Video: ನಿದ್ದೆಗೆ ಜಾರಿದ ಕಂದಮ್ಮನಿಗೆ ಸೊಂಡಿಲಿನಿಂದ ಗಾಳಿ ಬೀಸಿ ಮಲಗಿಸಿದ ತಾಯಾನೆ

ಪ್ರಾಣಿಗಳು ತಮ್ಮ ಕಂದಮ್ಮಗಳನ್ನು ಆರೈಕೆ ಮಾಡುತ್ತವೆ, ಕಾಳಜಿ ವಹಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಪುಟಾಣಿ ಆನೆಯೊಂದು ಹಾಯಾಗಿ ನಿದ್ರಿಸುತ್ತಿದ್ದರೆ ತಾಯಾನೆ ತನ್ನ ಸೊಂಡಿಲಿನಿಂದ ಗಾಳಿ ಬೀಸಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಿದ್ದೆಗೆ ಜಾರಿದ ಕಂದಮ್ಮನಿಗೆ ಸೊಂಡಿಲಿನಿಂದ ಗಾಳಿ ಬೀಸಿ ಮಲಗಿಸಿದ ತಾಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Sep 29, 2026 | 3:48 PM

ತಾಯಿ ಪ್ರೀತಿನೇ ಹಾಗೆ, ನಿಷ್ಕಲ್ಮಶ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ ಎಂದೇಳಬಹುದು. ಹೌದು, ತಾಯಾನೆ (mother elephant) ತನ್ನ ಕಂದಮ್ಮನನ್ನು ಎಷ್ಟು ಕೇರ್ ಮಾಡುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಸುಖ ನಿದ್ರೆಗೆ ಜಾರಿದ ಕಂದಮ್ಮನಿಗೆ ಗಾಳಿ ಬೀಸುತ್ತಾ ಆರೈಕೆ ಮಾಡಿದೆ. ನಿಷ್ಕಲ್ಮಶ ಪ್ರೀತಿ ಸಾರುವ ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನಿದ್ದೆಗೆ ಜಾರಿದ ಕಂದಮ್ಮನಿಗೆ ಗಾಳಿ ಬೀಸಿದ ತಾಯಾನೆ

ಎಲಿಫೆಂಟ್.ರೆಸ್ಕ್ಯೂ.ಇನ್.ಆಫ್ರಿಕಾ (elephant.rescue.in.africa) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಹಾಯಾಗಿ ಮಲಗಿದ ತನ್ನ ಕಂದನಿಗೆ ತಾಯಾನೆಯೊಂದು ಸೊಂಡಿಲಿನಿಂದ ಗಾಳಿ ಬೀಸುತ್ತಾ ನಿಂತುಕೊಂಡಿದೆ. ಪುಟಾಣಿ ಆನೆಯ ನಿದ್ರೆಗೆ ತೊಂದರೆಯಾಗದಂತೆ ಕಾಳಜಿ ವಹಿಸುವ ತಾಯಾನೆಯ ನಿಷ್ಕಲ್ಮಶ ಪ್ರೀತಿಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಪಾರಿವಾಳವನ್ನು ಬೆನ್ನಟ್ಟಿದ ಮರಿಯಾನೆ

ಈ ವಿಡಿಯೋ ಇದುವರೆಗೆ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತನ್ನ ಡಿಎನ್ ಎ ನಲ್ಲಿ ಮನುಷ್ಯನ ಗುಣಗಳನ್ನು ಈ ಆನೆಗಳು ಹೊಂದಿರುತ್ತವೆ ಎಂದಿದ್ದಾರೆ. ಇನ್ನೊಬ್ಬರು, ತಾಯಿ ಪ್ರೀತಿ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಗ್ರೇಟ್ ತಾಯಿ, ಕಂದನ ನಿದ್ದೆಗೆ ಭಂಗವಾಗದಂತೆ ನೋಡಿಕೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us