
ಯಾರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಪಡದೇ ಕೆಲವರು ಸ್ವಂತ ಉದ್ಯಮದತ್ತ ಮನಸ್ಸು ಮಾಡುತ್ತಾರೆ. ಆದರೆ ಇಲ್ಲೊಬ್ಬರು ಕಂಟೆಂಟ್ ಕ್ರಿಯೇಟರ್ ಮಾಡಿದ ಪ್ರಯೋಗ ಎಲ್ಲರ ಗಮನ ಸೆಳೆದಿದೆ. ಕಾರ್ಪೊರೇಟ್ (Corporate) ಆಫೀಸಿನ ಹೊರಗಡೆ ಕಾಫಿ ಸ್ಟಾಲ್ ಇಟ್ಟುಕೊಂಡು ಒಂದೇ ದಿನಕ್ಕೆ ಬರೋಬ್ಬರಿ 450 ಕಪ್ ಕಾಫಿ ಮಾರಾಟ ಮಾಡಿದ್ದಾರೆ. ಅಂದರೆ ಒಂದೇ ದಿನದಲ್ಲಿ 18,000 ರೂ ಸಂಪಾದಿಸಿದ್ದಾರೆ. ಒಂದೇ ದಿನದ ಆದಾಯವು ಕಾರ್ಪೊರೇಟ್ ಉದ್ಯೋಗಿಗಳ ಆದಾಯವನ್ನು ಮೀರಿಸುವಂತಿದೆ. ಈ ಪ್ರಯೋಗವು ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ದೇವಂಶ್ತ್ಯಾಗಿ (devanshtyagi) ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವಿಭಿನ್ನ ಪ್ರಯೋಗದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕಾರ್ಪೊರೇಟ್ ಆಫೀಸ್‌ನ ಹೊರಗಡೆ ಸಣ್ಣದಾದ ಕಾಫಿ ಸ್ಟಾಲ್ ತೆರೆದಿರುವುದನ್ನು ಕಾಣಬಹುದು. ಕಾಫಿ ಸ್ಟಾಲ್ ನಲ್ಲಿ ಟೇಬಲ್, ಗ್ಯಾಸ್ ಸ್ಟೌ, ಇನ್‌ಸ್ಟಂಟ್ ಕಾಫಿ, ಕಪ್‌ಗಳು ಇರುವುದನ್ನು ನೋಡಬಹುದು. ಈ ಕಾಫಿ ಸ್ಟಾಲ್ ನಲ್ಲಿ ಫ್ಲೇವರ್ ಕಾಫಿ ಮಾರಾಟ ಮಾಡುತ್ತಿದ್ದು, ಪ್ರತಿ ಕಪ್‌ಗೆ 40 ರೂಪಾಯಿಯಾಗಿದೆ.10 ಗಂಟೆಗೆ ತೆರೆದ ಸಣ್ಣದಾದ ಕಾಫಿ ಸ್ಟಾಲ್ ನಲ್ಲಿ ಸಂಜೆ ವೇಳೆಗೆ ಒಟ್ಟು 450 ಕಪ್‌ಗಳನ್ನು ಮಾರಾಟವಾಗಿದೆ. ಸಂಜೆ ವೇಳೆ 18,000 ರೂಪಾಯಿ ಆದಾಯ ಗಳಿಸಿರುವುದಾಗಿ ಹೇಳಿದ್ದಾರೆ. ಕಾರ್ಪೊರೇಟ್ ಉದ್ಯೋಗಿಗಳು ಈ ಕಾಫಿ ಸ್ಟಾಲ್‌ಗೆ ಬಂದು ಕಾಫಿ ರುಚಿ ಸವಿಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಸಣ್ಣ ಪುಟ್ಟ ಕೆಲಸಕ್ಕೂ ಟೈಮ್ ಇಲ್ಲ; ಕೆಲಸ ಸಿಕ್ಕ ಮೇಲೆ ಬದಲಾದ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುವತಿ
ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಂದೇ ದಿನದಲ್ಲಿ ಅಷ್ಟು ಕಫ್ ಕಾಫಿ ಮಾರಾಟವಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಕಾರ್ಪೊರೇಟ್ ಉದ್ಯೋಗಕ್ಕಿಂತ ಇದುವೇ ಬೆಸ್ಟ್ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಉದ್ಯಮದಲ್ಲಿ ಯಾವುದೇ ಕಿರಿಕಿರಿ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ