Video: ಏರ್‌ಹೋಸ್ಟೆಸ್ ಜತೆಗೆ ವೃದ್ಧ ವ್ಯಕ್ತಿಯ ಮುಗ್ಧ ಸಂಭಾಷಣೆ, ವೈರಲ್ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಬಹುಬೇಗನೇ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ವೃದ್ಧಯೊಬ್ಬರ ಮುಗ್ಧತೆ ತುಂಬಿದ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಹೌದು, ಏರ್‌ಹೋಸ್ಟೆಸ್ ಬಳಿ ಇಷ್ಟು ಸಣ್ಣ ಬಟ್ಟೆ ಯಾಕೆ ಹಾಕೊಂಡು ಇದ್ದಿಯಾ ಎಂದು ವ್ರದ್ಧ ಕೇಳಿದ್ದು, ಈ ಮುಗ್ಧತೆ ತುಂಬಿದ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಏರ್‌ಹೋಸ್ಟೆಸ್ ಜತೆಗೆ ವೃದ್ಧ ವ್ಯಕ್ತಿಯ ಮುಗ್ಧ ಸಂಭಾಷಣೆ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Sep 30, 2026 | 4:15 PM

ನಮ್ಮ ಅಜ್ಜ ಅಜ್ಜಿಯಂದಿರು (grandparents) ಮುಗ್ಧರು. ನಮಗಿರುವ ತಿಳುವಳಿಕೆ ಅವರಿಗಿಲ್ಲ. ಏನು ಹೇಳಬೇಕೋ ಅದನ್ನು ಹಿಂದೆ ಮುಂದೆ ನೋಡದೇ ನೇರವಾಗಿ ಹೇಳಿ ಬಿಡುತ್ತಾರೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಗ್ರಾಮೀಣ ಹಿನ್ನೆಲೆಯಿಂದ ಬಂದ ವೃದ್ಧ ವ್ಯಕ್ತಿ ಏರ್‌ಹೋಸ್ಟೆಸ್ ಜತೆಗೆ ನಡೆಸಿದ ಸಂಭಾಷಣೆಯ ಕ್ಲಿಪಿಂಗ್ ವೈರಲ್ ಆಗಿದೆ. ಏರ್‌ಹೋಸ್ಟೆಸ್ ಉಡುಗೆಯ ಬಗ್ಗೆ ಈ ಅಜ್ಜ ಪ್ರಶ್ನೆ ಕೇಳಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಅವರ ಮುಗ್ಧತೆಗೆ ಫಿದಾ ಆಗಿದ್ದಾರೆ.

ವೃದ್ಧ ವ್ಯಕ್ತಿಯ ಮುಗ್ಧ ಪ್ರಶ್ನೆಗೆ ನಕ್ಕ ಏರ್ ಹೋಸ್ಟೆಸ್

ಶ್ರೀಕಾಂತ್ ಪಾಂಡೆ (Shrikanth Pandey) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿಮಾನಯಾನ ಸಂಸ್ಥೆಯ ಏರ್ ಹೋಸ್ಟೆಸ್ ಜತೆ ವೃದ್ಧ ಸಂಭಾಷಣೆ ನಡೆಸಿರುವುದನ್ನು ಕಾಣಬಹುದು. ಇದೇ ವೇಳೆ ಏರ್‌ಹೋಸ್ಟೆಸ್‌ಗೆ, ನೀವೇಕೆ ಇಷ್ಟು ಚಿಕ್ಕ ಉಡುಗೆ ಧರಿಸಿದ್ದೀರಿ? ಎಂದು ಕೇಳಿದ್ದಾರೆ. ತಾತನ ಮುಗ್ಧ ಪ್ರಶ್ನೆಗೆ ಏರ್‌ಹೋಸ್ಟೆಸ್ ಸಿಬ್ಬಂದಿಯೊಬ್ಬರು, ಇದು ಅವರ ಕೆಲಸದ ಸಮವಸ್ತ್ರ ಎಂದು ನಗುತ್ತಲೇ ಉತ್ತರಿಸಿದ್ದಾರೆ.

ವೃದ್ಧನ ಜತೆಗೆ ಸೆಲ್ಫಿ ಕ್ಲಿಕಿಸಿಕೊಂಡ ಏರ್‌ಹೋಸ್ಟೆಸ್

ಕೊನೆಗೆ ಏರ್‌ಹೋಸ್ಟೆಸ್ ಈ ವೃದ್ಧ ವ್ಯಕ್ತಿ ಜತೆಗೆ ಒಂದು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಆ ಬಳಿಕ ನಿನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೋ ಮಗಳೇ ಎಂದು ಹಾರೈಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊಮ್ಮಗಳಿಂದ ಅಜ್ಜಿಗೆ ಆನ್ಲೈನ್ ಶಾಪಿಂಗ್ ಪಾಠ, ವೈರಲ್ ಆಯ್ತು ಕ್ಯೂಟ್ ದೃಶ್ಯ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜ ತುಂಬಾ ಮುಗ್ಧರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನೋಡಿ ನನ್ನ ಅಜ್ಜ ನೆನಪಾದ್ರು ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಗುವಿನಂತಹ ಮನಸ್ಸು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us