Viral Video: ವಾಟ್​ ಝುಮ್ಕಾ: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಹಾಡಿಗೆ ವಧುವಿನ ಡ್ಯಾನ್ಸ್

|

Updated on: Aug 17, 2023 | 6:23 PM

Bollywood : ನಿನ್ನೆಯಷ್ಟೇ ನೆಟ್ಟಿಗರ ಪ್ರೀತಿಯ ದಾದೀಮಾ ಈ ಹಾಡಿಗೆ ಹೆಜ್ಜೆ ಹಾಕಿ ನೆಟ್ಟಿಗರ ಮನಸ್ಸನ್ನು ಅರಳಿಸಿದ್ದರು. ಇದೀಗ ವಧುವೊಬ್ಬಳು ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದ್ದಾಳೆ. ವಾಟ್​ ಝುಮ್ಕಾ ಹಾಡಿಗೆ ಅಲಿಯಾ ಭಟ್​ ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದು ಇದೀಗ ಇದು ಟ್ರೆಂಡಿಂಗ್​ನಲ್ಲಿದೆ. ನೆಟ್ಟಿಗರಂತೂ ಈ ನೃತ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

Viral Video: ವಾಟ್​ ಝುಮ್ಕಾ: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಹಾಡಿಗೆ ವಧುವಿನ ಡ್ಯಾನ್ಸ್
ವಾಟ್​ ಝುಮ್ಕಾ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಧು
Follow us on

Aliya Bhat: ರಣವೀರ್ ಸಿಂಗ್ ಮತ್ತು ಅಲಿಯಾ ಭಟ್​ ನಟಿಸಿದ ವಾಟ್​ ಝುಮ್ಕಾ ಹಾಡಿಗೆ ವಧುವೊಬ್ಬಳು ತನ್ನ ಗೆಳತಿಯರೊಂದಿಗೆ ನರ್ತಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇವರ ನೃತ್ಯಕೌಶಲವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ (Rocky Aur Rani Ki Prem Kahani) ಚಿತ್ರದ ಈ ಗೀತೆ ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ನಿನ್ನೆಯಷ್ಟೇ 65 ವರ್ಷದ ರವಿ ಬಾಲಾ ಶರ್ಮಾ ಇದೇ ಗೀತೆಗೆ ನರ್ತಿಸಿ ನೆಟ್ಟಿಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದೀಗ ಈ ರೀಲಿನಲ್ಲಿ ವಧು ಮತ್ತವಳ ಸ್ನೇಹಿತೆಯರು ಖುಷಿಯಿಂದ ನರ್ತಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ : Viral Video: ಈ ಬಾರ್ಬಿ ಭಾರತದ ಬಡಕುಟುಂಬದಲ್ಲಿ ಜನಿಸಿದಾಕೆ, ಏನೀಗ? ಭಾವುಕರಾದ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಪೇಜ್​ ಒನ್​ ಕಹಾನಿ ಎಂಬ ಇನ್​ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. ಆರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಲಕ್ಷ ಜನರು ನೋಡಿದ್ದಾರೆ. 8,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ವಾಟ್​ ಝುಮ್ಕಾ ಹಾಡಿಗೆ ವಧುವಿನ ನೃತ್ಯ

ಈ ವಿಡಿಯೋ ನೋಡುತ್ತಿದ್ದರೆ, ನನ್ನ ಫ್ರೆಂಡ್​ ಮದುವೆಯಲ್ಲಿ ನಾನೂ ಹೀಗೆಯೇ ಡ್ಯಾನ್ಸ್ ಮಾಡಬೇಕು ಎಂದೆನ್ನಿಸುತ್ತಿದೆ. ನಿಜಕ್ಕೂ ಈ ವಿಡಿಯೋ ಸ್ಫೂರ್ತಿ ಕೊಡುತ್ತಿದೆ ಎಂದಿದ್ದಾರೆ ಒಬ್ಬರು. ನನ್ನ ಮದುವೆಯ ಮೊದಲೇ ಈ ವಿಡಿಯೋ ನೋಡಿದ್ದರೆ ನಾನೂ ಹೀಗೆ ನರ್ತಿಸಬಹುದಿತ್ತು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಜೈಲರ್; ಕೊರಿಯನ್​ ಕಾವಾಲಾ ರೀಲ್ 15 ಮಿಲಿಯನ್ ವೀಕ್ಷಣೆ

ಸದ್ಯಕ್ಕೆ ರಜಿನಿಕಾಂತ್ ಮತ್ತು ತಮನ್ನಾ ಅಭಿನಯದ ಜೈಲರ್ ಸಿನೆಮಾದ ಕಾವಾಲಾ ಮತ್ತು ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿಯ ವಾಟ್​ ಝುಮ್ಕಾ ಹಾಡುಗಳು ಟ್ರೆಂಡಿಂಗ್​ನಲ್ಲಿವೆ. ಯಾರೆಲ್ಲ ಹೇಗೆ ಈ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನುವುದನ್ನು ನೆಟ್ಟಿಗರು ಕುತೂಹಲದಿಂದ ಗಮನಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ