Video: ತೊಟ್ಟಿಯಲ್ಲಿದ್ದ ನೀರು ಕುಡಿಯಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ತಾಯಿ ಪ್ರೀತಿ ಕಾಳಜಿಗೆ ಸರಿಸಾಟಿ ಯಾವುದು ಇಲ್ಲ. ಇದೀಗ ಮರಿಯಾನೆ ಮೇಲೆ ತಾಯಾನೆಯೊಂದು ಕಾಳಜಿ ತೋರಿದೆ. ನೀರಿನ ತೊಟ್ಟಿಯಲ್ಲಿದ್ದ ನೀರನ್ನು ಕುಡಿಯಲು ಕಷ್ಟ ಪಡುತ್ತಿದ್ದ ಮರಿಯಾನೆಯನ್ನು ಆನೆಯೊಂದು ಬೀಳದಂತೆ ತಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತೊಟ್ಟಿಯಲ್ಲಿದ್ದ ನೀರು ಕುಡಿಯಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Aug 02, 2026 | 2:37 PM

ಮರಿ ಆನೆಗಳ (baby elephant) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ತರಹದ ಖುಷಿ. ಅವುಗಳು ಏನು ಮಾಡಿದ್ರೂ ಮುದ್ದಾಗಿ ಕಾಣುತ್ತವೆ. ಇದೀಗ ಈ ದೃಶ್ಯ ನೋಡಿದ್ರೆ ತಾಯಿಯ ಕಾಳಜಿಯ ಸ್ಪಷ್ಟ ಚಿತ್ರಣ ನಿಮ್ಮ ಕಣ್ಣ ಮುಂದೆ ಬರುತ್ತದೆ. ಮರಿಯಾನೆಯೊಂದು ನೀರಿನ ತೊಟ್ಟಿಯಲ್ಲಿದ್ದ ನೀರನ್ನು ಕುಡಿಯಲು ಪ್ರಯತ್ನಿಸುತ್ತಿದೆ. ತಾಯಾನೆ ತನ್ನ ಕಂದಮ್ಮನನ್ನು ಬೀಳದಂತೆ ಸೊಂಡಿಲಿನಲ್ಲಿ ಹಿಡಿದು ನೀರು ಕುಡಿಯಲು ಸಹಾಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

ಶೆಲ್ ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ (Sheldrick Wildlife Trust) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿ ಆನೆಗಳ ಹಿಂಡನ್ನು ಕಾಣಬಹುದು. ಮರಿಯಾನೆಯೊಂದು ನೀರಿನ ತೊಟ್ಟಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದೆ. ಆದರೆ ತನ್ನ ಸೊಂಡಿಲು ನೀರಿನ ತೊಟ್ಟಿಗೆ ತಾಕದೇ ಕಷ್ಟ ಪಡುತ್ತಿದೆ. ಇದನ್ನು ನೋಡಿದ ತಾಯಾನೆ ತನ್ನ ಸೊಂಡಿಲಿನಿಂದ ಬೀಳದಂತೆ ಹಿಡಿದು ನೀರು ಕುಡಿಯಲು ಸಹಾಯ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ

ಈ ವಿಡಿಯೋ 33 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ದೃಶ್ಯ ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಅದ್ಭುತ ತಾಯಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಾತು ಬಾರದಿದ್ದರೇನು, ತಾಯಿ ಪ್ರೀತಿ ಒಂದೇ ಅಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us