Video: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥ
ವೈರಲ್‌ ವಿಡಿಯೋ
Image Credit source: Twitter

Updated on: Aug 04, 2026 | 11:48 AM

ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ  ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ.  ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.

ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.

ಎಕ್ಸ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಓದಲು ವಯಸ್ಸಿನ ಮಿತಿಯಿಲ್ಲ; ಐಐಟಿ ಮದ್ರಾಸ್​​ನಲ್ಲಿ ಒಟ್ಟಿಗೇ ಪದವಿ ಪಡೆದ ತಾಯಿ-ಮಗ!

ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us