Viral Video : ಮದುವೆ ಎಂದಮೇಲೆ ಕೇಳಬೇಕೆ? ಸಿಂಗಾರ, ಅಲಂಕಾರ, ತಮಾಷೆ, ನಗು, ಸಣ್ಣ ಆತಂಕ, ಭಾರೀ ನಿರೀಕ್ಷೆ ಹೀಗೆ ಇನ್ನೂ ಏನೇನೋ. ಸಂಗೀತ, ನೃತ್ಯದ ಮೆಹಫಿಲು, ಕುಣಿ, ಕುಣಿಸು, ಕುಪ್ಪಳಿಸಿ ಖುಷಿ ಪಡು, ಪಡಿಸು ಮತ್ತೂ ಏನೇನೋ. ಕೊನೆಗೆ ಕಣ್ಣುತುಂಬಿಕೊಂಡ ವಧು ಗಂಡನ ಮನೆಗೆ ಹೋಗುವುದು, ಅತ್ತ ಗಂಡನ ಮನೆಯವರು ಖುಷಿಯಿಂದ ಸ್ವಾಗತಿಸುವುದು. ಸಾಮಾನ್ಯವಾಗಿ ಮದುವೆಯ ದಿನ ವಾತಾವರಣ ಹೀಗಿರುತ್ತದೆ. ಇಲ್ಲೊಂದು ಮದುವೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ತನ್ನ ಅಜ್ಜನೊಂದಿಗೆ ನರ್ತಿಸುತ್ತಿದ್ದಾಳೆ.
ಈ ವಿಡಿಯೋ ಅನ್ನು ಈತನಕ 9.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಯೂ ಆರ್ ಮೈ ಸನ್ ಶೈನ್ ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಹಣ್ಣುಹಣ್ಣಾದ ಅಜ್ಜ, ಮೊಮ್ಮಗಳ ತೆಕ್ಕೆಗೆ ಮಗುವಿನಂತೆ ಅಪ್ಪಿಕೊಂಡಿದ್ದಾರೆ. ಐದೂವರೆ ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಅನ್ನು ಇಷ್ಟಪಟ್ಟಿದ್ದಾರೆ. ಎಂಥ ಭಾವಪೂರ್ಣ ಸನ್ನಿವೇಶವಿದು ಎಂದು ನೆಟ್ಟಿಗರು ಮಿಡಿದಿದ್ದಾರೆ. ಧನ್ಯವಾದ ನಿಮಗೆ, ಹೀಗೆ ನೀವು ಅವರನ್ನು ನೃತ್ಯಕ್ಕೆ ಆಹ್ವಾನಿಸಿದ್ದಕ್ಕೆ ಎಂದಿದ್ದಾರೆ ಮತ್ತೂ ಒಬ್ಬರು. ಭಾವಪೂರ್ಣ ಗಳಿಗೆಗಳು ಹೀಗೇ. ಎಲ್ಲರ ಕಣ್ಣಂಚನ್ನೂ ತೋಯಿಸಿಬಿಡುತ್ತವೆ. ಸಂಬಂಧಗಳ ಬಂಧ ಸದಾ ಹೀಗೆಯೇ.
ಏನೆನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ