Viral: ಕಾರ್ಪೊರೇಟ್ ಜಾಬ್ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ

ಉದ್ಯೋಗ ಕಳೆದುಹೋದ್ರೆ ಮುಂದೇನು ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದಾಯದ ಮೂಲವೇ ಕುಸಿದಾಗ ಚಿಂತೆ ಕಾಡುತ್ತದೆ. ಇಲ್ಲೊಬ್ಬ ಯುವಕನನ್ನು ಕಾರ್ಪೊರೇಟ್ ಕಂಪನಿ ಕೆಲ್ಸದಿಂದ ತೆಗೆದುಹಾಕಿದೆ. ಜಾಬ್ ಗೆ ಅರ್ಜಿ ಸಲ್ಲಿಸಿದ್ರೂ ಕೆಲಸ ಸಿಗದ ಕಾರಣ ಪಾತ್ರೆ ತೊಳೆಯುವ ಕೆಲಸಕ್ಕೆ ಕೈ ಹಾಕಿದ್ದಾನೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕಾರ್ಪೊರೇಟ್ ಜಾಬ್ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ
ಸಾಂದರ್ಭಿಕ ಚಿತ್ರ
Image Credit source: Maskot/Getty Images

Updated on: Nov 12, 2026 | 6:06 PM

ಕಾರ್ಪೊರೇಟ್ ಕಂಪನಿಯಲ್ಲಿ (corporate company) ಕೆಲಸ ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ಕೆಲಸದಿಂದ ಯಾವಾಗ ತೆಗೆದು ಹಾಕುತ್ತಾರೆ ಅನ್ನೋದು ತಿಳಿದಿರಲ್ಲ. ಎಲ್ಲದಕ್ಕೂ ರೆಡಿ ಇರಲೇಬೇಕು. ಇದೀಗ 29 ವರ್ಷದ ಯುವಕನೊಬ್ಬ ಕೆಲಸ ಕಳೆದುಕೊಂಡಿದ್ದಾನೆ. ಸಿಕ್ಕ ಸಿಕ್ಕ ಕಡೆ ಇಂಟರ್​ವ್ಯೂ ಅಟೆಂಡ್ ಮಾಡಿದ್ರೂ ಜಾಬ್ ಆಗ್ಲೇ ಇಲ್ಲ. ಕೊನೆಗೆ ಯುವಕನು ನಾನು ಪಾತ್ರೆ ತೊಳಿಯೋಕು ರೆಡಿ ಇದ್ದೀನಿ, ಎಲ್ಲಿಯಾದ್ರು ಕೆಲ್ಸ ಇದ್ರೆ ಹೇಳಿ ಎಂದು ಬೇಸತ್ತು ಹೇಳಿಕೊಂಡಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ಯುವಕನಿಗೆ ಧೈರ್ಯ ತುಂಬಿದ್ದಾರೆ.

ಕಾರ್ಪೊರೇಟ್ ಜಾಬ್ ಹೋಯ್ತು, ಕೆಲ್ಸಕ್ಕಾಗಿ ಯುವಕನ ಅಲೆದಾಟ

ಲೇಆಫ್ (r/Layoffs) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಯುವಕನ ವೃತ್ತಿ ಜೀವನದಲ್ಲಾದ ಬದಲಾವಣೆ ಬಗ್ಗೆ ಹೇಳಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ಏಪ್ರಿಲ್‌ನಲ್ಲಿ ಕೆಲಸದಿಂದ ವಜಾಗೊಳಿಸಲಾಯಿತು. ಆದರೆ, ಒಂಬತ್ತು ತಿಂಗಳ ತನಕ ಪ್ಯಾಕೇಜ್ ಸಿಕ್ಕಿತ್ತು. ವರ್ಷಗಳವರೆಗೆ ಆರಾಮವಾಗಿ ಕುಳಿತು ತಿನ್ನುವಷ್ಟು ದುಡ್ಡು ಇತ್ತು,  ಉಳಿತಾಯ ಕೂಡ ಇತ್ತು. ನಾಲ್ಕು ತಿಂಗಳ ಕೆಲಸವಿಲ್ಲದ ಸಮಯದಲ್ಲಿ 200 ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದೆ. 15 ಕ್ಕೂ ಹೆಚ್ಚು ಸಂದರ್ಶನಗಳಿಗೆ ಹಾಜರಾಗಿದ್ದೆ. ಮನೆಯಲ್ಲಿ ಇರೋದಕ್ಕೆ ಆಗದೇ ಒದ್ದಾಡಿದೆ. ಮಾನಸಿಕ ಆರೋಗ್ಯವೂ ಹದಗೆಡುತ್ತಲೇ ಹೋಯ್ತು ಎಂದು ಹೇಳಿದ್ದಾನೆ.

Loading...

ಸೇವಿಂಗ್ಸ್ ಇದೆ ಆದ್ರೂ ಜಾಬ್ ಬೇಕು

ನನ್ನ ದಿನಚರಿಯೇ ಬದಲಾಗಿ ಹೋಯ್ತು. ನಾಲ್ಕು ತಿಂಗಳು ನಿರುದ್ಯೋಗಿಯಾಗಿದ್ದ ಬಳಿಕ ನಾನು ದ್ವೇಷ ಮಾಡುತ್ತಿದ್ದ ಅದೇ ಕಾರ್ಪೊರೇಟ್ ಗಾಗಿ ನಾನು ಹುಡುಕುತ್ತಿದ್ದೆ. ಹಣ ಮುಖ್ಯ ಕಾರಣವಲ್ಲ. ದುಡ್ಡು ಖರ್ಚು ಮಾಡುವುದು ಕಡಿಮೆ. ಈಗಾಗಲೇ ಎಮೆರ್ಜನ್ಸಿ ಫಂಡ್ ಇಟ್ಟುಕೊಂಡಿದ್ದೇನೆ. ಗಂಟೆಗೆ $11 (1,031 ರೂ ) ಸಂಬಳ ನೀಡುವ ಪಾರ್ಟ್ ಟೈಮ್ ಕೆಲಸ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ.

ಜಾಬ್ ಹೋದ್ಮೇಲೆ ಬದುಕು ನಿರಂತರ ಹೋರಾಟ

ಮುಂದಿನ ವಾರದಿಂದ ನಾನು ಪಾತ್ರೆ ತೊಳೆಯುವ ಕೆಲಸ ಮಾಡಲು ಮುಂದಾಗಿದ್ದೇನೆ. ನಾನು ಈ ಕೆಲಸ ಮಾಡುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ ಬಳಿಕ ಇದೇ ರೀತಿಯ ಹೋರಾಟಗಳನ್ನು ಎದುರಿಸಿದ್ದೇನೆ ಎಂದಿದ್ದಾನೆ.

ಇದನ್ನೂ ಓದಿ: ನನ್ನ ನೆಮ್ಮದಿಯನ್ನೇ ಕಳ್ಕೊಂಡಿದ್ದೇನೆ: ವರ್ಕ್‌ಲೈಫ್‌ ಬಗ್ಗೆ ಅಸಮಾಧಾನ ಹೊರಹಾಕಿದ ಯುವತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಗೆ ನಿಮ್ಮ ನಿರ್ಧಾರದ ಬಗ್ಗೆ ತೃಪ್ತಿ ಇದ್ದರೆ ನೀವು ಈ ಕೆಲಸ ಮಾಡಿ ಎಂದಿದ್ದಾರೆ. ಇನ್ನೊಬ್ಬರು ನೀವು ಚಿಂತಿಸಬೇಡಿ, ನಿಮ್ಮ ಅನುಭವಕ್ಕೆ ಒಳ್ಳೆಯ. ಕೆಲಸ ಸಿಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಯಾವುದಾದರೇನು, ಪ್ರಾಮಾಣಿಕತೆ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us