
Viral Video : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಫುಲ್ ಹೆಲ್ಮೆಟ್ಗಳನ್ನು ಧರಿಸುವುದರಿಂದ ಶೇ. 64ರಷ್ಟು ತೀವ್ರ ಗಾಯಗಳಿಂದಾಗುವ ಮರಣ ಮತ್ತು ಶೇ. 74 ರಷ್ಟು ಮೆದುಳಿಗೆ ಆಗುವ ಗಾಯಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಇಲ್ಲಿ ಪ್ರಸ್ತುಪಡಿಸುತ್ತಿರುವುದರ ಹಿನ್ನೆಲೆ, ಇಲ್ಲಿರುವ ವಿಡಿಯೋ ನೋಡಿದ ಮೇಲೆ ತಿಳಿಯುತ್ತದೆ. ದೆಹಲಿ ಪೊಲೀಸರು ಟ್ವೀಟ್ ಮಾಡಿರುವ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾರು ಮತ್ತು ಬೀದಿದೀಪದ ನಡುವೆ ರಭಸದಿಂದ ಹಾಯ್ದು ಹೋಗುವ ಬೈಕ್ ಸವಾರನೊಬ್ಬ ಅಪಘಾತಕ್ಕೆ ಈಡಾಗುತ್ತಾನೆ. ಕ್ಷಣ ಮಾತ್ರದಲ್ಲಿ ಎರಡು ಸಲ ಅಪಘಾತಕ್ಕೆ ಒಳಗಾದರೂ ಬದುಕುಳಿಯುತ್ತಾನೆ!
ಹೆಲ್ಮೆಟ್ ಧರಿಸುವುದರಿಂದ ಒಮ್ಮೆ, ಎರಡು, ಮೂರು ಮತ್ತು ಅನೇಕ ಬಾರಿ ಜೀವ ಉಳಿಸಿಕೊಳ್ಳಬಹುದಾಗಿದೆ ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ. 15 ಸೆಕೆಂಡ್ಗಳ ಈ ವಿಡಿಯೋದಲ್ಲಿ, ಕಾರಿನಿಂದ ತಪ್ಪಿಸಿಕೊಂಡು ಹೋದ ಬೈಕ್ ಸವಾರ ಮೊದಲು ಡಿವೈಡರ್ಗೆ ಅಪ್ಪಳಿಸುತ್ತಾನೆ. ನಂತರ ಎದ್ದೇಳುತ್ತಿದ್ದಂತೆ ಬೀದಿದೀಪ ನೇರ ಅವನ ತಲೆಗೇ ಅಪ್ಪಳಿಸುತ್ತದೆ. ಹೀಗೆ ಕ್ಷಣಾರ್ಧದಲ್ಲಿ ತಲೆಗೆ ಬಲವಾಗಿ ಎರಡು ಹೊಡೆತಗಳು ಬಿದ್ದರೂ ಈತ ಬದುಕುಳಿಯುತ್ತಾನೆ ಎಂದರೆ ಅದು ಅವನು ಧರಿಸಿದ ಫುಲ್ ಹೆಲ್ಮೆಟ್ನಿಂದಾಗಿ.
ಈ ವಿಡಿಯೋ ಅನ್ನು 9 ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 33,000ಕ್ಕೂ ಹೆಚ್ಚು ಲೈಕ್ಸ್ ಮತ್ತು 6,000ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ.
ನೆನಪಿರಲಿ ಫುಲ್ ಹೆಲ್ಮೆಟ್ ಧರಿಸುವುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:45 pm, Fri, 16 September 22