ವೈದ್ಯರ ತಂಡವು ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದ ನಂತರ 8 ತಿಂಗಳ ಮಗುವಿನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆದರೆ ಇದಕ್ಕಿದ್ದಂತೆ ಶವ ಪೆಟ್ಟಿಗೆಯಲ್ಲಿ ಮಗುವಿನ ಚಲನವಲನ ಕಂಡು ಫೋಷಕರು ದಂಗಾಗಿ ಹೋಗಿದ್ದಾರೆ. ಮಗು ಬದುಕಿದೆ ಎಂದು ಖುಷಿ ಪಟ್ಟ ಕುಟುಂಬಕ್ಕೆ ಮತ್ತೆ ಶಾಕ್ ಎದುರಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಮಗು ಮತ್ತೆ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಆಘಾತಕಾರಿ ಘಟನೆ ಬ್ರೆಜಿಲ್‌ನ ಕೊರಿಯಾ ಪಿಂಟೊದಲ್ಲಿ ನಡೆದಿದೆ.
ಅಕ್ಟೋಬರ್ 19 ರಂದು ವೈರಲ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಹೃದಯ ಬಡಿತ ಅಥವಾ ಉಸಿರಾಟದ ಯಾವುದೇ ಲಕ್ಷಣಗಳಿಲ್ಲ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದರು. ಅದರಂತೆ ಅಕ್ಟೋಬರ್ 19 ರಂದು ಸಂಜೆ 7 ಗಂಟೆಗೆ ಮಗುವಿನ ಪೋಷಕರು ಅಂತ್ಯಕ್ರಿಯೆಯ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಇದಕ್ಕಿದ್ದಂತೆ ಶವ ಪೆಟ್ಟಿಗೆಯೊಳಗಿದ್ದ ಮಗುವಿನಲ್ಲಿ ಸಣ್ಣ ಚಲನವಲನ ಕಂಡು ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಎಲ್ಲಾ ರೀತಿಯ ಪರೀಕ್ಷೆಗಳ ನಂತರ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ಮಗನ ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದಾಗ ಮಾತನಾಡಿದಳೆಂದು ಹೆಂಡ್ತಿ ಕಪಾಳಕ್ಕೆ ಬಾರಿಸಿದ ಪತಿರಾಯ
ಶವ ಪೆಟ್ಟಿಗೆಯಲ್ಲಿ ಮಗುವಿನ ಚಲನವಲನವಿದ್ದರೂ ಮೊದಲೇ ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದ ವೈದ್ಯರ ವಿರುದ್ದ ಫೋಷಕರು ಸಿಡಿದೆದ್ದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ರೆಜಿಲ್‌ನ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಈ ನಡುವೆ ಆಸ್ಪತ್ರೆ ಆಡಳಿತ ಮಂಡಳಿ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Fri, 25 October 24