
ಪ್ರತಿಯೊಬ್ಬರಿಗೂ ತಮ್ಮ ಹೆತ್ತವರನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆಯಿರುತ್ತದೆ. ಹೀಗಾಗಿ ಕೆಲಸ ಸಿಕ್ಕ ಬಳಿಕ ಅವರ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸುತ್ತಾರೆ. ಇದೀಗ ವ್ಯಕ್ತಿಯೊಬ್ಬ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದಾನೆ. ಹೆತ್ತವರ ಮೊಗದಲ್ಲಿ ಮೂಡಿದ ನಗು ಹಾಗೂ ಸಂತೋಷವನ್ನು ಕಂಡು ಖುಷಿ ಪಟ್ಟಿದ್ದಾನೆ. ಹೆತ್ತವರ ಜತೆಗೆ ಮಗನ ವಿಮಾನ ಪ್ರಯಾಣದ ದೃಶ್ಯವು ವೈರಲ್ ಆಗಿದೆ.
ರುದ್ರ ಸಿಂಗ್ (rudraasinghhh)ಎಂಬ ವ್ಯಕ್ತಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುವುದನ್ನು ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್ ಶೀರ್ಷಿಕೆಯಲ್ಲಿ, ಇದು ತಮ್ಮ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ನನ್ನ ಹೆತ್ತವರ ಕಣ್ಣುಗಳಲ್ಲಿ ಕಂಡ ಸಂತೋಷ ಮತ್ತು ಉತ್ಸಾಹವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆದರೆ ಕೆಲವರಿಗೆ ಇದು ಸಣ್ಣ ವಿಷಯ ಅನಿಸಬಹುದು. ಆದರೆ ನನ್ನ ಹೆತ್ತವರು ಈ ಕ್ಷಣಕ್ಕಾಗಿ ಎಷ್ಟು ಕಾಲದಿಂದ ಕನಸು ಕಂಡಿದ್ದರು ಎಂಬುದು ನನಗೆ ಗೊತ್ತು. ಅವರ ಆ ಕನಸನ್ನು ನನಸಾಗಿಸಲು ಸಾಧ್ಯವಾಗಿದ್ದು ನನ್ನ ಜೀವನದ ಅತಿದೊಡ್ಡ ಸಾಧನೆಗಳಲ್ಲಿ ಒಂದು ಎಂದು ಬರೆದುಕೊಂಡಿದ್ದಾನೆ.
ಈ ವಿಡಿಯೋದಲ್ಲಿ ಈ ವ್ಯಕ್ತಿಯ ತಂದೆ ತಾಯಿ ಮಗನು ಫ್ಲೈಟ್ ನಲ್ಲಿ ಕರೆದುಕೊಂಡು ಹೋಗುತ್ತಾನೆಂದು ತಿಳಿದು ಖುಷಿಯಾಗಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ವಿಮಾನ ಹತ್ತಲು ಸಿದ್ಧರಾಗುತ್ತಿರುವ ದೃಶ್ಯಗಳಿವೆ. ವಿಮಾನ ಹತ್ತಲು ಸಿದ್ಧರಾಗುವುದರಿಂದ ಹಿಡಿದು ಪ್ರಯಾಣದ ವೇಳೆಯಲ್ಲಿ ಹೆತ್ತವರ ಮುಖದಲ್ಲಿ ಮೂಡಿದ ನಗು ಹಾಗೂ ಖುಷಿಯ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದನ್ನು ಕಾಣಬಹುದು.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ವಿದೇಶದಿಂದ ಬಂದ ಮಗಳು, ಈ ಸರ್ಪ್ರೈಸ್‌ಗೆ ಹೆತ್ತವರು ಭಾವುಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮದ್ಯಮ ವರ್ಗದ ಜನರಿಗೆ ವಿಮಾನ ಪ್ರಯಾಣ ದೊಡ್ಡ ಸಾಧನೆ ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಮುಖದಲ್ಲಿನ ನಗುವೇ ಎಲ್ಲವನ್ನು ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಬಗ್ಗೆ ಬಹಳ ಹೆಮ್ಮೆ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ