Video: ಕೆಲಸ ಬಿಟ್ಟು ಎಂಟು ತಿಂಗಳು ಮನೆಯಲ್ಲೇ ರೆಸ್ಟ್; ಜಾಬ್ ರಿಸೈನ್ ಮಾಡುವ ಯುವಕರಿಗೆ ಸಲಹೆ ನೀಡಿದ ವ್ಯಕ್ತಿ

ಕೈಯಲ್ಲೊಂದು ಕೆಲಸ ಇದ್ರೇನೆ ಮರ್ಯಾದೆ. ಆದರೆ ಕೆಲಸ ಕಳೆದುಕೊಂಡವರ ಪಾಡು ಹೇಳ ತೀರದು. ಇದೀಗ ಎಂಟು ತಿಂಗಳ ಕಾಲ ಕೆಲಸವಿಲ್ಲದೇ ಮನೆಯಲ್ಲಿದ್ದ ವ್ಯಕ್ತಿ ಜಾಬ್ ರಿಸೈನ್ ಮಾಡುವವರಿಗೆ ಸಲಹೆ ನೀಡಿದ್ದಾನೆ. ಈ ವ್ಯಕ್ತಿ ಹಂಚಿಕೊಂಡ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Video: ಕೆಲಸ ಬಿಟ್ಟು ಎಂಟು ತಿಂಗಳು ಮನೆಯಲ್ಲೇ ರೆಸ್ಟ್; ಜಾಬ್ ರಿಸೈನ್ ಮಾಡುವ ಯುವಕರಿಗೆ ಸಲಹೆ ನೀಡಿದ ವ್ಯಕ್ತಿ
ಸಾಂದರ್ಭಿಕ ಚಿತ್ರ
Image Credit source: Maskot/DigitalVision/Getty Images

Updated on: Oct 09, 2026 | 2:22 PM

ಕೈಯಲ್ಲೊಂದು ಉದ್ಯೋಗ (job) ಇದ್ರೆ ಅದೇನೋ ಧೈರ್ಯ. ಕೆಲಸ ಹೋಗುವ ಸಂದರ್ಭ ಬಂದಾಗ ಎಂತಹರಿಗಾದರೂ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತದೆ. ಕೆಲವೊಮ್ಮೆ ಕೆಲಸ ಬಿಡುವ ನಿರ್ಧಾರವು ನಮ್ಮ ಕುತ್ತಿಗೆಗೆ ಉರುಳಾಗಿ ಬಿಡುತ್ತದೆ. ಈ ವ್ಯಕ್ತಿಯದ್ದು ಅದೇ ಪಾಡು. ಕೆಲಸ ಬಿಟ್ಟು ಎಂಟು ತಿಂಗಳಾಗಿದೆ. ಕೆಲಸ ಮಾಡೋದಕ್ಕಿಂತ ಮನೆಯಲ್ಲಿ ಕುಳಿತುಕೊಳ್ಳುವುದೇ ಹೆಚ್ಚು ಒತ್ತಡದಾಯಕ ಎಂದು ತನ್ನ ವಾಸ್ತವ ಸ್ಥಿತಿ ಬಗ್ಗೆ ಹೇಳಿದ್ದಾನೆ. ಇನ್ನು ಕೆಲಸ ಬಿಡಲು ನಿರ್ಧರಿಸಿದ್ದವರಿಗೆ ಕಿವಿ ಮಾತು ಹೇಳಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾನೇಳುವುದನ್ನು ಗಮನ ವಿಟ್ಟು ಒಮ್ಮೆ ಕೇಳಿ

ಅಭಿಷೇಕ್ ದುಬೇಯ್ ಎಂಬ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ (@figuringlife.in) ಖಾತೆಯಲ್ಲಿ ವ್ಯಕ್ತಿ ವಿಡಿಯೋ ಹಂಚಿಕೊಂಡಿದ್ದಾನೆ. ಈ ಕ್ಲಿಪಿಂಗ್‌ನಲ್ಲಿ ಕೈಯಲ್ಲಿ ಉದ್ಯೋಗವಿದ್ದು, ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ, ನನ್ನ ಮಾತನ್ನು ಬಹಳ ಎಚ್ಚರಿಕೆಯಿಂದ ಆಲಿಸಿ. ನಾನು ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟೆ. ನನಗೆ ಸಣ್ಣ ಅಪಘಾತ ಆಯ್ತು. ಬೆಡ್ ರೆಸ್ಟ್‌ಗಾಗಿ ನಾನು ಕಳೆದ ಎಂಟು ತಿಂಗಳಿನಿಂದ ಮನೆಯಲ್ಲೇ ಇದ್ದೇನೆ ಎಂದಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಕೆಲಸದಲ್ಲಿದ್ದಾಗಲ್ಲ, ಮನೆಯಲ್ಲಿದ್ದಾಗ ಒತ್ತಡ ಹೆಚ್ಚು

ನಾನು ನಿಮಗೆ ಕೆಲ ಸತ್ಯವನ್ನು ಹೇಳುತ್ತಿದ್ದೇನೆ: ನೀವು ಕೆಲಸ ಮಾಡುವಾಗ ಎಷ್ಟೇ ಒತ್ತಡ ಅನುಭವಿಸಿದ್ರು, ಮನೆಯಲ್ಲಿ ಕುಳಿತಾಗ ನೀವು ಹೆಚ್ಚಿನ ಒತ್ತಡವನ್ನು ಅನುಭವಿಸುವಿರಿ. ಈ ಎರಡು ಒತ್ತಡ ಅನುಭವ ನನಗಾಗಿದೆ. ನಿಮಗೆ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನೀವು ಕೆಲಸದ ಒತ್ತಡವನ್ನು ಸಹಿಸಿಕೊಳ್ಳಬಹುದು, ಆದರೆ ಮನೆಯಲ್ಲಿರುವುದರ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉದ್ಯೋಗ ತೊರೆಯುವ ನಿರ್ಧಾರ ಮಾಡಬೇಡಿ ಎಂದು ಸಲಹೆ ನೀಡಿದ್ದಾನೆ.

ಕೆಲಸ ತೊರೆಯುವ ವಿಷ್ಯದಲ್ಲಿ ಆತುರದ ನಿರ್ಧಾರ ಬೇಡ

ವಿಷಕಾರಿ ಕೆಲಸ ಸ್ಥಳದಲ್ಲಿ ಎಲ್ಲ ಸಹಿಸಿಕೊಂಡು ಕೆಲಸ ಮಾಡಬೇಕೆಂದು ಹೇಳುತ್ತಿಲ್ಲ. ಆದರೆ ನೀವು ಮಾಡುವ ಉದ್ಯೋಗವು ನಿಮ್ಮನ್ನು ಮಾನಸಿಕವಾಗಿ ದಣಿಸುತ್ತಿದ್ದರೆ, ಬದಲಾವಣೆ ಮಾಡಿಕೊಳ್ಳಿ. ಏನು ಸಮಸ್ಯೆಯಿಲ್ಲದೆ ಕೆಲಸ ತೊರೆಯುವ ನಿರ್ಧಾರವು ನಿಮ್ಮ ಜೀವನವನ್ನು ಶಾಂತಿಯುತವಾಗಿಸುತ್ತದೆ ಎಂದು ಭಾವಿಸಬೇಡಿ. ನಿಮ್ಮ ಜೀವನವನ್ನು ಉತ್ತಮಗೊಳಿಸುವ ಕೆಲಸದ ಬಗ್ಗೆ ಯೋಚಿಸಿ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸಣ್ಣ ಪುಟ್ಟ ಕೆಲಸಕ್ಕೂ ಟೈಮ್‌ ಇಲ್ಲ; ಕೆಲಸ ಸಿಕ್ಕ ಮೇಲೆ ಬದಲಾದ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುವತಿ

ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ದೃಷ್ಟಿಕೋನ ಸರಿಯಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಸಮಯ ಸಂದರ್ಭ ಬಂದಾಗಲೇ ಎಲ್ಲದರ ಅರಿವಾಗುತ್ತದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಮ್ಮ ಮಾತು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us