ್ಟ ಬಾಲಕನು ಲೈಫ್ ಟಿಪ್ಸ್ ನೀಡಿದ್ದು, ಟೆನ್ಶನ್ ತಕೋಬೇಡಿ ಎಲ್ಲಾ ಮಾಡೋಕೆ ಆಗುತ್ತೆ ಎಂದು ಧೈರ್ಯ ತುಂಬಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎಲ್ಲಾ ಮಾಡೋಕೆ ಆಗುತ್ತೆ, ಟೆನ್ಶನ್ ಮಾಡಿಕೊಳ್ಬೇಡಿ; ಆಡೋ ವಯಸ್ಸಿನಲ್ಲಿ ಲೈಫ್ ಟಿಪ್ಸ್ ನೀಡಿದ ಪುಟ್ಟ ಬಾಲಕ
ವೈರಲ್‌ ವಿಡಿಯೋ
Image Credit source: Instagram

Updated on: Mar 23, 2026 | 4:14 PM

ಕೆಲವರು ಸಣ್ಣ ಪುಟ್ಟ ಸಮಸ್ಯೆ ಬಂತು ಅಂದ್ರೆ ಆಕಾಶನೇ ತಲೆ ಮೇಲೆ ಬಿತ್ತು ಅನ್ನೋ ಹಾಗೆ ಕುಳಿತು ಬಿಡ್ತಾರೆ. ಮುಂದೇನು ಮಾಡೋದು ಅನ್ನೋದು ತೋಚೊದೇ ಇಲ್ಲ. ಆದರೆ ಇದೀಗ ಈ ಪುಟ್ಟ ಹುಡುಗನ ಮಾತು ಕೇಳಿದ್ರೆ ನೀವು ಟೆನ್ಶನ್ ಫ್ರೀ ಆಗ್ತೀರಾ. ಸಣ್ಣ ಪುಟ್ಟ ವಿಷ್ಯಕ್ಕೆ ಚಿಂತೆ ಮಾಡುವವರಿಗೆ ಪುಟ್ಟ ಹುಡುಗನು (little boy) ಧೈರ್ಯ ತುಂಬುವ ಮಾತುಗಳನ್ನಾಡಿದ್ದಾನೆ. ಸಣ್ಣ ವಯಸ್ಸಿನಲ್ಲಿ ಸಲಹೆ ನೀಡಿದ ರೀತಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

kruthi.pov ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಟೆನ್ಶನ್ ತಕೊಳ್ಬೇಡಿ ಏನಾಗಲ್ಲ. ನೀವು ಯಾಕೆ ಟೆನ್ಶನ್ ತಕೊಳ್ತೀರಾ ಎಲ್ಲಾ ಮಾಡೋಕೆ ಆಗುತ್ತೆ ಎಂದು ಧೈರ್ಯ ತುಂಬಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಮ್ಮ ಬೈದದ್ದಕ್ಕೆ ದೇವರ ಮುಂದೆ ದೂರು ನೀಡಿದ ಪುಟಾಣಿ

ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ನಡುವೆ ಟೆನ್ಶನ್ ಆಗಿಲ್ಲ ಅಂದ್ರೆ, ಟೆನ್ಶನ್ ಆಗೋ ತರಹ ಆಗಿದೆ ಎಂದು ಹೇಳಿದರೆ, ಮತ್ತೊಬ್ಬರು, ಇದನ್ನು ಹೇಳಿಕ್ಕೆ ನೀನು ಎಷ್ಟು ಟೆನ್ಶನ್ ತಕೊಂಡೆಯಲ್ವಾ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ನೀನು ಹೇಳೋದು ನೋಡಿ ಟೆನ್ಶನ್ ಆಗ್ತಿದೆ ಅಪ್ಪಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us