
ಕೈಯಲ್ಲೊಂದು ಉದ್ಯೋಗವಿದ್ರೆ (job) ಮರ್ಯಾದೆ. ಕೆಲಸದಿಂದ ತೆಗೆದು ಹಾಕಿದ್ರೆ ಅದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ.. ಇದೀಗ ಉದ್ಯೋಗಿಯೊಬ್ಬರು ತನ್ನನ್ನೂ ಕೆಲಸ ಹಾಕಿದ್ದ ಬಾಸ್ ಗೆ ಉದ್ಯೋಗದ ಆಫರ್ ನೀಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಹೌದು, ಎರಡು ವರ್ಷಗಳ ಹಿಂದೆಯಷ್ಟೇ ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದ ಬಾಸ್‌ಗೆ ಶೇ 20ರಷ್ಟು ಸಂಬಳ ಹೆಚ್ಚಳ ಜತೆಗೆ ಉತ್ತಮ ಟೈಮಿಂಗ್ಸ್ ಇರುವ ಜಾಬ್ ನೀಡಲು ಮುಂದಾಗಿದ್ದಾರೆ. ಉನ್ನತ ಸ್ಥಾನಕ್ಕೇರಿದ ವ್ಯಕ್ತಿ ಆಫರ್ ನೀಡಿದ್ದು, ಮಾಜಿ ಬಾಸ್‌ನ್ನು ಗೊಂದಲಕ್ಕೀಡು ಮಾಡಿದೆ. ಸದ್ಯ ಈ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಕೆರಿಯರ್ ಗೈಡೆನ್ಸ್ (Careerguidence) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿ ಪೋಸ್ಟ್ ಹಂಚಿಕೊಂಡಿದ್ದು, ಎರಡು ವರ್ಷಗಳ ಹಿಂದೆ ನಾನು ಕೆಲಸದಿಂದ ತೆಗೆದುಹಾಕಿದ್ದ ವ್ಯಕ್ತಿಯೇ ಇದೀಗ ನನಗೆ ಜಾಬ್ ಆಫರ್ ನೀಡಿದ್ದಾರೆ. ನನ್ನ ಜಾಗದಲ್ಲಿ ನೀವಿದ್ದರೆ ಈ ಕೆಲಸವನ್ನು ಒಪ್ಪಿಕೊಳ್ಳುತ್ತಿದ್ದಿರಾ? ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗೋದಾಮಿನ ತಂಡವೊಂದರ ಮೇಲ್ವಿಚಾರಕರಾಗಿದ್ದೆ. ಆ ಟೀಮ್ ನಲ್ಲಿದ್ದ ಉದ್ಯೋಗಿ ಪದೇ ಪದೇ ಹಾಜರಾತಿ ಸಮಸ್ಯೆ ಉಂಟುಮಾಡುತ್ತಿದ್ದ ಕಾರಣ, ಹೆಚ್‌ಆರ್ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದ್ದರು. ಮೇಲ್ವಿಚಾರಕರಾಗಿ ನಾನು ಉದ್ಯೋಗಿಗೆ ವಿಚಾರ ತಿಳಿಸಿದ್ದೆ. ನನಗೆ ಉದ್ಯೋಗಿಯ ಬಗ್ಗೆ ಯಾವುದೇ ದ್ವೇಷವಿರಲಿಲ್ಲ. ಆದರೆ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ನಾನು ಉತ್ಪಾದನಾ ಕಂಪನಿಯೊಂದರಲ್ಲಿ ಆಪರೇಷನ್ಸ್ ವಿಭಾಗದ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದೆ. ಇಂಟರ್ವ್ಯೂ ರೂಮ್ ಗೆ ಎಂಟ್ರಿ ಕೊಡುತ್ತಿದ್ದಂತೆ ಮೇಜಿನ ಮುಂದೆ ಕುಳಿತಿದ್ದ ವ್ಯಕ್ತಿ ಎರಡು ವರ್ಷಗಳ ಹಿಂದೆ ನಾನೇ ವಜಾ ಮಾಡಿದ್ದ ಉದ್ಯೋಗಿಯಾಗಿದ್ದು, ನನ್ನ ಬಗ್ಗೆ ಅವರಿಗೆ ಯಾವುದೇ ಅಸಮಾಧಾನವಾಗಲಿ, ದ್ವೇಷವಾಗಲಿ ಇರಲಿಲ್ಲ. ನನಗೆ ಒಳ್ಳೆಯ ಹುದ್ದೆಯ ಆಫರ್ ನೀಡಿದ್ದಾರೆ. ಈ ಜಾಬ್ ನಲ್ಲಿ ಕೆಲಸದಲ್ಲಿ ಈಗಿರುವ ವೇತನಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಉತ್ತಮ ಕೆಲಸದ ಸಮಯವೂ ಇರಲಿದೆ ಎಂದು ಹೇಳಿದ್ದಾರೆ.
ಅಂದಿನ ನನ್ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನನ್ನನ್ನು ಜಾಬ್ ನಿಂದ ತೆಗೆದುಹಾಕುವಾಗ ನೀವು ತೋರಿದ ವೃತ್ತಿಪರತೆ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ರೀತಿಯನ್ನು ನಾನು ಗೌರವ ನೀಡುತ್ತೇನೆ ಎಂದು ಸಂದರ್ಶನಕ್ಕೆ ಹೋಗಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕೆಲಸಕ್ಕೆ ಸೇರಿಕೊಳ್ಳುವ ಬಗ್ಗೆ ನಾನು ಗೊಂದಲದಲ್ಲಿದ್ದೇನೆ. ಆದರೆ, ನನ್ನ ಪತ್ನಿಯೇ ನನ್ನನ್ನು ‘ಹುಚ್ಚ’ ಎನ್ನುತ್ತಿದ್ದಾಳೆ. ಆದರೆ ನನಗೆ ಕೆಲಸಕೊಡಲು ಸಿದ್ಧವಿರುವ ಮಾಜಿ ಉದ್ಯೋಗಿ ಹಳೆಯ ಘಟನೆಯನ್ನು ಮರೆತು ಬಿಟ್ಟಿದ್ದಾನಾ ಅಥವಾ ಆ ಘಟನೆ ನನಗೆ ಮುಜುಗರ ಪರಿಸ್ಥಿತಿ ಉಂಟು ಮಾಡುತ್ತದೆಯೋ ಎನ್ನುವ ಭಯ ಕಾಡುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕಾರ್ಪೊರೇಟ್ ಜಾಬ್ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ
ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ಆ ವ್ಯಕ್ತಿಯ ನಡವಳಿಕೆಯ ಬಗ್ಗೆ ನಂಬಿಕೆಯಿದ್ದರೆ ಜಾಬ್ ಆಫರ್ ನ್ನು ಒಪ್ಪಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ಇಷ್ಟು ಸಮಯ ಕಾಯಬೇಕಿರಲಿಲ್ಲ. ಪ್ರಬುದ್ಧತೆಯಿಂದ ಯೋಚಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ