ಟ್ರಂಪ್ ಮಗನ ಜತೆಗೆ ಉತ್ತರ ಕೊರಿಯಾ ಅಧ್ಯಕ್ಷನ ಮಗಳ ಮದುವೆ ಫಿಕ್ಸ್​​​? ಫೋಟೋ ವೈರಲ್

ಡೊನಾಲ್ಡ್ ಟ್ರಂಪ್ ಪುತ್ರ ಬ್ಯಾರನ್ ಮತ್ತು ಕಿಮ್ ಜೊಂಗ್ ಉನ್ ಪುತ್ರಿ ಕಿಮ್ ಜು ಏ ಕುರಿತ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಮೆರಿಕಾ-ಉತ್ತರ ಕೊರಿಯಾ ಬದ್ಧ ವೈರಿಗಳನ್ನು ಇವರ ಪ್ರೇಮಕಥೆ ಒಂದು ಮಾಡಬಹುದೆಂಬ ಹಾಸ್ಯದೊಂದಿಗೆ ಎಐ ಚಿತ್ರಗಳು ಹರಿದಾಡುತ್ತಿವೆ. ಇಬ್ಬರ ನಡುವೆ ಯಾವುದೇ ಸಂಬಂಧವಿಲ್ಲ, ಇದು ಕೇವಲ ನೆಟ್ಟಿಗರ ಡಿಜಿಟಲ್ ಕಲ್ಪನೆ ಎಂದು ಲೇಖನ ವಿವರಿಸುತ್ತದೆ.

ಟ್ರಂಪ್ ಮಗನ ಜತೆಗೆ ಉತ್ತರ ಕೊರಿಯಾ ಅಧ್ಯಕ್ಷನ ಮಗಳ ಮದುವೆ ಫಿಕ್ಸ್​​​? ಫೋಟೋ ವೈರಲ್
ಸಾಂದರ್ಭಿಕ ಚಿತ್ರ

Updated on: Mar 08, 2026 | 3:09 PM

ಅಂತರಾಷ್ಟ್ರೀಯ ರಾಜಕೀಯದ ಇಬ್ಬರು ಪ್ರಭಾವಿ ವ್ಯಕ್ತಿಗಳ ಮಕ್ಕಳನ್ನು ಜೋಡಿಸಿ ನೆಟ್ಟಿಗರು ಹೊಸದೊಂದು ಡಿಜಿಟಲ್ ಲವ್​​ ಸ್ಟೋರಿಯನ್ನು ಸೃಷ್ಟಿಸಿದ್ದಾರೆ. ಇಬ್ಬರ ಸಿದ್ಧಾಂತಗಳೇ ಬೇರೆ, ಆಡಳಿತ ಕೂಡ ಬೇರೆಯಾಗಿರುವಾಗ ಈ ಮದುವೆ ಹೇಗೆ ಸಾಧ್ಯ ಎಂಬ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ 19 ವರ್ಷದ ಬ್ಯಾರನ್ ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ಅವರ ಹದಿಹರೆಯದ ಪುತ್ರಿ ಕಿಮ್ ಜು ಏ ನಡುವೆ ಸಂಬಂಧವಿದೆ ಎಂಬಂತೆ ಬಿಂಬಿಸುವ ಮೀಮ್‌ಗಳು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿವೆ. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ. ಇನ್ನು ಇಸ್ರೇಲ್​​ ಹಾಗೂ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಈ ಕಾರಣಕ್ಕೆ ಉತ್ತರ ಕೊರಿಯಾ ನಮಗೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಟ್ರಂಪ್​​ ಈ ಸಂಬಂಧ ಬೆಳೆಸಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

ಟ್ರಂಪ್ ಮತ್ತು ಕಿಮ್ ಜೊಂಗ್ ಉನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ, ನೆಟ್ಟಿಗರು ಈಗ ಅವರ ಮಕ್ಕಳನ್ನು ಇಟ್ಟುಕೊಂಡು “ರೋಮಿಯೋ-ಜೂಲಿಯೆಟ್” ಮಾದರಿಯ ಮೀಮ್‌ಗಳನ್ನು ತಯಾರಿಸುತ್ತಿದ್ದಾರೆ. ಎಐ (AI) ಮೂಲಕ ಸೃಷ್ಟಿಸಲಾದ ಚಿತ್ರಗಳಲ್ಲಿ ಬ್ಯಾರನ್ ಮತ್ತು ಕಿಮ್ ಜು ಏ ಒಟ್ಟಿಗೆ ಇರುವುದನ್ನು ತೋರಿಸಲಾಗುತ್ತಿದೆ. “ಜಗತ್ತಿನ ಎರಡು ಬದ್ಧ ವೈರಿ ರಾಷ್ಟ್ರಗಳನ್ನು ಈ ಪ್ರೇಮಕಥೆ ಒಂದು ಮಾಡಬಹುದು” ಎಂಬ ಹಾಸ್ಯದ ಸಾಲುಗಳೊಂದಿಗೆ ಈ ಚಿತ್ರಗಳು ಹಂಚಿಕೆಯಾಗುತ್ತಿವೆ.

ಇದನ್ನೂ ಓದಿ: ನನ್ನ ಬಳಿ ಅತ್ಯಾಧುನಿಕ ಕ್ಷಿಪಣಿಗಳು ಇದ್ರೂ ಯಾರೂ ಯುದ್ಧಕ್ಕೆ ಕರೆಯುತ್ತಿಲ್ಲವಲ್ಲ: ಟ್ರಂಪ್​ ಮಾಮ ಪ್ಲೀಸ್​​ ಒನ್ ಚಾನ್ಸ್​​​​​

ಇಲ್ಲಿದೆ ನೋಡಿ ವೈರಲ್​ ಪೋಸ್ಟ್:

ಎಕ್ಸ್ (X), ಇನ್‌ಸ್ಟಾಗ್ರಾಮ್ ಮತ್ತು ರೆಡ್ಡಿಟ್‌ನಂತಹ ವೇದಿಕೆಗಳಲ್ಲಿ ಈ ಮೀಮ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ. ವಿಶೇಷವಾಗಿ ಇಬ್ಬರೂ ನಾಯಕರು ಇತ್ತೀಚೆಗೆ ರಾಜತಾಂತ್ರಿಕವಾಗಿ ಚರ್ಚೆಯಲ್ಲಿರುವುದರಿಂದ ಈ ಮೀಮ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಇದು ಕೇವಲ ಇಂಟರ್ನೆಟ್ ಬಳಕೆದಾರರ ಕಲ್ಪನೆ ಮತ್ತು ತಮಾಷೆಯಷ್ಟೇ. ಬ್ಯಾರನ್ ಟ್ರಂಪ್ ಸದ್ಯ ಅಮೆರಿಕದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರೆ, ಕಿಮ್ ಜು ಏ ಉತ್ತರ ಕೊರಿಯಾದಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾಗಿ ಸಿದ್ಧಗೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಯಾವುದೇ ರೀತಿಯ ವೈಯಕ್ತಿಕ ಪರಿಚಯ ಅಥವಾ ಸಂಬಂಧವಿಲ್ಲ ಎಂಬುದು ಸ್ಪಷ್ಟ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us