Viral Video: ಹೆಚ್ಚು ಕಿರುಚಾಡಿದರೆ ಕೋಳಿಯಂತಾಗುವುದು ಕೇಳು ಮನುಜ, ಸಮಾಜಕ್ಕೊಂದು ಒಳ್ಳೆಯ ಪಾಠ

| Updated By: Rakesh Nayak Manchi

Updated on: Jun 11, 2022 | 10:00 AM

ಆನಂದ್ ಮಹೀಂದ್ರಾ ಅವರು ಆಸಕ್ತಿದಾಯಕ ಜೀವನದ ಪಾಠವನ್ನು ಕಂಡುಕೊಳ್ಳುತ್ತಾ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಜೀವನದ ಪಾಠದ ಜೊತೆಗೆ ಮನರಂಜನೆಯನ್ನೂ ನೀಡುತ್ತಿದೆ.

Viral Video: ಹೆಚ್ಚು ಕಿರುಚಾಡಿದರೆ ಕೋಳಿಯಂತಾಗುವುದು ಕೇಳು ಮನುಜ, ಸಮಾಜಕ್ಕೊಂದು ಒಳ್ಳೆಯ ಪಾಠ
ಹುಂಜ
Follow us on

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ(Anand Mahindra) ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುತ್ತಾರೆ. ಅದರಂತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ರವಾನಿಸುವ ವಿಡಿಯೋಗಳನ್ನು, ಸ್ಪೂರ್ತಿದಾಯಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಆಸಕ್ತಿದಾಯಕ ಜೀವನದ ಪಾಠವನ್ನು ಕಂಡುಕೊಳ್ಳುತ್ತಾ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಜೀವನದ ಪಾಠದ ಜೊತೆಗೆ ಮನರಂಜನೆಯನ್ನೂ ನೀಡುತ್ತಿದೆ.

ಇದನ್ನೂ ಓದಿ: Viral Photo: ಯೋಧರೊಬ್ಬರು ಮಗುವಿಗೆ ಹಾಲುಣಿಸುವ ಹೃದಯಸ್ಪರ್ಶಿ ಫೋಟೋ ವೈರಲ್​

ಆನಂದ್ ಮಹೀಂದ್ರಾ ಅವರು ಹಂಚಿಕೊಂಡ 22 ಸೆಕೆಂಡ್​ಗಳ ವಿಡಿಯೋದಲ್ಲಿ, ಕೋಳಿಯೊಂದು ಒಂದೇ ಉಸಿರಿನಲ್ಲಿ ನಿರಂತರವಾಗಿ ಕೂಗುವುದನ್ನು ಕಾಣಬಹುದು. ಕೊನೆಯಲ್ಲಿ ಸುಸ್ತಾಗಿ ಹಿಂದಕ್ಕೆ ಬಾಕಿ ನೆಲಕ್ಕೆ ಬೀಳುವುದನ್ನು ಕಾಣಬಹುದು. ಈ ವಿಡಿಯೋವನ್ನು ಅವರು ಹಂಚಿಕೊಳ್ಳುವ ವೇಳೆ “ನನ್ನ ಟೇಕ್‌ಅವೇ: ನಿಮ್ಮ ಧ್ವನಿಯನ್ನು ಕೊಠಡಿಯಲ್ಲಿರುವ ಎಲ್ಲಾ ಇತರ ಧ್ವನಿಗಳನ್ನು ಮುಳುಗಿಸಲು ನೀವು ಪ್ರಯತ್ನಿಸಿದರೆ, ನೀವು ಬೇಗನೆ ಆಮ್ಲಜನಕದಿಂದ ಹೊರಗುಳಿಯುತ್ತೀರಿ ” ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವಿಡಿಯೋ ಹಂಚಿಕೊಂಡ ಕೆಲವೇ ಸಮಯದಲ್ಲಿ ಟ್ವೀಟ್​​ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ನೈತಿಕತೆ: ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ, ಅನಗತ್ಯ ವಿಷಯಗಳಿಗೆ ಕಿರಿಚಿಕೊಳ್ಳಬೇಡಿ. ಗಮನಿಸಿ – ನಾನು ರಾತ್ರಿ 9 ಗಂಟೆಗೆ ಮುಖ್ಯವಾಹಿನಿಯ ಟಿವಿ ಮಾಧ್ಯಮವನ್ನು ಉಲ್ಲೇಖಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video : ವ್ಯಕ್ತಿಗೆ ವಿದ್ಯುತ್ ಟ್ರ್ಯಾಕ್‌ ಶಾಕ್, ಪ್ರಾಣ ಉಳಿಸಿದವನಿಗೆ ಸನ್ಮಾನ

 

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು ಇದೇ ವೀಡಿಯೊವನ್ನು ಈ ಹಿಂದೆ ಕೂಡ ಟ್ವೀಟ್ ಮಾಡಿದ್ದರು. ಅವರ 9.3 ಮಿಲಿಯನ್ ಟ್ವಿಟರ್ ಅನುಯಾಯಿಗಳು ವೀಡಿಯೊದಿಂದ ಅವರು ಯಾವ ಜೀವನ ಪಾಠವನ್ನು ಸಂಗ್ರಹಿಸುತ್ತಾರೆ ಎಂಬುದನ್ನು ಹಂಚಿಕೊಳ್ಳಲು ಕೇಳಿದ್ದಾರೆ. ಈ ವೇಳೆ ಅವರು, “ನನ್ನ #SignalWonderbox ನಲ್ಲಿ ನಾನು ಈ ಕಥೆಯ ನೈತಿಕತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆ. ಈ ಕೋಳಿಯ ಕಥೆಯಿಂದ ಕಲಿಯಲು ಉತ್ತಮ ಪಾಠವನ್ನು ಕ್ರೌಡ್‌ಸೋರ್ಸ್ ಮಾಡುವುದು ಹೆಚ್ಚು ಆಸಕ್ತಿಕರವಾಗಿರುತ್ತದೆ ಎಂದು ನಾನು ಭಾವಿಸಿದೆ” ಎಂದಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 am, Sat, 11 June 22