
ಮೂಕ ಪ್ರಾಣಿಗಳು ಗುಣದಲಿ ಮೇಲು ಎನ್ನುವ ಮಾತಿದೆ. ನೀವು ಅವುಗಳಿಗೆ ಪ್ರೀತಿ, ಕಾಳಜಿ ತೋರಿದರೆ ಜೀವನ ಪರ್ಯಂತ ಮರೆಯಲ್ಲ. ಇದೀಗ ವ್ಯಕ್ತಿಯೊಬ್ಬರು ಕೊಳಚೆಯ ಹಂಗು ತೊರೆದು ಚರಂಡಿಗೆ ಬಿದ್ದ ನಾಯಿಮರಿಗಳನ್ನು (puppies) ರಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂಕಪ್ರಾಣಿಗಳ ಜೀವ ಉಳಿಸಿದ ವ್ಯಕ್ತಿಯ ಈ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸೋಮನಾಥ್ (somanath) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ನಾಯಿಮರಿಗಳು ಚರಂಡಿಗೆ ಬಿದ್ದಿರುವುದನ್ನು ಕಾಣಬಹುದು. ಮೇಲೆ ಬರಲು ಒದ್ದಾಡುತ್ತಿದ್ದ ನಾಯಿಮರಿಗಳನ್ನು ವ್ಯಕ್ತಿ ಗಮನಿಸಿದ್ದಾರೆ. ಆ ತಕ್ಷಣವೇ ಚರಂಡಿಗಿಳಿದು ಈ ವ್ಯಕ್ತಿ ನಾಯಿ ಮರಿಗಳನ್ನು ರಕ್ಷಿಸಿದ್ದಾರೆ. ಇದನ್ನು ನೋಡಿದ ತಾಯಿ ಶ್ವಾನವು ಓಡೋಡಿ ಬಂದು ತನ್ನ ಕಂದಮ್ಮಗಳನ್ನು ಸೇರಿಕೊಂಡಿದೆ.
ಇದನ್ನೂ ಓದಿ: ಚೇರ್ ಒಳಗೆ ತಲೆ ಸಿಲುಕಿಕೊಂಡು ಒದ್ದಾಡಿದ ಶ್ವಾನ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಗೆ ಆ ದೇವರು ಒಳ್ಳೆಯ ಮಾಡಲಿ ಎಂದಿದ್ದಾರೆ. ಇನ್ನೊಬ್ಬರು, ಪುಣ್ಯಾತ್ಮರು ನೀವು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ