Video: ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿ ದಾಹ ತೀರಿಸಿದ ಯುವಕ

ಮನುಷ್ಯತ್ವ ಹಾಗೂ ಮಾನವೀಯತೆ ಕಣ್ಮರೆಯಾಗಿದೆ ಎನ್ನುವ ಮಾತಿದೆ. ಆದರೆ ಈ ಮೂಕ ಪ್ರಾಣಿಗಳ ಹಸಿವು ನೀಗಿಸುವ, ದಾಹ ತೀರಿಸುವ ಕೆಲ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಯುವಕನು ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿ ದಾಹ ತೀರಿಸಿದ ಯುವಕ
ವೈರಲ್‌ ವಿಡಿಯೋ
Image Credit source: Instagram

Updated on: Oct 06, 2026 | 3:10 PM

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ನಿಷ್ಕಲ್ಮಶ ಪ್ರೀತಿ, ಕಾಳಜಿ ವಿವರಿಸಲು ಪದಗಳಿಲ್ಲ. ಕೆಲವರು ಮೂಕ ಪ್ರಾಣಿಗಳ ಭಾವನೆಯನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಸ್ಪಂದಿಸುತ್ತಾರೆ. ಇದೀಗ ಯುವಕನೊಬ್ಬ ದಾಹದಿಂದ ಬಳಲಿದ್ದ ಶ್ವಾನಕ್ಕೆ (dog) ಬೊಗಸೆಯಲ್ಲಿ ನೀರು ಕೊಟ್ಟು ಬಾಯಾರಿಕೆ ನೀಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಯುವಕನ ಒಳ್ಳೆತನವನ್ನು ಮೆಚ್ಚಿಕೊಂಡಾಡಿದ್ದಾರೆ.

ಶ್ವಾನಗಳಿಗೆ ಬೊಗಸೆಯಲ್ಲಿ ನೀರು ಕೊಟ್ಟ ಯುವಕ

ಬಂಟಿ ಕಶ್ಯಪ್ (Banty kashyap) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಕ್ಕೆ ಹತ್ತಿರವಾಗುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಯುವಕನೊಬ್ಬ ನಳ್ಳಿ ನೀರು ಬೊಗಸೆಯಲ್ಲಿ ಹಿಡಿದು ಬೀದಿ ನಾಯಿಗಳ ದಾಹ ನೀಗಿಸಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಾನು ನಿನ್ನ ಜೊತೆಗಿದ್ದೇನೆ; ಅನಾರೋಗ್ಯದಿಂದ ಬಳಲುತ್ತಿದ್ದ ಮಾಲೀಕನ ಜತೆಗೆ ನಿಂತ ಶ್ವಾನ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯ ಕೆಲಸ ಬ್ರದರ್ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಮಗೊಂದು ಸಲಾಂ, ರಿಯಲ್ ಹೀರೋ ನೀವು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us