Video: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಾಣಿಗಳು ಕೂಡ ತನ್ನ ಕಂದಮ್ಮನನ್ನು ಪ್ರೀತಿಸುತ್ತವೆ, ತಪ್ಪು ಮಾಡಿದರೆ ದಂಡಿಸುತ್ತವೆ ಹಾಗೂ ಅವುಗಳ ಮೇಲೆ ಕಾಳಜಿ ತೋರುತ್ತವೆ .ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ನದಿ ದಾಟಲು ಕಷ್ಟ ಪಡುತ್ತಿದ್ದ ಕಂದಮ್ಮನಿಗೆ ತಾಯಾನೆ ಸಾಥ್ ನೀಡಿದೆ. ಜೋಪಾನವಾಗಿ ದಡ ಸೇರಿಸಿದ ತಾಯಾನೆಯ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Jul 31, 2026 | 6:22 PM

ಮೂಕ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಪ್ರೀತಿ, ಕಾಳಜಿ ತೋರುತ್ತವೆ. ಮರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಇದೀಗ ತಾಯಾನೆ (mother elephant) ತನ್ನ ಕಂದನ ಮೇಲೆ ಕಾಳಜಿ ತೋರಿದ ದೃಶ್ಯ ವೈರಲ್ ಆಗಿದೆ. ಆನೆಯೊಂದು ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಶೀಶ್ ಜೈನ್ (Ashish Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆನೆಗಳ ಹಿಂಡು ನದಿ ದಾಟುತ್ತಿವೆ. ಇದರಲ್ಲಿ ಮರಿಯಾನೆಯೊಂದು ನೀರಿನ ರಭಸಕ್ಕೆ ನದಿ ದಾಟಲು ಕಷ್ಟ ಪಡುತ್ತಿದ್ದು, ಇತ್ತ ತಾಯಾನೆ ಆಸರೆಯಾಗಿ ನಿಂತಿದೆ. ಕಂದಮ್ಮನನ್ನು ತನ್ನ ಜತೆಗೆ ನದಿ ದಾಟಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ನವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅದ್ಭುತ ಹಾಗೂ ಅಪರೂಪದ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಸುಂದರವಾದ ದೃಶ್ಯ ಎಂದಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Fri, 31 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us